ಕರಾವಳಿ

ಮಲಗುವ ಭಂಗಿಯಿಂದ ಆರೋಗ್ಯ ಭಾಗ್ಯ

Pinterest LinkedIn Tumblr

ನಿದ್ದೆ ಎಂಬುದು ನಮಗೆ ಎಷ್ಟು ಅಗತ್ಯ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಯಾರೇ ಆಗಲಿ ನಿತ್ಯ ಅಗತ್ಯ ಇರುವಷ್ಟು ನಿದ್ದೆ ಮಾಡಬೇಕಾಗುತ್ತದೆ. ಇದರಿಂದ ದೇಹ ರಿಪೇರಿ ಕೆಲಸಗಳನ್ನು ಮಾಡಿಕೊಳ್ಳುತ್ತದೆ. ಅನಾರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮರುದಿನ ಕೆಲಸ ಮಾಡಲು ಬೇಕಾದ ಹೊಸ ಶಕ್ತಿ ಬರುತ್ತದೆ. ಇದರಿಂದ ನಿತ್ಯ ಆಕ್ಟೀವ್ ಆಗಿ ಇರುತ್ತೇವೆ. ಆದರೆ ನಿದ್ದೆ ವಿಷಯಕ್ಕೆ ಬಂದರೆ ಮಲಗಿದ ಬಳಿಕ ಯಾರೇ ಆಗಲಿ ತಮಗೆ ಸೂಕ್ತ ಎನ್ನಿಸುವ ಭಂಗಿಯಲ್ಲಿ ಮಲಗುತ್ತಾರೆ. ಆದರೆ ಒಂದೊಂದು ಭಂಗಿಯಲ್ಲಿ ನಿದ್ದೆ ಮಾಡುವುದರಿಂದ ಕೆಲವು ಲಾಭಗಳಿವೆ. ಅದೇ ರೀತಿ ಕೆಲವು ನಷ್ಟಗಳೂ ಇವೆ. ಅವು ಏನು ಎಂಬುದನ್ನು ಈಗ ತಿಳಿದುಕೊಳ್ಳೋಣ..!

1. ಸೋಲ್ಜರ್ ಪೊಸಿಷನ್
ಯಾರೇ ಆಗಲಿ ನಿದ್ರಿಸಲು ಇದೇ ಸರಿಯಾದ ಭಂಗಿ ಎಂದು ಹೇಳುತ್ತಾರೆ. ಇದನ್ನು ಯೋಗಾದಲ್ಲಿ ಶವಾಸನ ಎನ್ನುತ್ತಾರೆ. ಇದರಿಂದ ಬೆನ್ನುಮೂಳೆಗೆ ವಿಶ್ರಾಂತಿ ಸಿಗುತ್ತದೆ. ಕುತ್ತಿಗೆ, ಕೈಗಳಿಗೆ ಶಕ್ತಿ ಲಭಿಸುತ್ತದೆ. ದೇಹದ ಭಂಗಿಯನ್ನು ಉತ್ತಮ ಪಡಿಸುತ್ತದೆ. ಅಸಿಡಿಟಿ ಕಡಿಮೆಯಾಗುತ್ತದೆ. ಎದೆಭಾಗ ಕರೆಕ್ಟ್ ಸೈಜ್‌ನಲ್ಲಿ ಇರುತ್ತದೆ. ನಿದ್ರಾಹೀನತೆ ದೂರವಾಗುತ್ತದೆ. ತಲೆನೋವು ಬರಲ್ಲ. ಮುಖದ ಮೇಲೆ ಸುಕ್ಕುಗಳು ಬರಲ್ಲ. ಆದರೆ ಈ ಭಂಗಿಯಲ್ಲಿ ನಿದ್ದೆ ಮಾಡುವುದರಿಂದ ಗೊರಕೆ ಹೆಚ್ಚಾಗಿ ಬರುತ್ತದೆ. ಗರ್ಭಿಣಿಯರಾದರೆ ಭ್ರೂಣದ ಮೇಲೆ ಪ್ರಭಾವ ತೋರುತ್ತದೆ. ಬೆನ್ನುಮೂಳೆ ಕೆಳಗಿನ ಭಾಗದಲ್ಲಿ ಸ್ವಲ್ಪ ಮಂದಿಗೆ ನೋವು ಬರಬಹುದು. ಆದರೆ ಈ ಸಮಸ್ಯೆಯನ್ನು ನಿವಾರಿಸಬೇಕಾದರೆ ತಲೆಕೆಳಗೆ ದಿಂಬನ್ನು ಇಟ್ಟುಕೊಳ್ಳದೆ ಮಲಗಬೇಕು.

