ಉಡುಪಿ: ಉಡುಪಿಯ ಕಟಪಾಡಿ ಸಮೀಪದ ನಡೆದ ಕೊಲೆ ಪ್ರಕರಣ ,ಇನ್ನೂ ಕೂಡಾ ನಿಗೂಡವಾಗಿ ಉಳಿದಿದೆ. ಕಳೆದ ಅದಿತ್ಯವಾರದಂದು ಉತ್ತರ ಕರ್ನಾಟಕ ಮೂಲದ ವ್ಯಕ್ತಿಯನ್ನ ಹಾರೆಯಿಂದ ತಲೆಗೆ ಹೊಡೆದು ಕೊಲೆಮಾಡಲಾಗಿತ್ತು.

ಮುಂಜಾನೆ ಹೊತ್ತಲ್ಲಿ ವಾಯುವಿಹಾರಕ್ಕೆ ಅಗಮಿಸಿದ್ದ ಸ್ಥಳೀಯರು ಮರಳಿನ ರಾಶಿ ಮೇಲೆ, ರಕ್ತಸಿಕ್ತವಾಗಿ ಬಿದ್ದಿದ್ದ ಮೃತ ದೇಹವನ್ನು ಕಂಡು ಪೊಲೀಸರಿಗೆ ಸುದ್ದಿಮುಟ್ಟಿಸಿದ್ದರು. ಪ್ರಕರಣವನ್ನು ದಾಖಲಿಸಿಕೊಂಡಿರುವ ಕಾಪು ಪೊಲೀಸರಿಗೆ ಈವರೆಗೂ ಕೊಲೆಯಾದ ವ್ಯಕ್ತಿ ಯಾರೆಂಬುದೇ ಪತ್ತೆಹಚ್ಚಲು ಸಾದ್ಯವಾಗಿಲ್ಲ.
ಅಸುಪಾಸು ವಾಸಿಸುವ ವಲಸೆ ಕಾರ್ಮಿಕರಲ್ಲಿ ವಿಚಾರಣೆ ನಡೆಸಲಾಗಿದ್ದು ಈವರೆಗೂ ಮೃತ ಕಾರ್ಮಿಕನ ಗುರುತು ಪತ್ತೆ ಸಾಧ್ಯವಾಗಿಲ್ಲ. ಹೀಗಾಗಿ ಕೊಲೆ ನಡೆಸಿದ ಆರೋಪಿಗಳ ಜಾಡು ಹಿಡಿಯುವುದು ಪೊಲೀಸರಿಗೆ ಸವಾಲು ಎನಿಸಿದೆ.
ಕೊಲೆಯನ್ನು ಬೇರೆ ಎಲ್ಲಾದರೂ ಮಾಡಿ,ಮೃತ ದೇಹವನ್ನು ಈ ಭಾಗದಲ್ಲಿ ತಂದು ಹಾಕಿರಬಹುದೇ ಅನ್ನೋ ದೃಷ್ಟಿಯಿಂದಲೂ ತನಿಖೆ ನಡೆಸಲಾಗುತ್ತಿದೆ.
Comments are closed.