ಮಗುವಿನ ಮುದ್ದು ಮುಖಕ್ಕಿಂತ, ನೋಡಲು ಅಂದವಾಗಿರುವ ವಸ್ತು ಭೂಮಿಯ ಮೇಲೆ ಬೇರೆ ಯಾವುದಾದರು ಇದೆಯೇ? ಎಲ್ಲವನ್ನು ಮರೆಸುವ ಶಕ್ತಿ ಮಗುವಿನ ನಗುವಿಗಿದೆ. ನವಜಾತ ಶಿಶುಗಳ ಕೂದಲು ಕೂಡ, ಅದರ ತ್ವಚೆಯಂತೆ ನಾಜೂಕಾಗಿರುತ್ತದೆ. ಹುಟ್ಟಿದಾಗ ಇದ್ದ ತಲೆಯ ಮೇಲಿನ ಕೂದಲು, ಕೆಲವೇ ತಿಂಗಳುಗಳಲ್ಲಿ ಉದುರಿ ಹೋಗುತ್ತದೆ. ಇದು ಸಹಜವೂ ಹೌದು. ನಂತರ, ಮಗುವಿನ ತಲೆಯ ಮೇಲೆ ಹೊಸದಾದ ಗಟ್ಟಿ ಮುಟ್ಟಾದ ಕೂದಲು ಬೆಳೆಯುತ್ತದೆ. ಹಾಗಾದರೆ, ಮಗುವಿನ ತಲೆಯ ಕೂದಲಿನ ಬಗ್ಗೆ ನಿಮಗೆ ತಿಳಿಯದ ವಿಷಯಗಳನ್ನು, ನಾವು ವಿವರಿಸುತ್ತೇವೆ. ಕಾತುರರಾಗಿದ್ಧೀರಾ? ಮುಂದೆ ಓದಿ.
೧. ನವಜಾತ ಶಿಶುಗಳಲ್ಲಿ ಕೂದಲು ಉದುರುವುದನ್ನು ತಡೆಯಲಾಗುವುದಿಲ್ಲ
ನಿಮ್ಮ ಮುದ್ದು ಕಂದಮ್ಮಗಳ ನೆತ್ತಿಯ ಮೇಲಿನ ಕೂದಲು ಉದುರುತ್ತಿರುವುದನ್ನು ಕಂಡು ನೀವು ಗಾಬರಿಯಾಗುವ ಅಗತ್ಯವಿಲ್ಲ. ಇದು ಹುಟ್ಟಿದ ಮಕ್ಕಳಲ್ಲಿ ಸಹಜ. ನೀವು ಎಷ್ಟೇ ನಾಜೂಕಾದ baby ಶಾಂಪೂ, baby ಎಣ್ಣೆ ಹಚ್ಚಿ ಸ್ನಾನ ಮಾಡಿಸಿದರೂ, ಮಗುವಿನ ಕೂದಲು ಬೆಳವಣಿಗೆ ತಂದೆ-ತಾಯಿಯ ಆನುವಂಶಿಕತೆಯ ಮೇಲೆ ನಿಂತಿದೆ. ಆದ್ದರಿಂದ, ಮಗುವಿನ ಕೂದಲಿನ ಬೆಳವಣಿಗೆಯ ಮೇಲೆ ಹೆಚ್ಚು ಗಾಬರಿಯಾಗುವ ಅಗತ್ಯವಿಲ್ಲ.
೨. ನವಜಾತ ಶಿಶುಗಳು ಬಾಲ್ಡ್ ಅಲ್ಲ
ಕೆಲವು ತಾಯಂದಿರು ಮಕ್ಕಳಿಗೆ ಕೂದಲಿರುವುದಿಲ್ಲ, ಎಂಬ ಅಪನಂಬಿಕೆಯನ್ನು ಬೆಳೆಸಿಕೊಂಡಿರುತ್ತಾರೆ. ಆದರೆ ಕೆಲವು ಕಂದಮ್ಮಗಳು ತಲೆಯ ತುಂಬಾ ಕೂದಲು ಇಟ್ಟುಕೊಂಡು ಹುಟ್ಟಿದರೆ, ಮತ್ತೆ ಕೆಲವು ಕೂಸುಗಳು, ಅಲ್ಲಿ ಇಲ್ಲಿ ಕೂದಲಿನ ಪ್ಯಾಚ್ ತಲೆಯ ಮೇಲೆ ಇಟ್ಟುಕೊಂಡು ಹುಟ್ಟುತ್ತವೆ. ಏನೇ ಆಗಲಿ, ಒಂದೆರಡು ತಿಂಗಳುಗಳಲ್ಲಿ ತಲೆಯ ಕೂದಲೆಲ್ಲಾ ಉದುರಿ, ಹೊಸ ಕೂದಲಿನ ಚಿಗುರು ಬರುವುದು ಮಾತ್ರ ಸತ್ಯ.