2. ಸ್ಟಾರ್ ಫಿಷ್ ಪೊಸಿಷನ್
ಈ ಭಂಗಿಯಲ್ಲಿ ನಿದ್ರಿಸುವುದರಿಂದ ನಿದ್ರಾಹೀನತೆ, ತಲೆನೋವು, ಗ್ಯಾಸ್, ಅಸಿಡಿಟಿ, ಮುಖದ ಮೇಲೆ ನೆರಿಗೆಯಂತಹ ಸಮಸ್ಯೆಗಳು ಬರಲ್ಲ. ಆದರೆ ಈ ಭಂಗಿಯಿಂದಲೂ ಗೊರಕೆ ಸಮಸ್ಯೆ ಬರುತ್ತದೆ. ಭುಜಗಳು, ಬೆನ್ನುಮೂಳೆ ನೋವು ಬರುತ್ತದೆ. ಆದಕಾರಣ ಈ ಭಂಗಿಯಲ್ಲೂ ತಲೆಕೆಳಗೆ ದಿಂಬಿಲ್ಲದೆ ನಿದ್ರಿಸಿದರೆ ತುಂಬಾ ಒಳ್ಳೆಯದು.

3. ಲಾಗ್ ಪೊಸಿಷನ್
ಈ ಭಂಗಿಯಲ್ಲಿ ನಿದ್ರಿಸುವುದರಿಂದ ಬೆನ್ನುನೋವು, ಕುತ್ತಿಗೆ ನೋವು ಬರಲ್ಲ. ಗೊರಕೆ ಸಮಸ್ಯೆ ಬರಲ್ಲ. ಗರ್ಭಿಣಿಯರು ಸಹ ನಿದ್ರಿಸಲು ಉತ್ತಮ ಭಂಗಿ. ಆದರೆ ಈ ರೀತಿ ನಿದ್ರಿಸಿದರೆ ತೊಡೆ ನೋವು, ಚರ್ಮದ ಮೇಲೆ ಸುಕ್ಕುಗಳು ಬರುವುದು, ಎದೆಭಾಗ ಜಗ್ಗಿದಂತಾಗುವ ಸಮಸ್ಯೆಗಳು ಬರುತ್ತವೆ. ಇವು ಸಹ ಬರದಂತೆ ಇರಬೇಕಾದರೆ ಕುತ್ತಿಗೆ ಕೆಳಗೆ ದೊಡ್ಡ ತಲೆದಿಂಬು ಇಟ್ಟುಕೊಳ್ಳಬೇಕು. ಅದೇ ರೀತಿ ನಿದ್ರಿಸುವಾಗ ತೊಡೆಗಳ ನಡುವೆ ದಿಂಬು ಇಟ್ಟುಕೊಂಡು ನಿದ್ರಿಸಬೇಕಾಗುತ್ತದೆ.

