ಕರಾವಳಿ

ಶಾಸಕ ಲೋಬೋರಿಂದ ಕರಂಗಲ್ಪಾಡಿ ರಸ್ತೆಯ ಡ್ರೈನೇಜ್ ಕಾಮಗಾರಿಗೆ ಚಾಲನೆ – ಬೈರಾಡಿಕೆರೆ ಕಾಮಗಾರಿ ವೀಕ್ಷಣೆ

Pinterest LinkedIn Tumblr

ಮಂಗಳೂರು : ಬಹಳ ಸಮಯದಿಂದ ಕರಂಗಲ್ಪಾಡಿ ಮುಖ್ಯ ರಸ್ತೆಯಲ್ಲಿ ಡ್ರೈನೇಜ್ ನೀರು ರಸ್ತೆಗೆ ಹರಿದು ಬಂದು ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ರಸ್ತೆಯ ಬದಿಯಲ್ಲಿರುವ ಕಟ್ಟಡದಲ್ಲಿ ವ್ಯಾಪಾರಸ್ಥರಿಂದ ಶಾಸಕ .ಜೆ.ಆರ್.ಲೋಬೊರವರಿಗೆ ಮನವಿ ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಇದೀಗ ಈ ಡ್ರೈನೇಜ್ ಕಾಮಗಾರಿಯ ಗುದ್ದಲಿಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ.ಜೆ.ಆರ್.ಲೋಬೊ ಹಾಗೂ ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಶ್ರೀಮತಿ ಕವಿತಾ ಸನಿಲ್ ರವರು ನೆರವೇರಿಸಿದರು.

ಬಳಿಕ ಮಾತನಾಡಿದ ಶಾಸಕ ಲೋಬೊರವರು ಬಹಳ ಸಮಯದಿಂದ ಕರಂಗಲ್ಪಾಡಿ ಮುಖ್ಯ ರಸ್ತೆಯ ಡ್ರೈನೇಜ್ ಪೈಪುಗಳು ಒಡೆದು ಹೋಗಿದ್ದು, ಅದರ ನೀರು ರಸ್ತೆಗೆ ಹರಿದು ಜನರಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು. ಸರಕಾರದ ವಿಶೇಷ ಅನುದಾನ ಎಸ್.ಎಫ್.ಸಿ ನಿಧಿಯಿಂದ ರೂ.10ಲಕ್ಷ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಯು ಆರಂಭವಾಗಲಿದೆ. ಈ ಒಂದು ಕಾಮಗಾರಿ ಪೂರ್ಣಗೊಂಡರೆ ಸಾರ್ವಜನಿಕರಿಗೆ ಬಹಳಷ್ಟು ಪ್ರಯೋಜನಕಾರಿಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಕದ್ರಿ ದೇವಸ್ಥಾನದ ಟ್ರಸ್ಟಿ ಸುರೇಶ್ ಕುಮಾರ್, ಕದ್ರಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೀರಜ್ ಪಾಲ್, ಅರುಣಾ, ಗಿರೀಶ್ ಕಾರಂತ, ವಿಜಯಾ ಲೋಬೊ, ಯಶವಂತ, ಹರ್ಷಕುಮಾರ್, ನಾಗೇಶ್, ಪಾಲಿಕೆಯ ಇಂಜಿನಿಯರ್ ದೇವರಾಜ್, ನಿತ್ಯಾನಂದ, ಗುತ್ತಿಗೆದಾರ ರಜಾಕ್ ಮೊದಲಾದವರು ಉಪಸ್ಥಿತರಿದ್ದರು.

ಬೈರಾಡಿಕೆರೆ ಕಾಮಗಾರಿ ವೀಕ್ಷಿಸಿದ ಶಾಸಕ ಲೋಬೊ 

ಕೆರೆಗಳನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ವಿಶೇಷವಾದ ಗಮನ ಹರಿಸಿದೆ. ಹಲವಾರು ಕೆರೆಗಳ ಹೂಳೆತ್ತುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಮಂಗಳೂರಿನಲ್ಲಿ ಈಗಾಗಲೇ ಶಾಸಕ ಜೆ.ಆರ್.ಲೋಬೊರವರು ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿ ಕಾಮಗಾರಿಗಳ ಚಾಲನೆ ಈಗಾಗಲೇ ಚಾಲ್ತಿಯಲ್ಲಿದೆ.

ಅದರಲ್ಲಿ ಪಡೀಲ್ ನಲ್ಲಿರುವ ಬೈರಾಡಿ ಕೆರೆ ಈಗಾಗಲೇ ಅವರ ಕಾರ್ಯ ಆರಂಭವಾಗಿದ್ದು, ಶಾಸಕ ಲೋಬೊರವರು ಕಾಮಗಾರಿ ಸ್ಥಳಕ್ಕೆ ಆಗಮಿಸಿ ಕೆಲಸ ವೀಕ್ಷಿಸಿದರು.

ತದನಂತರ ಮಾತನಾಡಿದ ಅವರು, ಬೈರಾಡಿ ಕೆರೆ ನಗರದ ಪುರಾತನ ಕೆರೆಗಳಲ್ಲಿ ಒಂದು. ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ರೂ.80ಲಕ್ಷ ಹಾಗೂ ಮೂಡ ವತಿಯಿಂದ ರೂ.2.20 ಕೊಟಿ ಮಂಜೂರಾತಿಯಾಗಿದೆ. ನೀರಾವರಿ ಇಲಾಖೆಯಿಂದ ಕೆರೆಯನ್ನು ಸಂರಕ್ಷಣೆಗೊಳಿಸುವ ನಿಟ್ಟಿನಲ್ಲಿ ತಡೆಗೋಡೆಯ ಕೆಲಸ ಕಾರ್ಯ ಪ್ರಾರಂಭವಾಗಿದೆ.

ಮೂಡ ವತಿಯಿಂದ ಕೆರೆಯ ಅಭಿವೃದ್ಧಿ ಕಾರ್ಯವು ನಡೆಯಲಿದ್ದು, ಅದರಲ್ಲಿ ಕೆರೆಯ ಬದಿಯಲ್ಲಿ ಉದ್ಯಾನವನ, ಸಾರ್ವಜನಿಕರಿಗೆ ನಡೆದಾಡಲು ವಾಕಿಂಗ್ ಟ್ರ್ಯಾಕ್ ಹಾಗೂ ಲೈಟ್ ಗಳನ್ನು ಅಳವಡಿಸಲಾಗುವುದು. ಜನರಿಗೆ ಆರೋಗ್ಯ ದೃಷ್ಠಿಯಿಂದಲೂ ಕೂಡ ಈ ಕೆರೆಯು ಸಹಾಯಕವಾಗಬಲ್ಲುದು. ಒಟ್ಟಾರೆಯಾಗಿ ಕೆರೆಗಳ ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಫೊರೇಟರ್ ಪ್ರಕಾಶ್ ಬಿ ಸಾಲಿಯಾನ್, ಭೂ ನ್ಯಾಯ ಮಂಡಳಿ ಡೆನ್ನಿಸ್ ಡಿಸಿಲ್ವ, ಕೆ.ಎಸ್.ಆರ್.ಟಿ.ಸಿ ನಿರ್ದೇಶಕ ಟಿ.ಕೆ.ಸುಧೀರ್, ರಮಾನಂದ ಪೂಜಾರಿ, ಕೃತಿನ್ ಕುಮಾರ್, ಸಣ್ಣ ನೀರಾವರಿ ಇಂಜಿನಿಯರ್ ಶೇಷ ಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Comments are closed.