ಕರಾವಳಿ

ಮೂತ್ರನಾಳದ ಸೋಂಕು, ಸಮಸ್ಯೆ ನಿವಾರಣೆಗೆ ಮನೆಮದ್ದು

Pinterest LinkedIn Tumblr

ಜಗತ್ತಿನಾದ್ಯಂತ ಪ್ರತಿ ವರ್ಷವೂ ಜನರು ವೈದ್ಯರ ಬಳಿ ಭೇಟಿ ಕೊಡುವುದಕ್ಕೆ ಎರಡನೇ ಅತ್ಯಂತ ಸಾಮಾನ್ಯ ಕಾರಣ ಎಂದರೆ ಅದು ಮೂತ್ರನಾಳದ ಸೋಂಕು (ಯೂರಿನರಿ ಟ್ರಾಕ್ಟ್ ಇಂಫೆಕ್ಷನ್/ UTI). ಗಂಡಸರಲ್ಲೂ ಈ ಸೋಂಕು ಉಂಟಾಗುತ್ತದೆ, ಆದರೆ ಹೆಂಗಸರಲ್ಲಿ ಇದು ಬಹಳಷ್ಟು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿವರ್ಷ ಸುಮಾರು 80 ಲಕ್ಷದಷ್ಟು ಹೆಂಗಸರು ಮೂತ್ರನಾಳದ ಸೋಂಕಿನ ಕಾರಣ ವೈದ್ಯರ ಬಳಿ ತೆರಳುತ್ತಾರೆ. ಇದರಲ್ಲಿ ಬಹುತೇಕ ಹೆಂಗಸರಿಗೆ ಎರಡನೆಯ ಸೋಂಕು ಕೂಡ ಉಂಟಾಗುತ್ತದೆ. ನಿಮಗೇನಾದರೂ ಇದಕ್ಕೂ ಮುನ್ನ ಮೂತ್ರನಾಳದ ಸೋಂಕು ಉಂಟಾಗಿದ್ದರೆ, ಅದರ ಲಕ್ಷಣಗಳನ್ನ ನೀವು ಮರೆಯಲು ಸಾಧ್ಯವೇ ಇಲ್ಲ.

ಇಂತಹ ನೋವು ಉಂಟು ಮಾಡುವ, ಇರಿಸುಮುರಿಸು ಉಂಟುಮಾಡುವ ಮೂತ್ರನಾಳದ ಸೋಂಕನ್ನು ದೂರವಿಡಲು ನೀವು ಕೆಲವು ಮನೆಮದ್ದುಗಳನ್ನ ಬಳಸಬಹುದು. ಅಂತಹ ಮನೆಮದ್ದುಗಳು ಯಾವುದು ಎಂದು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಓದಿ.

೧. ಅಡುಗೆ ಸೋಡಾ
ಎರಡು ದಿನಗಳಿಗಿಂತ ಜಾಸ್ತಿ ದಿನ ಈ ಸೋಂಕನ್ನು ಬಿಟ್ಟರೆ ಅದು ಕಿಡ್ನಿಗಳನ್ನೂ ಸೋಂಕಿಗೆ ತುತ್ತು ಮಾಡಿ, ನಿಮ್ಮ ಸ್ತಿಥಿಯನ್ನ ಇನ್ನಷ್ಟು ಹದಗೆಡಿಸುತ್ತದೆ. ಹೀಗಾಗಿ ಇದು ಕಾಣಿಸಿಕೊಂಡೊಡನೆ ನೀವು ಇದನ್ನ ದೂರವಾಗಿಸಬೇಕು ಎಂದರೆ ನೀವು ಒಂದು ಲೋಟ ನೀರಿಗೆ ಒಂದು ಚಮಚ ಅಡುಗೆ ಸೋಡವನ್ನ ಬೆರೆಸಿ ಕುಡಿಯಿರಿ. ಇದು ಸೋಂಕು ಹರಡದಂತೆ ಮಾಡುತ್ತದೆ. ಅಲ್ಲದೆ ನಿಮ್ಮ ಮೂತ್ರದಲ್ಲಿರುವ ಅಸಿಡಿಕ್ (ಆಮ್ಲಿಯ) ಅಂಶವನ್ನ ಸೋಡಾ ತಟಸ್ಥಗೊಳಿಸುತ್ತದೆ ಮತ್ತು ನೀವು ಬೇಗ ಚೇತರಿಸಿಕೊಳ್ಳುವಂತೆ ಮಾಡುತ್ತದೆ.

೨. ಬ್ಲೂಬೆರ್ರಿ
ಬ್ಲೂಬೆರಿ ಹಣ್ಣುಗಳಿಗೆ ಬ್ಯಾಕ್ಟೀರಿಯಾ-ನಿರೋಧಕ ಶಕ್ತಿ ಇರುತ್ತದೆ. ಒಂದು ಅಧ್ಯಯನದಲ್ಲಿ ಬ್ಲೂಬೆರ್ರಿ ಹಣ್ಣು ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ ಎಂಬುದು ತಿಳಿದು ಬಂದಿದೆ. ಬ್ಲೂಬೆರ್ರಿ ಹಣ್ಣುಗಳು ವಿದೇಶದ ಹಣ್ಣುಗಳಾಗಿದ್ದು, ಇದು ನಮ್ಮ ಊರುಗಳಲ್ಲಿ ಸಿಗುವುದು ವಿರಳ ಆಗಿರುತ್ತದೆ. ಹೀಗಾಗಿ ನೀವು ಇವುಗಳನ್ನ ಖರೀದಿಸಿದರೆ, ಒಂದೇ ಬಾರಿ ಹೆಚ್ಚು ಹಣ್ಣುಗಳನ್ನ ತಿನ್ನುವ ಬದಲು, ನಿಮ್ಮ ತಿಂಡಿಯ ವೇಳೆ ಅಥವಾ ಊಟದ ನಂತರ ಒಂದೆರೆಡು ಹಣ್ಣುಗಳನ್ನ ಸೇವಿಸಬಹುದು.

