ಕರಾವಳಿ

ಕದ್ರಿ ಪಾರ್ಕ್‌ನಲ್ಲಿ “ಫಲಪುಷ್ಪ ಪ್ರದರ್ಶನ” ಆರಂಭ : ಕ್ಲಾಕ್ ಟವರ್ ಹೂ ವಿನ್ಯಾಸ ಮಾದರಿ ವಿಶೇಷ ಆಕರ್ಷಣೆ

Pinterest LinkedIn Tumblr

ಮಂಗಳೂರು, ಜನವರಿ.27: ತೋಟಗಾರಿಕೆ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ ಹಾಗೂ ಸಿರಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಂಡಿರುವ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು.

ಈ ವರ್ಷದ ಪ್ರದರ್ಶನದಲ್ಲಿ ಮಂಗಳೂರು ಕ್ಲಾಕ್ ಟವರ್ ಹೂ ವಿನ್ಯಾಸ ಮಾದರಿ ನಿರ್ಮಿಸಲಾಗಿದ್ದು, ಸಚಿವ ಯು.ಟಿ.ಖಾದರ್ ಅದರ ಉದ್ಘಾಟನೆಯನ್ನು ನೆರವೇರಿಸಿದರು. ಫಲಪುಷ್ಪ ಪ್ರದರ್ಶನದಲ್ಲಿ ಈಬಾರಿಯ ಪ್ರಮುಖ ಆಕರ್ಷಣೆ ಕ್ಲಾಕ್ ಟವರ್. ಹೂವಿನಿಂದ ಅಲಂಕೃತವಾದ ಕ್ಲಾಕ್ ಟವರ್ ಹಂಪನಕಟ್ಟೆಯಲ್ಲಿ ಹಿಂದಿದ್ದ ಬೃಹತ್ ಕ್ಲಾಕ್ ಟವರನ್ನು ನೆನಪಿಸುವಂತಿದೆ. 150 ಕೆಜಿ ಗುಲಾಬಿ ಹೂಗಳಿಂದ ರಚನೆಗೊಂಡಿರುವ ಈ ಹೂವಿನ ಕ್ಲಾಕ್ ಟವರ್ 12 ಅಡಿ ಎತ್ತರ, ಸುಮಾರು 5 ಅಡಿ ಅಗಲವಿದೆ. ಮಂಗಳೂರಿನ ಹಂಪನಕಟ್ಟೆಯಲ್ಲಿದ್ದ ಐತಿಹಾಸಿಕ ವಸ್ತುಗಳ ಪಟ್ಟಿಯಲ್ಲಿ ಕ್ಲಾಕ್ ಟವರ್ಗೆ ತನ್ನದೇ ರೀತಿಯ ಮನ್ನಣೆ ಇರುವುದರಿಂದ ಅದಕ್ಕೆ ಈ ಬಾರಿ ಆದ್ಯತೆ ನೀಡಲಾಗಿದ್ದು, ಇದನ್ನು ಮಂಗಳೂರು ಶಾರದಾ ಆರ್ಟ್ಸ್ನ ಮಹೇಶ್ ಮತ್ತು ತಂಡ ರಚಿಸಿದ್ದಾರೆ.

ಕದ್ರಿ ಉದ್ಯಾನವನದೊಳಗೆ ಎಡ ಪಾರ್ಶ್ವದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಬಣ್ಣ ಬಣ್ಣದ ಪುಷ್ಪಗಳಿಂದ ಆಕರ್ಷ ಸ್ವಾಗತ ದ್ವಾರವನ್ನು ನಿರ್ಮಿಸ ಲಾಗಿದೆ. ಗುಲಾಬಿ, ಸೇವಂತಿ ಸೇರಿದಂತೆ ಲಕ್ಷಾಂತರ ಹೂಗಳಿಂದ ಕಂಗೊಳಿಸುವ ಹೂದೋಟ, ಸಸ್ಯ ಸೊಬಗಿನ ಕಾಶಿ, ತರಕಾರಿ, ಲವಸ್ತುಗಳ ಪ್ರದರ್ಶನ, ಪ್ರದರ್ಶನ ಮಳಿಗೆಯೊಂದಗೆ ಕೃತಕ ಕೊಳ ನಿರ್ಮಿಸಿ ಮೀನು ಸಾಕಾಣೆ, ನಾನಾ ತಳಿಯ ತರಕಾರಿ ಗಿಡಗಳ ಹಸಿರು ತೋಟವನ್ನು ಕಾಣಬಹುದು.

