ಕರಾವಳಿ

ಬಂಟ್ವಾಳ ಸಮೀಪ ಭೀಕರ ಅಪಘಾತ : ಮರಕ್ಕೆ ಕಾರು ಢಿಕ್ಕಿ – ಮಗು ಮೃತ್ಯು – ಒಂದೇ ಕುಟುಂಬದ ಆರು ಮಂದಿಗೆ ಗಾಯ

Pinterest LinkedIn Tumblr

ಬಂಟ್ವಾಳ, ಜನವರಿ. 10: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಉಂಟಾದ ಅಪಘಾತದಲ್ಲಿ ಮಗುವೊಂದು ಮೃತಪಟ್ಟು, ಒಂದೇ ಕುಟುಂಬದ ಆರು ಮಂದಿ ಗಂಭೀರ ಗಾಯಗೊಂಡ ಘಟನೆ ಬುಧವಾರ ಬಂಟ್ವಾಳ ಮಣಿಹಳ್ಳ ಸಮೀಪದ ಬಡಗುಂಡಿ ಎಂಬಲ್ಲಿ ಸಂಭವಿಸಿದೆ.

ಅಪಘಾತದ ನಡೆದ ತಕ್ಷಣ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಗಾಯಾಳುಗಳಲ್ಲಿ ಮಗುವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವ ಬಗ್ಗೆ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ಬಡಗುಂಡಿ ನಿವಾಸಿಗಳಾದ ಜರ್ಮನ್, ರೋಶನ್, ಲವಿಟ, ಸಿಸಿಲಿಯಾ ಬರೆಟ್ಟೋ, ಓರ್ವ ಮಗು ಹಾಗೂ ಕಾರು ಚಾಲಕ ರೋಬಿನ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಅಪಘಾತದಿಂದ ಗಾಯಗೊಂಡವರಲ್ಲಿ ರೋಶನ್ ವಿದೇಶದಲ್ಲಿ ಉದೋಗ ಮಾಡುತ್ತಿದ್ದು, ರಜೆಯ ನಿಮಿತ್ತ ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು ಎನ್ನಲಾಗಿದೆ. ಅವರು ಕುಟುಂಬ ಸಮೇತ ಇಂದು ಮಂಗಳೂರು ಬೀಚ್‌ಗೆತೆರಳಿ ವಾಪಸು ಮನೆಗೆ ಬರುತ್ತಿದ್ದ ವೇಳೆ ಬಂಟ್ವಾಳ ತಾಲೂಕಿನ ಮಣಿಹಳ್ಳ ಸಮೀಪದ ಬಡಗುಂಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಬಂಟ್ವಾಳ ಟ್ರಾಫಿಕ್ ಠಾಣೆ ಪೋಲಿಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Comments are closed.