ಕರಾವಳಿ

ಫೋನ್ ಕಾಲ್ ಮಾಡಲು ಮೊಬೈಲ್ ಕೇಳಿ ಮೊಬೈಲ್ ಎಗರಿಸಿದ ಖದೀಮರು!

Pinterest LinkedIn Tumblr

ಉಡುಪಿ: ಫೋನ್ ಕರೆ ಮಾಡಲು ವ್ಯಕ್ತಿಯೋರ್ವರ ಬಳಿ ಮೊಬೈಲ್ ಪಡೆದ ಆರೋಪಿಗಳು ಮೊಬೈಲ್ ಎಗರಿಸಿ ಬೈಕಿನಲ್ಲಿ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ. ಕರುಣಾಕರ ಪೂಜಾರಿ (32) ಮೊಬೈಲ್ ಕಳೆದುಕೊಂಡ ವ್ಯಕ್ತಿ.

ಕರುಣಾಕರ್ ಪೂಜಾರಿ ಅವರು ಬೆಳ್ಮಣ್ ಬಸ್ಸು ನಿಲ್ದಾಣದ ಕಡೆ ನಡೆದುಕೊಂಡು ಹೋಗುತ್ತಿರುವಾಗ ಆರೋಪಿತರು ಮೋಟಾರ್ ಸೈಕಲಿನಲ್ಲಿ ಬಂದು ಬಳಿ ನಿಲ್ಲಿಸಿ ಕುಕ್ಕಿ ಕಟ್ಟೆ ಎಲ್ಲಿ ಎಂದು ಕೇಳಿ ಒಂದು ಪೋನ್ ಕಾಲ್ ಮಾಡಲು ಮೊಬೈಲ್ ಕೊಡಿ ಎಂದು ಕೇಳಿದ್ದರು. ಅದಕ್ಕೆ ಕರುಣಾಕರ ಪೂಜಾರಿ ಮೊಬೈಲ್ ಹಿಡಿದು ತಾನೇ ನಂಬರ್ ಡಯಲ್ ಮಾಡುತ್ತೇನೆ ಎಂದು ಮೊಬೈಲ್ ಹಿಡಿದು ಕೊಂಡಿರುವಾಗ ಆರೋಪಿತರು ಮೊಬೈಲ್ ಎಳೆದುಕೊಂಡು ಮೋಟಾರ್ ಸೈಕಲಿನಲ್ಲಿ ಪರಾರಿಯಾಗಿದ್ದಾರೆ.

ಮೊಬೈಲ್ ಮೈಕ್ರೋ ಮ್ಯಾಕ್ಸ್ ಕಂಪೆನಿಯದ್ದಾಗಿದ್ದು ಅದರಲ್ಲಿ ಸಿಮ್ ಇದ್ದು ಅದರ ಮೌಲ್ಯ 4000/- ರೂಪಾಯಿ ಆಗಿದೆ ಎನ್ನಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.