
ಮಂಗಳೂರು, ಜನವರಿ, 14 : ಕಲಾವಿದನೊಬ್ಬನಿಗೆ ನಟನೆ ಹಾಗೂ ಹಾಡುಗಾರಿಕೆ ಜತೆಯಾಗಿಸಿಕೊಂಡು ಸಾಗುವುದು ಕಷ್ಟವಲ್ಲ. ಆದರೆ ಉತ್ತಮ ವೇದಿಕೆ ದೊರೆಯುವುದು ಬಹು ಮುಖ್ಯ ಎಂದು ನಟ, ಹಾಡುಗಾರ, ನಿರ್ದೇಶಕ ಫರ್ಹಾನ್ ಅಖ್ತರ್ ಅಭಿಪ್ರಾಯಿಸಿದ್ದಾರೆ.
ಇಂಪಿರೀಯಲ್ ಬ್ಲೂ ಸೂಪರ್‌ಹಿಟ್ ನೈಟ್ಸ್ ಸೀಸನ್ 4ರಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿದ ಅವರು, ನಗರದ ಖಾಸಗಿ ಹೊಟೇಲೊಂದರಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಅನುಭವ ಹಂಚಿಕೊಂಡರು.

ನಟನೆ ಹಾಗೂ ಹಾಡುಗಾರಿಕೆ ಎರಡು ವಿಭಿನ್ನ ಅನುಭವವನ್ನು ನೀಡುತ್ತದೆ. ಜೀವನದಲ್ಲಿ ಉತ್ತಮ ಅನುಭವಗಳನ್ನು ಪಡೆದುಕೊಳ್ಳುವುದು ನಮ್ಮನ್ನು ಸರಿ ದಾರಿಯಲ್ಲಿ ಕೊಂಡೊಯ್ಯಲು ಸಹಕಾರಿಯಾಗುತ್ತದೆ. ಕಲಾವಿದನಿಗೆ ಉತ್ತಮ ವೇದಿಕೆ ದೊರಕಿದಾಗ ಅದನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಮುಂದೆ ಸಾಗುವುದು ಉದಯೋನ್ಮುಖ ನಟ ಹಾಗೂ ಹಾಡುಗಾರನ ಕರ್ತವ್ಯ ಎಂದು ಅವರು ಹೇಳಿದರು. ಮೂರು ವರ್ಷಗಳ ಹಿಂದೆ ಮಣಿಪಾಲ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬಂದಿದ್ದೆ. ಮಂಗಳೂರಿಗೆ ಬರಲು ಬಹಳ ಸಂತೋಷ ವಾಗುತ್ತದೆ. ಪ್ರಸ್ತುತ ಗೋಲ್ಡ್ ಚಿತ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ಆ ಕೆಲಸ ಹಾಗೂ ಹಾಡುಗಾರಿಕೆಯಲ್ಲಿ ನಾನು ಬ್ಯುಸಿಯಾಗಿದ್ದೇನೆ ಎಂದವರು ಹೇಳಿದರು.
ಶನಿವಾರ ಸಂಜೆ ಅಡ್ಯಾರ್ ಗಾರ್ಡನ್‌ನಲ್ಲಿ ಇಂಪೀರಿಯಲ್ ಬ್ಲೂ ಸೂಪರ್ ಹಿಟ್ ನೈಟ್ಸ್‌ನ ಹೊಸ ಆವೃತ್ತಿಯಲ್ಲಿ ಆಕರ್ಷಕ, ಮನರಂಜನಾತ್ಮಕ ಸಂಗೀತ ಸಂಜೆ ನಡೆಯಿತು.
ರಾಕ್ ಸ್ಟಾರ್ ಫರ್‍ಹಾನ್ ಅಖ್ತರ್ ಅವರ ತಂಡವು ಹೊಸ ಸೂಪರ್ ಹಿಟ್ ಹಾಡುಗಳ ಮೂಲಕ ರಂಜಿಸಿತು. ಈ ವೇಳೆ ಭಾರೀ ಸಂಖ್ಯೆಯಲ್ಲಿ ನಾಗರಿಕರು ನೆರೆದಿದ್ದು, ಫರ್‍ಹಾನ್ ಅವರ ಸಂಗೀತವನ್ನು ಆಸ್ಪಾದಿಸಿದರು.
ಬಹುನಗರದ ಸಂಗೀತ ಸರಣಿಯಲ್ಲಿ ಫರ್‍ಹಾನ್ ಅಖ್ತರ್ ಮತ್ತು ಅವರ ನುರಿತ ಕಲಾವಿದರು ರಾಕ್ ಆನ್, ಸೆನೊರಿಟಾ ದಿಲ್ ಚಾಹ್ತಾ ಹೈ, ಅತರಂಗಿ ಯಾರಿ, ಜಿಂದಾ ಮೊದಲಾದ ಹಾಡುಗಳು ಪ್ರೇಕ್ಷಕರನ್ನು ಕುಣಿಯುವಂತೆ ಮಾಡಿದವು.
Comments are closed.