4. ಈರ್ನರ್ ಪೊಸಿಷನ್
ಈ ಭಂಗಿಯಲ್ಲಿ ನಿದ್ರಿಸುವುದರಿಂದ ಕುತ್ತಿಗೆ, ಬೆನ್ನುನೋವು, ಗ್ಯಾಸ್, ಅಸಿಡಿಟಿ, ಗೊರಕೆ, ಹೊಟ್ಟೆಯಲ್ಲಿ ಉರಿಯಂತಹ ಸಮಸ್ಯೆಗಳು ಬರಲ್ಲ. ಆದರೆ ಈ ಭಂಗಿಯಿಂದ ಭುಜಗಳು, ಕೈಗಳ ನೋವು, ಲಿವರ್, ಜೀರ್ಣಕೋಶಗಳ ಮೇಲೆ ಒತ್ತಡ ಉಂಟಾಗುತ್ತದೆ. ವಕ್ಷೋಜಗಳು ಜಗ್ಗಿದಂತಾಗುವ, ಮುಖದ ಮೇಲೆ ಶ್ರೀಘ್ರವಾಗಿ ಸುಕ್ಕುಗಳು ಬರುವಂತಾಗುತ್ತದೆ. ಇವನ್ನು ನಿವಾರಿಸಬೇಕಾದರೆ ಈ ರೀತಿ ನಿದ್ರಿಸುವವರು ತಲೆಕೆಳಗೆ ಸಾಟಿನ್ ಪಿಲ್ಲೋ ಕೇಸ್ ಇಟ್ಟುಕೊಂಡು, ತೊಡೆಗಳ ನಡುವೆ ದಿಂಬು ಇಟ್ಟುಕೊಂಡು ಮಲಗಬೇಕು.

5. ಪೀಟಲ್ ಪೊಸಿಷನ್
ಈ ಭಂಗಿಯಲ್ಲಿ ನಿದ್ರಿಸುವುದರಿಂದ ಗೊರಕೆ ಕಡಿಮೆಯಾಗುತ್ತದೆ. ಗರ್ಭಿಣಿಯರಿಗೆ ಒಳ್ಳೆಯದು. ಗ್ಯಾಸ್, ಅಸಿಡಿಟಿ ಸಮಸ್ಯೆಗಳು ಬರಲ್ಲ. ಆದರೆ ಈ ಭಂಗಿಯಿಂದ ಕುತ್ತಿಗೆ, ಬೆನ್ನುಮೂಳೆ ಮೇಲೀ ಒತ್ತಡ ಬೀಳುತ್ತದೆ. ಅದೇ ರೀತಿ ಚರ್ಮ ಶೀಘ್ರವಾಗಿ ಸುಕ್ಕುಬೀಳುತ್ತದೆ. ವಕ್ಷೋಜಗಳು ಜಗ್ಗಿದಂತಾಗುತ್ತವೆ. ಈ ರೀತಿ ಆಗಬಾರದು ಎಂದರೆ ಈ ಭಂಗಿಯಲ್ಲಿ ನಿದ್ರಿಸುವಾಗ ತಲೆಕೆಳಗೆ ಖಚಿತವಾಗಿ ದಿಂಬು ಇರಬೇಕು. ರಾತ್ರಿ ಹೊತ್ತು ಅತ್ತಿಂದಿತ್ತ ಪಕ್ಕಕ್ಕೆ ಹೊರಳಾಡುತ್ತಾ ನಿದ್ರಿಸಬೇಕು.

6. ಫ್ರೀಫಾಲ್ ಪೊಸಿಷನ್
ಈ ಭಂಗಿಯಲ್ಲಿ ನಿದ್ರಿಸುವುದರಿಂದ ಗೊರಕೆ ಸಮಸ್ಯೆ ಬರಲ್ಲ. ಆದರೆ ಇದರಿಂದ ಬೆನ್ನುಮೂಳೆ, ಕುತ್ತಿಗೆ ನೋವು, ರಕ್ತ ಸಂಚಲನಕ್ಕೆ ತೊಂದರೆಯಾಗುತ್ತದೆ. ಮುಖದ ಮೇಲೆ ಸುಕ್ಕುಗಳು ಉಂಟಾಗುತ್ತವೆ. ಆಂತರಿಕ ಅಂಗಾಂಗಳ ಮೇಲೆ ಒತ್ತಡ ಬೀಳುವಂತಹ ಸಮಸ್ಯೆಗಳು ಬರುತ್ತವೆ. ಆದಕಾರಣ ಈ ಸಮಸ್ಯೆಗಳು ಬರದಂತೆ ಇರಬೇಕಾದರೆ ಇವರು ತಮ್ಮ ಹೊಟ್ಟೆಗೆ, ಹಾಸಿಗೆಗೆ ನಡುವೆ ದಿಂಬು ಇಟ್ಟುಕೊಂಡು ನಿದ್ರಿಸಬೇಕಾಗುತ್ತದೆ.

Comments are closed.