ರಾಷ್ಟ್ರೀಯ

ಸಂತಾನಶಕ್ತಿ ಹರಣ ಚಿಕಿತ್ಸೆಯಾದರೂ 7 ಮಕ್ಕಳ ತಾಯಿ ಮತ್ತೆ ಗರ್ಭಿಣಿ

Pinterest LinkedIn Tumblr

ಉತ್ತರ ಪ್ರದೇಶ: ವೈದ್ಯರ ನಿರ್ಲಕ್ಷ್ಯದಿಂದಾಗಿ ಸಂತಾನಶಕ್ತಿ ಹರಣ ಚಿಕಿತ್ಸೆಯಾದರೂ ಏಳು ಮಕ್ಕಳ ತಾಯಿ ಮತ್ತೆ ಗರ್ಭಿಣಿಯಾಗಿರುವ ಘಟನೆ ಉತ್ತರ ಪ್ರದೇಶದ ಹಾರ್ದೊಯ್‌ನಿಂದ ವರದಿಯಾಗಿದೆ.

ಹಾರ್ದೊಯ್‌ನ ಹರ್ಪಲ್‌ಪುರದ ಬೆಹ್ತಾ ರಾಮಪುರ ಗ್ರಾಮದ ನಿವಾಸಿಯಾಗಿರುವ ಕಮ್‌ಲೇಶ್ ಅವರ ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಇದೀಗ ನಷ್ಟ ಪರಿಹಾರವೊದಗಿಸುವಂತೆ ವೈದ್ಯರ ವಿರುದ್ಧ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.

ಡಿಸೆಂಬರ್ 11ರಂದು ಕಮ್‌ಲೇಶ್ ಪತ್ನಿಯನ್ನು ಸಂತಾನಶಕ್ತಿ ಹರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರಂತೆ ವೈದ್ಯರಾದ ಅವನೆಶ್ ಆನಂದ್ ಹಾಗೂ ಶ್ಯಾಮ್ ಪ್ರೀತ್ ದೀಕ್ಷಿತ್ ಚಿಕಿತ್ಸೆವೊದಗಿಸಿದ್ದರು.

ಏಳು ಮಕ್ಕಳ ಹೆತ್ತವರಾಗಿರುವ ತಾವು ಕಡು ಬಡವರಾಗಿದ್ದೇವೆ. ಆರ್ಥಿಕವಾಗಿಯೂ ಬಹಳ ಸಂಕಷ್ಟದಲ್ಲಿದ್ದೇವೆ. ಹಾಗಾಗಿ 30,000 ರೂ.ಗಳ ನಷ್ಟ ಪರಹಾರ ನೀಡುವಂತೆ ಬೇಡಿಕೆಯಿಟ್ಟಿರುವುದಾಗಿ ಕಮ್‌ಲೇಶ್ ಹೇಳಿದ್ದಾರೆ.

Comments are closed.