ಕರಾವಳಿ

ತಣ್ಣೀರುಬಾವಿ ಶಿವರಾಜ್ ಹತ್ಯೆ ಪ್ರಕರಣ : ಮತ್ತೆ ಮೂವರ ಸೆರೆ – ಬಂಧಿತರ ಸಂಖ್ಯೆ ಹತ್ತಕ್ಕೇರಿಕೆ

Pinterest LinkedIn Tumblr

ಮಂಗಳೂರು, ಫೆಬ್ರವರಿ. 20: ತಣ್ಣೀರುಬಾವಿಯ ಬೆಂಗ್ರೆಯಲ್ಲಿ ಇತ್ತೀಚಿಗೆ ( ಜ.22ರಂದು) ನಡೆದ ಶಿವರಾಜ್ ಕರ್ಕೇರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪದಲ್ಲಿ ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳಾದ ಬೆಂಗ್ರೆ ಗ್ರಾಮದ ವಿಕ್ರಮ್ ಯಾನೆ ವಿಕ್ರಮ್ ಅಮೀನ್ ಯಾನೆ ವಿಕ್ಕಿ (25), ಕುದ್ರೋಳಿ ಬೆಂಗರೆಯ ಅಜಯ್ (20) ಮತ್ತು ಬಿಜೈಯ ಸುಮನ್ ಯಾನೆ ಸುಮನ್ ಕೋಟ್ಯಾನ್ ಯಾನೆ ಬೊಗ್ಗು ಸುಮನ್ ( 19) ಎಂಬವರನ್ನು ಸೋಮವಾರ ಪಣಂಬೂರು ಪೊಲೀಸರು ಮತ್ತು ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳ ತಂಡ ಬಂಧಿಸಿದೆ.

ತಣ್ಣೀರುಬಾವಿಯ ಬೆಂಗ್ರೆಯ ತನ್ನ ಮನೆಯ ಟೆರೆಸ್ ಮೇಲೆ ಮಲಗಿದ್ದ ಶಿವರಾಜ್ ಕರ್ಕೇರ ಅವರನ್ನು ಜ.22ರಂದು ಮುಂಜಾನೆ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಕಡಿದು ಹತ್ಯೆಗೈದು ಪರಾರಿಯಾಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದು, ಇದೀಗ ಬಂಧಿತರ ಸಂಖ್ಯೆ ಹತ್ತಕ್ಕೇರಿದೆ.

ನಗರ ಪೊಲೀಸ್ ಆಯುಕ್ತ ಟಿ. ಆರ್.ಸುರೇ ಅವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಾದ ಹನುಮಂತರಾಯ, ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ನೇತೃತ್ವದಲ್ಲಿ ಪಣಂಬೂರು ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಮ್, ಪಿ.ಎಸ್.ಐ ಎಂ.ಎನ್.ಉಮೇಶ್ ಕುಮಾರ್ ಹಾಗೂ ರೌಡಿ ನಿಗ್ರಹ ದಳದ ಅಧಿಕಾರಿ, ಸಿಬ್ಬಂದಿ ಮತ್ತು ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.