ಕುಂದಾಪುರ: ಮನೆ ಎದುರು ನಿಲ್ಲಿಸಿದ್ದ ಬೈಕಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಗಂಗೊಳ್ಳಿ ಜಾಮೀಯಾ ಮಸೀದಿ ಹಿಂಭಾಗ ತಡರಾತ್ರಿ ನಡೆದಿದೆ.
ಇಲೆಕ್ಟ್ರೀಶಿಯನ್ ವೃತ್ತಿ ಮಾಡಿಕೊಂಡಿರುವ ಅಬ್ದುಲ್ ಮಜೀದ್ ಎನ್ನುವರಿಗೆ ಸೇರಿದ ಬೈಕ್ ಇದಾಗಿದೆ.

ತಡರಾತ್ರಿ ಮನೆಯೆದುರು ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳ ಕೃತ್ಯದಿಂದ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಇತ್ತೀಚಿನ ಮೂರ್ನಾಲ್ಕು ದಿನದಿಂದ ಕೆಲವು ಅಹಿತಕರ ಘಟನೆಗಳನ್ನು ಸೃಷ್ಟಿಸಿ ಶಾಂತಿ ಕದಡುವ ಯತ್ನ ನಡೆಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆಗೆ ಮುಸ್ಲೀಂ ಸಮುದಾಯದವರು ಒತ್ತಾಯಿಸಿದ್ದಾರೆ
ಗಂಗೊಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ವಿನಾಯಕ ಬಿಲ್ಲವ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ತನಿಖೆ ನಡೆಯುತ್ತಿದೆ.
Comments are closed.