ಕರಾವಳಿ

ಸಿದ್ಧರಾಮಯ್ಯ ಅವರಿಗೆ ಭ್ರಷ್ಟಾಚಾರ ಆರೋಪ ಮೆಡಲ್ ಇದ್ದಂತೆ: ಅಮಿತ್ ಶಾ

Pinterest LinkedIn Tumblr

ಉಡುಪಿ : ಮಲ್ಪೆಯಲ್ಲಿಆಯೋಜಿಸಲಾದ ಮೀನುಗಾರರ ಸಮಾವೇಶದಲ್ಲಿ ಯಡಿಯೂರಪ್ಪ ಅವರನ್ನು ಕರ್ನಾಟಕದ ಭಾವಿ‌‌ಮುಖ್ಯಮಂತ್ರಿ ಎಂದು ಸಂಬೋಧಿಸಿ ಭಾಷಣ ಪ್ರಾರಂಭಿಸಿದ ಅಮಿತ್ ಶಾ. ಕರ್ನಾಟಕದಲ್ಲಿ ಸರಕಾರ ಬದಲಾಗುವ ಲಕ್ಷಣಗಳನ್ನು ಕಂಡಿದ್ದೇನೆ. ಇಲ್ಲಿ ಸೇರಿದ ‌ಜನಸಾಗರ ಅದನ್ನು ದೃಢಪಡಿಸಿದೆ ಎಂದರು.

ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು‌‌ ಕಾಂಗ್ರೆಸ್ ಭ್ರಷ್ಟಾಚಾರ ನಿರತರಾಗಿದ್ದಾರೆ. ಭ್ರಷ್ಟಾಚಾರ ಆರೋಪವಾದರೆ ಅದನ್ನು ಮೆಡಲ್ನಂತೆ ಸಿದ್ಧರಾಮಯ್ಯ ಸಂಭ್ರಮಿಸುತ್ತಿದ್ದಾರೆ. ಕರ್ನಾಟಕದ ಸರಕಾರ ರಾಜ್ಯದ ವಿಕಾಸ ಮಾಡಲು‌ ವಿಫಲವಾಗಿದೆ.

ಮೋದಿ ಸರಕಾರ ಇಂದು ಕೇಂದ್ರದಲ್ಲಿ ಉತ್ತಮ ಆಡಳಿತ ‌ನಡೆಸಲು ಕರ್ನಾಟಕದ ಜನತೆಯ ಸಹಯೋಗವಿದೆ. ಮೋದಿ ಸರಕಾರ ಉತ್ತಮ‌ ಆಡಳಿತ ನೀಡತ್ತಾ , 111 ಹೊಸ ಯೋಜನೆಗಳು ಬಡವರ ಕಲ್ಯಾಣಕ್ಕಾಗಿ ರೂಪಿಸಲಾಗಿದೆ. 10 ಕೋಟಿ ಮೀನುಗಾರಿಕೆ ಪರಿವಾರಕ್ಕೂ ಸೇರಿದಂತೆ ಎಲ್ಲ ವರ್ಗದವರಿಗೆ ಆರೋಗ್ಯದ ರಕ್ಷಣೆಗೆ ನೀಡಿದೆ. ಉಜ್ವಲ್ ಯೋಜನೆಯ ಮೂಲಕ ಗ್ಯಾಸ್ ನೀಡಲಾಗುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಮಾತ್ರ ಸಿಗುತ್ತಿತ್ತು ಆದರೆ ‌ಮೋದಿಯವರು ಅದನ್ನು ಮೀನುಗಾರರಿಗೂ ವಿಸ್ತರಿಸಿದ್ದಾರೆ,ಇದರಿಂದ 15 ಸಾವಿರ ಸಾಲ‌ಪಡೆಯುವ ಅವಕಾಶ ಆವಶ್ಯಕತೆ ಇರುವವರಿಗೆ ಸಿಕ್ಕಿದೆ ಎಂದರು.

ದುಬಾರಿ 40 ಲಕ್ಷದ ವಾಚ್ ಧರಿಸಿ ಭ್ರಷ್ಟಾಚಾರ ಮಾಡುತ್ತಾ ಆಡಳಿತ ನಡೆಸಿದ್ದಾರೆ. ಬೆಂಗಳೂರಿನಂತರ ನಗರದಲ್ಲಿ ಇಂದು‌‌ ಕೂಡ ಬಡವರು ಬಡವರಾಗಿಯೇ ಉಳಿಯುವಂತೆ‌ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ವಿಕಾಸ ಮಾಡುವಲ್ಲಿ ವಿಫಲವಾಗಿದೆ, ಅಂತಹ ಸರಕಾರ ವನ್ನು ಕಿತ್ತೇಸೆಯಿರಿ. ಸಿದ್ಧರಾಮಯ್ಯ ನಿಮ್ಮ‌ಕಾಲ ಮುಗಿತು, ಇನ್ನು ಮುಂದೆ ಯಡಿಯೂರಪ್ಪ ಬಿಜೆಪಿಯ ಸರಕಾರ ಏಪ್ರಿಲ್ ನಂತರ ಬರಲಿದೆ. ಆ ಬಳಿಕ ೨೦೩೪ ರವರೆಗೆ ಬಡವರಿಗೆ ಮನೆ ನೀಡುವ ಕಾರ್ಯ ಪೂರ್ಣಗೊಳಿಸಲಿದೆ ಎಂದರು.

Comments are closed.