ಕರಾವಳಿ

ಚುನಾವಣೆಗೆ ಯಾರಿಂದಲೂ ಹಣ ಪಡೆದಿಲ್ಲ, ನನಗೆ ಟಾರ್ಗೆಟ್ ಭಯವಿಲ್ಲ: ಸಚಿವ ಪ್ರಮೋದ್

Pinterest LinkedIn Tumblr

ಉಡುಪಿ: ಮಲ್ಪೆ ಮತ್ಸ್ಯೋದ್ಯಮಿಗಳ ಮೇಲೆ ಐಟಿ ದಾಳಿ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲ್ಲ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಐಟಿ ದಳಿ ಪ್ರಮೋದ್ ಟಾರ್ಗೇಟ್ ಆಗಿದೆಯೇ ಎಂಬ ಪ್ರಶ್ನೆಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯೆ ನೀಡಿದ್ದು ಹೀಗೆ……

ಟಾರ್ಗೆಟ್ ಮಾಡುವರಿಗೆ ಹಾಗೂ ಯಾವುದೇ ಟಾರ್ಗೇಟಿಗೆ ನಾನು ಹೆದರಲ್ಲ, ನನ್ನನ್ನು ದೇವರು ಬಿಟ್ಟು ಬೇರೆ ಯಾರು ಟಾರ್ಗೆಟ್ ಮಾಡಲು ಸಾಧ್ಯವೂ ಇಲ್ಲ. ನಾನು ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವನಾಗಿದ್ದು ದೇಶದ ಕಾನೂನಿನಂತೆ ನಡೆದುಕೊಳ್ಳುವವ. ನಾನು ಚುನಾವಣೆಯಲ್ಲಿ ಯಾರಿಂದಲೂ ದುಡ್ಡು ಪಡೆಯುವನಲ್ಲ. ಹೀಗಾಗಿ ಟಾರ್ಗೆಟ್ ಗೆ ಹೆದರುವ ಅವಶ್ಯಕತೆಯಿಲ್ಲ ಎಂದರು.

ಕರಾವಳಿಯಲ್ಲಿ ‌ಅಮಿತ್ ಷಾ ಮೀನುಗಾರರ ಸಮಾವೇಶ ಕುರಿತು ಮಾತನಾಡಿದ ಸಚಿವ ಪ್ರಮೋದ್, ಚುನಾವಣೆ ಹತ್ತಿರ ಬಂದಾಗ ಅಮಿತ್ ಷಾ ಅವರಿಗೆ ಮೀನುಗಾರರು ಮತ್ತು‌ ಹಿಂದುಗಳ ನೆನಪಾಗುತ್ತೆ. ಆದರೇ ಇವರ ಆಟಕ್ಕೆ ಮಣೆ ಹಾಕಲು ಮೀನುಗಾರರು ಮುರ್ಖರಲ್ಲ. ಕೇಂದ್ರ ಸರ್ಕಾರ ಮೀನುಗಾರರಿಗೆ ಏನನ್ನೂ‌ ಕೊಟ್ಟಿಲ್ಲ. ಡಿಸೇಲ್ ಸಬ್ಸಿಡಿ ಹಾಗೂ ಸೀಮೆ ಎಣ್ಣೆಯನ್ನು ರಾಜ್ಯ ಸರ್ಕಾರ ನೀಡುತ್ತಿರುವಂತೆ, ಕೇಂದ್ರ ಸರ್ಕಾರ ವೂ ಕೊಡಲು ಯಾಕೆ ಮನಸ್ಸು ಮಾಡುತ್ತಿಲ್ಲ ಎಂದ ಅವರು ಮೀನುಗಾರರಿಗೆ ಏನು ಕಾರ್ಯಕ್ರಮ ಮಾಡಿದ್ದಾರೆಂದು ಕರಾವಳಿಯಲ್ಲಿ ಮೀನುಗಾರರ ಸಮಾವೇಶ ಮಾಡುತ್ತಿದ್ದಾರೆಂದು ಪ್ರಶ್ನಿಸಿದರು.

ಹಿಂದುತ್ವದಲ್ಲಿ ಹಾರ್ಡ್ ಹಾಗೂ ಸಾಫ್ಟ್ ಹಿಂದುತ್ವ ಅಂದ್ರೆ ಏನೆಂಬುದು ಗೊತ್ತಿಲ್ಲ. ಜನರನ್ನ ಕೊಲ್ಲೊದು ಹಿಂದುತ್ವ ಎನ್ನಲಾಗುತ್ತದೆಯೇ? ಹಾಗಾದರೇ ಕಾಂಗ್ರೆಸ್ ನವರು ಹಿಂದುಗಳಲ್ವಾ..? ನಾವು ದೇವಸ್ಥಾನಕ್ಕೆ ಹೋಗಲಿಕ್ಕಿಲ್ಲವೇ..? ಬಿಜೆಪಿಯವರು ಮಾತ್ರ ದೇವಸ್ಥಾನಕ್ಕೆ ಹೋಗಬೇಕಾ..? ಕಾಂಗ್ರೆಸ್ ನವರು ದೇವಸ್ಥಾನಕ್ಕೆ‌ಹೋಗಲು ನಿರ್ಭಂಧವಿದೆಯಾ..?ನಾವು ಅಸ್ಪಶ್ರ್ಯರಾ? ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ದೇವಸ್ಥಾನ ಭೇಟಿ ಇದೇ ಮೊದಲೇನಲ್ಲ. ಪ್ರತಿ ಚುನಾವಣೆ ಸಂದರ್ಭ ಸೋನಿಯ ಗಾಂಧಿ ತಮ್ಮ ನಾಮ ಪತ್ರ ಸಲ್ಲಿಸುವ ಮುನ್ನ ಗಣ ಹೋಮ ನಡೆಸುತ್ತಾರೆ ಎಂದು ಸಮರ್ಥನೆ ಮಾಡಿಕೊಂಡರು.

Comments are closed.