೩. ಕೂದಲಿನ ವಿನ್ಯಾಸ ಬದಲಾಗಬಹುದು
ಹುಟ್ಟಿದ ಪುಟ್ಟ ಕಂದಮ್ಮನ ಕೂದಲು, ನೋಡಲು ಸುಂದರವಾಗಿ, ತೆಳುವಾಗಿ ನಾಜೂಕಾಗಿ ಇರಬಹುದು, ಆದರೆ ಮಗು ಬೆಳೆಯುತ್ತಾ, ಕೂದಲಿನ ವಿನ್ಯಾಸ ಬದಲಾಗುವ ಸಾಧ್ಯತೆಗಳಿವೆ. ಕೆಲವು ಮಕ್ಕಳಲ್ಲಿ ಹುಟ್ಟಿದಾಗ ಸ್ಟ್ರೈಟ್ ಕೂದಲಿದ್ದು, ನಂತರ ಗುಂಗುರು ಕೂದಲಾಗುವ ಸಾಧ್ಯತೆಗಳಿವೆ. ಮತ್ತೆ ಕೆಲವು ಮಕ್ಕಳಲ್ಲಿ ಗುಂಗುರಿನಿಂದ, ಸ್ಟ್ರೈಟ್ ಆಗುವು ಸಾಧ್ಯತೆಗಳಿವೆ. ಏನೇ ಆಗಲಿ, ಮಕ್ಕಳ ಕೂದಲು ಅವರು ಬೆಳವಣಿಗೆ ಹೊಂದುತ್ತಿದಂತೆ, ಕೂದಲಿನ ವಿನ್ಯಾಸ ಬದಲಾಗುವುದು ಮಾತ್ರ ಸಹಜ.
೪. ಕೂದಲಿನ ಬಣ್ಣ, ತಂದೆ-ತಾಯಿಯ ಜೀನ್/ವಂಶವಾಹಿಯ ಮೇಲೆ ಅವಲಂಭಿತವಾಗಿದೆ
ಕೆಲವು ಮಕ್ಕಳಲ್ಲಿ ಕಡು ಕಪ್ಪು ಬಣ್ಣದ ಕೂದಲಿದ್ದರೆ, ಮತ್ತೆ ಕೆಲವು ಮಕ್ಕಳಲ್ಲಿ ಕಂದು, ಕೆಂಚು ಬಣ್ಣದ ಕೂದಲಿರುತ್ತದೆ. ತಂದೆ-ತಾಯಿಯ ಇಬ್ಬರ ವಂಶವಾಹಿಯ ಆಧಾರದ ಮೇಲೆ ಮಗುವಿನ ಕೂದಲು ಬೆಳೆಯುತ್ತದೆ. ಹೆಚ್ಚಾಗಿ ತಂದೆಯ ಕೂದಲಿನ ಬಣ್ಣ, ವಿನ್ಯಾಸವೇ ಹುಟ್ಟುವ ಮಕ್ಕಳಲ್ಲಿ ಸಹ ಕಂಡುಬರುವುದು ಎಂದು ವಿಜ್ಞಾನಿಗಳು ಹೇಳುತ್ತಾರೆ.
ಅದು ಏನೇ ಇರಲಿ, ಮಕ್ಕಳು ಹೇಗೇ ಇದ್ದರೂ ನೋಡಲು ಅಂದ. ಮಗುವಿರುವ ಮನೆಯಲ್ಲಿ ಸದಾ ನಗು-ಹರುಷ ತುಂಬಿರುವುದು ಮಾತ್ರ ಸತ್ಯ. ಈ ಲೇಖನ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರು, ಬಂಧು-ಮಿತ್ರರೊಂದಿಗೆ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.