
ಕೇಂದ್ರ ಉಕ್ಕು ಮಂತ್ರಿ ಚೌದರಿ ಬೀರೆಂದ್ರ ಸಿಂಗ್ ಅವರ ಪತ್ನಿ ಹರ್ಯಾಣ ರಾಜ್ಯದ ಶಾಸಕಕಿ ಪೇಮಲತ ಅವರಿಂದ ಚೆಕ್ ಹಸ್ತಾಂತರ
ಮಂಗಳೂರು ಜನವರಿ 11 : ಮಂಗಳೂರಿನ ಹೊರವಲಯದ ಮೂಡುಶೆಡ್ಡೆಯಲ್ಲಿರುವ ಪಿಲಿಕುಳ ಮೃಗಾಲಯದ 5 ವರ್ಷದ ಹುಲಿ ‘ರಾಣಿ’ ಯನ್ನು ಕುದುರೆಮುಖ ಕಂಪೆನಿ ದತ್ತು ಸ್ವೀಕರಿಸಿದೆ.
ಕೇಂದ್ರ ಉಕ್ಕು ಮಂತ್ರಿ ಚೌದರಿ ಬೀರೆಂದ್ರ ಸಿಂಗ್ ಅವರ ಪತ್ನಿ ಹರ್ಯಾಣ ರಾಜ್ಯದ ಶಾಸಕರಾದ ಪೇಮಲತ ಅವರು ರೂ. 2.50 ಲಕ್ಷದ ಚೆಕನ್ನು ಕುದುರೆಮುಖದ ಪರವಾಗಿ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ಅವರಿಗೆ ಹಸ್ತಾಂತರಿಸಿದರು. ಮೃಗಾಲಯವನ್ನು ವೀಕ್ಷಿಸಿ ಪ್ರಾಣಿಪಕ್ಷಿಗಳ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಿಲಿಕುಳ ಮೃಗಾಲಯದಲ್ಲಿ ಹತ್ತು ಬಂಗಾಲ ಹುಲಿಗಳಿದ್ದು ಅದರ ನಿರ್ವಹಣೆಯ ವೆಚ್ಚವನ್ನು ಭರಿಸಲು ಪ್ರಾಣಿ ಪ್ರೇಮಿಗಳು ಮತ್ತು ಸಂಸ್ಥೆಗಳು ಸಹಕರಿಸುತ್ತವೆ ಎಂದು ಪಿಲಿಕುಳ ಜೈವಿಕ ಉದ್ಯಾನವನ ನಿರ್ದೇಶಕರ, ಹೆಚ್.ಜೆ. ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Comments are closed.