೩. ಅನಾನಸ್ ಹಣ್ಣು
ಅನಾನಸ್ ಹಣ್ಣಿನಲ್ಲಿ ಬ್ರೊಮೆಲೈನ್ ಎಂಬ ಒಂದು ರಾಸಾಯನಿಕ ಪದಾರ್ಥವಿರುತ್ತದೆ. ಒಂದು ಅಧ್ಯಯನದಲ್ಲಿ ಮೂತ್ರನಾಳದ ಸೋಂಕಿನಿಂದ ಬಳಲುತ್ತಿದ್ದ ಜನರಿಗೆ ಆಂಟಿಬಯೋಟಿಕ್ ಮಾತ್ರೆಗಳೊಂದಿಗೆ ಬ್ರೊಮೆಲೈನ್ ಅನ್ನು ಕೂಡ ನೀಡಿದಾಗ, ಅವರಲ್ಲಿನ ಸೋಂಕು ಸಂಪೂರ್ಣವಾಗಿ ನಾಶವಾಗಿರುವುದು ತಿಳಿದು ಬಂದಿದೆ. ಕೇವಲ ಆಂಟಿಬಯೋಟಿಕ್ ಮಾತ್ರೆ ಮಾತ್ರ ಸೇವಿಸಿದಂತಹ ಜನರಲ್ಲಿ ಏನು ಬದಲಾವಣೆ ಆಗಿರಲೇ ಇಲ್ಲ. ಹೀಗಾಗಿ ನೀವು ಅನಾನಸ್ ಹಣ್ಣನ್ನು ಪ್ರತಿದಿನ ಸ್ವಲ್ಪ ಸೇವಿಸಿದರೆ ನೀವು ನಿಮ್ಮ ಸೋಂಕನ್ನು ಹೋಗಲಾಡಿಸಬಹುದು.

೪. ನೀರು
ನಿಮಗೆ ಮೂತ್ರನಾಳದಲ್ಲಿ ಸೋಂಕು ಆಗುವ ಸಾಧ್ಯತೆ ಇದೆ ಎಂದರೆ, ನೀವು ಮರೆಯದೆ ಹೆಚ್ಚೆಚ್ಚು ನೀರನ್ನು ಕುಡಿಯಬೇಕು – ಅಂದರೆ ಸುಮಾರು 4 ಲೀಟರ್ ಅಷ್ಟು ನೀರನ್ನು ಕುಡಿಯಬೇಕು. ನೀವು ಕೊನೆಪಕ್ಷ ನಾಲ್ಕು-ಐದು ಗಂಟೆಗಳಿಗೆ ಒಮ್ಮೆಯಾದರೂ ಮೂತ್ರವಿಸರ್ಜನೆ ಮಾಡಬೇಕು. ಈಗಾಗಲೇ ನಿಮಗೆ ಸೋಂಕು ಉಂಟಾಗಿದ್ದರೆ, ನೀವು ಬಕೆಟ್ಗಟ್ಟಲೆ ನೀರು ಕುಡಿಯಬೇಕು – ಅಂದರೆ ಗಂಟೆಗೇನೆ ನಾಲ್ಕು ಲೀಟರ್ ಅಷ್ಟು. ನೀವು ಹೆಚ್ಚೆಚ್ಚು ಬಾರಿ ಮೂತ್ರವಿಸರ್ಜನೆ ಮಾಡಿದಂತೆಲ್ಲಾ, ನಿಮ್ಮ ದೇಹದಿಂದ ಹೊರಹರಿಯುವ ನೀರು ತನ್ನೊಂದಿಗೆ ಹೆಚ್ಚೆಚ್ಚು ಬ್ಯಾಕ್ಟೀರಿಯಾಗಳನ್ನ ತೆಗೆದುಕೊಂಡು ಹೋಗುತ್ತದೆ.

೫. ವಿಟಮಿನ್ ಸಿ
ಕೆಲವು ವೈದ್ಯರು ಪದೇ ಪದೇ ಮೂತ್ರನಾಳದ ಸೋಂಕಿಗೆ ತುತ್ತಾಗುವ ಜನರಿಗೆ ದಿನಕ್ಕೆ ಕನಿಷ್ಠಪಕ್ಷ 5 ಗ್ರಾಂ ಅಷ್ಟು ಆದರು ವಿಟಮಿನ್ C ಸೇವಿಸಬೇಕು ಎಂದು ಶಿಫಾರಸು ಮಾಡುತ್ತಾರೆ. ಈ ವಿಟಮಿನ್ C ಹೆಚ್ಚಾಗಿ ನಿಮಗೆ ಹುಳಿ ಹಣ್ಣುಗಳಿಂದ ಸಿಗುತ್ತದೆ – ಅಂದರೆ ಕಿತ್ತಳೆ, ಮೋಸಂಬಿ, ನಿಂಬೆ ಹಣ್ಣು ಮತ್ತು ಮುಂತಾದವು. ವಿಟಮಿನ್ C ನಿಮ್ಮ ಮೂತ್ರದ ಆಮ್ಲಿಯ (ಅಸಿಡಿಕ್) ಅಂಶವನ್ನ ಹೆಚ್ಚಿಸಿ, ಬ್ಯಾಕ್ಟೀರಿಯಾಗಳು ಅಲ್ಲಿ ನೆಲೆಸಲು ಆಗದಂತೆ ಮಾಡುತ್ತದೆ.

Comments are closed.