ಕರಾವಳಿ

ಪೇಜಾವರ ಶ್ರೀ ಆರೋಗ್ಯ ವಿಚಾರಿಸಲು ಉಡುಪಿಗೆ ಬಂದ ಕೇಂದ್ರ ಸಚಿವೆ ಉಮಾ ಭಾರತಿ

Pinterest LinkedIn Tumblr

ಉಡುಪಿ: ಬೆನ್ನು ಮೂಳೆ‌ ನೋವಿನಿಂದ ಬಳಲುತ್ತಿರುವ ಉಡುಪಿಯ ಪೇಜಾವರ ಶ್ರೀಗಳನ್ನು ಕೇಂದ್ರ ಸಚಿವೆ ಉಮಾ ಭಾರತೀ ಭೇಟಿ‌ ಮಾಡಿ ಆರೋಗ್ಯದ ಸ್ತಿತಿಗತಿಗಳನ್ನ ವಿಚಾರಿಸಿದರು. ಕಳೆದ ವಾರ ಪೇಜಾವರ ಶ್ರೀಗಳು ಮಂತ್ರಾಲಯದಿಂದ ಹೈದರಾಬಾದ್ ಗೆ ಪ್ರಯಾಣಿಸುತ್ತಿದ್ದಾಗ ,ಕಾರ್ ಬ್ರೇಕ್ ಹಾಕುವ ಸಂಧರ್ಭ ಶ್ರೀಗಳ ಬೆನ್ನು‌ಮೂಳೆ‌ಯಲ್ಲಿ‌ ನೋವು ಕಾಣಿಸಿಕೊಂಡಿತ್ತು .ಈ‌ ಹಿನ್ನಲೆಯಲ್ಲಿ ಪೇಜಾವರ ಶ್ರೀಗಳ ಅಪ್ತ ಶಿಷ್ಯೆಯಾದ ಉಮಾಭಾರತೀ ಶ್ರೀ ಗಳನ್ನ‌ ಭೇಟಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಉಮಾಭಾರತೀ ಅವರು, ಪೇಜಾವರ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದಾರೆ. ಬೆನ್ನು ನೋವಿನ ಸಮಸ್ಯೆ ಇರೋಂದ್ರಿಂದ ಪೂಜೆ ಪುನಾಸ್ಕಾರಗಳಿಗೆ ಸಮಸ್ಯೆಯಿದೆ. ಹದಿನೈದು ದಿನಗಳ‌ ವಿಶ್ರಾಂತಿ ಬೇಕಾಗಿದೆ ಎಂದರು. ಅಷ್ಟೇ ಅಲ್ಲದೇ.. ೮೦೦ ವರುಷಗಳಲ್ಲಿ, ಮಧ್ವ ಸಂಪ್ರದಾಯದಲ್ಲೆ ಪೇಜಾವರ ಶ್ರೀಗಳು, ಪಂಚಮ ಪರ್ಯಾಯ ಪೂರೈಸುವ ಮೂಲಕ ಇತಿಹಾಸ ದಾಖಲಿಸಿದ್ದಾರೆ. ಈ ಸಂಭ್ರಮವನ್ನು ಭಕ್ತರಾದ ನಾವು ಉಡುಪಿಯಲ್ಲೆ ಅಚರಿಸಲು ನಿರ್ಧರಿಸಿದ್ದೇವೆ, ಶ್ರೀಗಳ ಆರೋಗ್ಯ ಸುಧಾರಣೆಯ‌ ಬಳಿಕ ಕಾರ್ಯಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಇನ್ನೂ ಇಪ್ಪತ್ತು ದಿನಗಳ ವರೆಗೆ ವಿಶ್ರಾಂತಿಯಲ್ಲಿರುವ ಪೇಜಾವರ ಶ್ರೀಗಳು ,ಪೇಜಾವರ ಮಠದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಸದಾ ಚಟುವಟಿಕೆಯಲ್ಲಿರುವ ಶ್ರೀಗಳಿಗೆ ಬೆನ್ನು ನೋವಿನಿಂದಾಗಿ ಹಾಸಿಗೆಯಲ್ಲಿಯೇ ಮಲಗುವಂತೆ ಮಾಡಿದೆ. ವಿಶ್ರಾಂತಿ ಮಾಡುವುದರಲ್ಲಿ ಬೇಸರವಿಲ್ಲ, ಆದ್ರೆ ಕೆಲಸವಿಲ್ಲದೇ ವಿಶ್ರಾಂತಿ ಮಾಡುವುದು ಕಷ್ಟ ಎಂದು ಪೇಜಾವರ ಶ್ರೀಗಳು ಮಾಧ್ಯಮ ಮಂದಿಯಲ್ಲಿ‌ ಹೇಳಿಕೊಂಡ್ರು. ಮಲಗಿರುವ ಕಾರಣ ಶ್ರೀ‌ಕೃಷ್ಣನ‌ ಜಪ ಹಾಗೂ ಪೂಜೆ ಮಾಡಲು ಸಮಸ್ಯೆಯಾಗಿದೆ.ಹೀಗಾಗಿ.. ಪರಾಯಾಣ ,ಜಪ ,ಸ್ತೋತ್ರ ,ಗಂಥಗಳನ್ನ‌ ಓದುವ ಮೂಲಕ ಸಮಯ ಕಳೆಯುತ್ತಿದ್ದೆನೆ ಎಂದರು.

Comments are closed.