ವಸ್ತುಪ್ರದರ್ಶನದಲ್ಲಿ ನರ್ಸರಿ, ತರಕಾರಿ ಬೀಜ, ಯಂತ್ರೋಪರಕರಣಗಳು, ಕೃಷಿ ಉಪಕರಣಗಳು, ಕಾಳುಮೆಣಸು ಬೇರ್ಪಡಿಸುವ ಯಂತ್ರಗಳು, ಮರ ಹತ್ತುವ ಸಾಧನಗಳು, ಸೋಲಾರ್ ಮಳಿಗೆಗಳು, ನಾನಾ ಅಲಂಕಾರಿಕ ವಸ್ತುಗಳು, ಸಿರಿ ಸಿದ್ಧ ಉಡುಪು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಮಳಿಗೆ, ತೋಟಗಾರಿಕೆ ಇಲಾಖೆಯ ಮಳಿಗೆಗಳು ಇಲ್ಲಿವೆ.

ಅಡಿಕೆ ಹಾಗೂ ತೆಂಗಿನ ಸಿಪ್ಪೆ ಮುಗುಟ (ಮುಚ್ಚಳ ರೀತಿಯಲ್ಲಿರುವ), ಅಡಿಕೆ ಹಾಳೆ, ಸಿಪ್ಪೆಗಳಿಂದಲೂ ಸುಂದರವಾದ ಬಣ್ಣ ಬಣ್ಣ ದ ವರ್ಣಮಯ ಆಲಂಕಾ ರಿಕ ಹೂವುಗಳನ್ನು ತಯಾರಿಸಬಹುದು. ಬಹುತೇಕವಾಗಿ ತ್ಯಾಜ್ಯವಾಗುವ ಈ ಮುಗುಟ, ಹಾಳೆ ಹಾಗೂ ಸಿಪ್ಪೆಗಳಿಗೆ ಬಣ್ಣ ಹಚ್ಚಿಸಿ ಸುಂದರ ರೂಪು ನೀಡಿ ದ್ದಾರೆ ಮೂಡಬಿದ್ರೆಯ ಯಶೋದಾ ಪ್ರಭಾಕರ್. ಫಲಪುಷ್ಪ ಪ್ರದರ್ಶನದ ಮಳಿಗೆಯಲ್ಲಿ ತಮ್ಮ ಆಲಂಕಾರಿಕ ಸುಂದರ ಹೂುಗಳನ್ನು ಪ್ರದರ್ಶನಕ್ಕಿರಿಸಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಕವಿತಾ ಸನೀಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮನಪಾ ಸದಸ್ಯರಾದ ನವೀನ್ ಡಿಸೋಜ, ಲ್ಯಾನ್ಸಿ ಲೊಟೋ ಪಿಂಟೋ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಎಚ್.ಆರ್. ನಾಯ್ಕಿ, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷ ಡಾ. ಭಾರತೀ ನಿರ್ಮಲ್, ಕೋಶಾಧಿಕಾರಿ ಪಿ. ಸುರೇಶ್ ಶೆಣೈ, ಜತೆ ಕಾರ್ಯದರ್ಶಿ ಅನಂತರಾಮ ಹೇರಳೆ, ಆಡಳಿತ ಮಂಡಳಿ ಸದಸ್ಯರಾದ ಲಕ್ಷ್ಮೀ ರಾವ್ ಆರೂರು, ಎನ್.ವಿ.ಕೆ. ಭಟ್ರಕೋಡಿ, ಶಾರದಾ ಆಚಾರ್, ಶಶಿ ವಿ. ಶೆಟ್ಟಿ, ವಿಜಯಲಕ್ಷ್ಮೀ ಆರ್.ರಾವ್, ಸುಭಾಶ್ಚಂದ್ರ ರೈ ಮೊದಲಾದವರು ಉಪಸ್ಥಿತರಿದ್ದರು. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್. ರವಿ ಸ್ವಾಗತಿಸಿ, ಫಲಪುಷ್ಪ ಪ್ರದರ್ಶನಗಳ ಕುರಿತ ಮಾಹಿತಿ ನೀಡಿದರು.

Comments are closed.