ಕರಾವಳಿ

ಗಂಗೊಳ್ಳಿಯಲ್ಲಿ ಮೂರನೇ ಬಾರಿ ಬೈಕ್‌ಗೆ ಬೆಂಕಿ: ಓರ್ವ ಆರೋಪಿ ವಶಕ್ಕೆ

Pinterest LinkedIn Tumblr

ಕುಂದಾಪುರ: ಕಳೆದ ಕೆಲ ದಿನಗಳಿಂದ ಮುಸ್ಲಿಂ ಸಮುದಾಯದವರನ್ನು ಗುರಿಯಾಗಿಸಿಕೊಂಡು ಅವರ ಬೈಕ್‌ಗೆ ಬೆಂಕಿ ಹಚ್ಚುವ ಕೃತ್ಯ ಮುಂದುವರೆದಿದ್ದು, ಶನಿವಾರ ಮುಂಜಾನೆಯೂ ಮನೆಯೆದುರು ನಿಲ್ಲಿಸಿದ್ದ ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾಗಲೆತ್ನಿಸಿದ ದುಷ್ಕರ್ಮಿಯೋರ್ವನನ್ನು ಗಂಗೊಳ್ಳಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಂಗೊಳ್ಳಿಯ ದಾಕುಹಿತ್ಲು ನಿವಾಸಿ ಗುರುರಾಜ್ ಖಾರ್ವಿ(28) ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ಠಾಣೆಗೆ ಕರೆದೊಯ್ದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ದಾಕುಹಿತ್ಲು ಟಕಿಯಾ ಮೊಹಲ್ಲಾ ನಿವಾಸಿ ನಯೀಮ್ ಎಂಬವರ ಸ್ಕೂಟರ್‌ಗೆ ಬೆಳಗಿನ ಜಾವ 3.30 ರ ಸಮಾರಿಗೆ ಬೆಂಕಿ ಹಚ್ಚಲಾಗಿತ್ತು. ಈ ವೇಳೆ ಸ್ಥಳದಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಬೆಂಕಿ ಹಚ್ಚಿ ಓಡಲೆತ್ನಿಸಿದ ವ್ಯಕ್ತಿಯ ಚಹರೆಯನ್ನು ಸ್ಥಳೀಯರು ನೀಡಿದ್ದು ಆ ಮಾಹಿತಿಯಂತೆ ಶೀಘ್ರವೇ ಕಾರ್ಯಾಚರಣೆಗಿಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಶಕ್ಕೆ ಪಡೆದ ಗುರುರಾಜ್ ಎಂಬಾತನನ್ನು ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

ಸ್ಥಳ್ಕಕೆ ಉಡುಪಿ ಎಸ್ಪಿ ಲಕ್ಷ್ಮಣ್ ನಿಂಬರ್ಗಿ ಭೇಟಿ ನೀಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಪ್ರಕರಣದ ಬಗ್ಗೆ ಸೂಕ್ತ ತನಿಖೆಗೆ ಪಿ.ಎಫ್.ಐ ಹಾಗೂ ಮುಸ್ಲೀಂ ಸಂಘಟನೆಗಳು ಆಗ್ರಹಿಸಿದೆ.

Comments are closed.