ಮಂಗಳೂರು, ಫೆಬ್ರವರಿ.8: ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್‌ನ ನಾಲ್ಕನೆ ವರ್ಷದ ಬಂಟ ಸಮಾಗಮ ಕಾರ್ಯಕ್ರಮ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಬುಧವಾರ ನಗರದ ಪುರಭವನದಲ್ಲಿ ನೆರವೇರಿತು.
ಸಮಾರಂಭದಲ್ಲಿ ಬಂಟ ಸಮುದಾಯದ ಸಾಧಕರಾದ ಭಾಸ್ಕರ ರೈ ಕುಕ್ಕುವಳ್ಳಿ,ಕದ್ರಿ ನವನೀತ ಶೆಟ್ಟಿ,ವಸಂತ ಶೆಟ್ಟಿ ,ಬಾಳ ಜಗನ್ನಾಥ ಶೆಟ್ಟಿ ಮೊದಲಾದವರನ್ನು ಸನ್ಮಾನಿಸಲಾಯಿತು. ಸತ್ಯನಾರಾಯಣ ಪೂಜೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಂಡಿತು. ಕಾರ್ಯಕ್ರಮದ ಆರಂಭಕ್ಕೂ ಮೊದಲು ಸಮುದಾಯದ ವಸತಿರಹಿತ ಕುಟುಂಬವಾಗಿದ್ದ ನಳಿನಿ ಶೆಟ್ಟಿಯವರಿಗೆ ದಾನಿಗಳ ಸಹಕಾರದೊಂದಿಗೆ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮನೆಯನ್ನು ಹಸ್ತಾಂತರಿಸಲಾಯಿತು.
ಬೆಳ್ಳಿಪ್ಪಾಡಿ ಸಂಕಪ್ಪ ರೈ ನಿಧನಕ್ಕೆ ಸಂತಾಪ:
ಜಿಲ್ಲಾ ಪರಿಷತ್ನ ಮಾಜಿ ಅಧ್ಯಕ್ಷ ಜಿಲ್ಲೆಯ ಹಿರಿಯ ರಾಜಕೀಯ ಧುರೀಣ ಬೆಳ್ಳಿಪ್ಪಾಡಿ ಬಂಟ ಮನೆತನದ ಹಿರಿಯರಾದ ಬೆಳ್ಳಿಪ್ಪಾಡಿ ಸಂಕಪ್ಪ ರೈ ನಿಧನರಾಗಿರುವುದಕ್ಕೆ ಸಭಾಂಗಣದಲ್ಲಿ ಮೌನ ಪ್ರಾರ್ಥನೆಯ ಮೂಲಕ ಸಂತಾಪ ಸೂಚಿಸಲಾಯಿತು.
ಮಾಜಿ ಸಚಿವ ಹಾಗೂ ಸಂಘಟನೆಯ ಕಾರ್ಯಾಧ್ಯಕ್ಷ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಸಮಾರಂಭದ ವೇದಿಕೆಯಲ್ಲಿ ಬಂಟ ಸಮುದಾಯದ ಹಿರಿಯ ರಾದ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ಎ.ಜೆ.ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ಸುರೇಶ್ ಚಂದ್ರ ಶೆಟ್ಟಿ, ಬಲರಾಜ ರೈ, ಜಯಶ್ರೀ ಅಮರನಾಥ ಶೆಟ್ಟಿ, ಮೈನಾ ಸದಾನಂದ ಶೆಟ್ಟಿ , ಸತೀಶ್ ಚಂದ್ರ ಶೆಟ್ಟಿ, ವೆಂಕಪ್ಪ ಕಾಜವ, ವಿಜಯಲಕ್ಮ್ಷಿ ಶೆಟ್ಟಿ, ಭಾಸ್ಕರ ಶೆಟ್ಟಿ, ಜಯ ಪ್ರಕಾಶ್ ರೈ ಸುಳ್ಯ, ಪಡು ಚಿತ್ತರಂಜನ್ ಶೆಟ್ಟಿ, ಪ್ರಮೋದ್ ಕುಮಾರ್ ರೈ, ಗುರು ಕಿರಣ್ ಶೆಟ್ಟಿ, ದಯಾನಂದ ಶೆಟ್ಟಿ ಪೂನಾ, ಕೊಡ್ಮಣ್ ರಾಮಚಂದ್ರ ಶೆಟ್ಟಿ, ಶ್ರೀಧರ ಶೆಟ್ಟಿ, ಎಂ.ಎಸ್.ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.