ಕರಾವಳಿ

ವಾರಕ್ಕೆ ಏಳು ದಿನಗಳೇ ಯಾಕಿರಬೇಕು.. 8 ಅಥವಾ 9 ದಿನಗಳು ಯಾಕಿರಬಾರದು..?

Pinterest LinkedIn Tumblr

ಭಾನುವಾರವನ್ನು ಭಾನುವಾರ ಎಂದು ಯಾಕೆ ಕರೆಯಬೇಕು ? ಸೋಮವಾರ ಅನ್ನಬಹುದಲ್ಲವೆ? ವಾರಗಳು ಭಾನು, ಸೋಮ, ಮಂಗಳ…ಹೀಗೆ ಇದೇ ಕ್ರಮದಲ್ಲಿ ಯಾಕೆ ಬರುತ್ತಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ ಸ್ನೇಹಿತರೇ!

ನಮ್ಮ ಭಾರತೀಯ ಶಾಸ್ತ್ರಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಪ್ರಮುಖವಾದದ್ದು. ಖಗೋಳದಲ್ಲಿ ಗ್ರಹ, ನಕ್ಷತ್ರ ಹಾಗೂ ರಾಶಿಗಳ ಸಂಚಾರವನ್ನು ತಿಳಿಸುತ್ತದೆ ಜ್ಯೋತಿಷ್ಯ ಶಾಸ್ತ್ರ. ವೇದಕಾಲದಿಂದಲೇ ಅನೇಕ ಕೋಟಿ ಬ್ರಹ್ಮಾಂಡಗಳಲ್ಲಿ ನಮ್ಮದೂ ಒಂದು ಬ್ರಹ್ಮಾಂಡವೆಂದು, ಅನೇಕ ಕೋಟಿ ಸೂರ್ಯ ಕುಟುಂಬದಲ್ಲಿ ನಾವೂ (ಭೂಗೋಳ)ಅಂತರ್ಭಾಗವೆಂದು ಗುರುತಿಸಿದ್ದಾರೆ. ಸೂರ್ಯನು ಕೇಂದ್ರವಾಗಿ ಗ್ರಹಗಳು ಸಂಚರಿಸುತ್ತವೆಂದು , ಭೂಗೋಳವೂ ಒಂದು ಗ್ರಹವೆಂದು ಭೂಮಿ ತನ್ನ ಸುತ್ತ ತಾನು ಸುತ್ತುತ್ತಾ ಸೂರ್ಯನ ಸುತ್ತಲೂ ತಿರುಗುತ್ತದೆಂದು, ಚಂದ್ರನು ಭೂಮಿಯ ಸುತ್ತಲೂ ತಿರುಗುತ್ತಿರುತ್ತಾನೆಂದು, ಹಾಗೆಯೇ ಉಳಿದ ಗ್ರಹಗಳ ಸಂಚಾರವು ಸಾಗುತ್ತಿರುತ್ತದೆ ಎಂದು ಖಚಿತವಾಗಿ ಹೇಳಿದ್ದಾರೆ.

ಖಗೋಳದಲ್ಲಿರುವ 9 ಗ್ರಹಗಳಲ್ಲಿ 7 ಗ್ರಹಗಳು ಸೂರ್ಯ, ಚಂದ್ರ, ಕುಜ, ಬುಧ, ಗುರು, ಶುಕ್ರ ಹಾಗೂ ಶನಿ ಇವು ಮುಖ್ಯವಾದವುಗಳೆಂದು, ಉಳಿದ 2 ಗ್ರಹಗಳಾದ ರಾಹು, ಕೇತು ಛಾಯಾ ಗ್ರಹಗಳೆಂದು ಗುರ್ತಿಸಿ ಆ 7 ಗ್ರಹಗಳಿಗನುಗುಣವಾಗಿ 7 ದಿನಗಳಿಗೆ ಅವುಗಳ ಹೆಸರನ್ನು ಇಡಲಾಗಿದೆ. ಪ್ರತಿ ದಿನ ಬೆಳಗ್ಗೆ ಒಂದು ಗಂಟೆಯ (6-7) ಸಮಯದಲ್ಲಿ ಯಾವ ಗ್ರಹವು ಪರಿಪಾಲಿಸುತ್ತದೆಯೋ ಆ ದಿನಕ್ಕೆ ಆ ಗ್ರಹದ ಹೆಸರನ್ನು ಇಡಲಾಗಿದೆ.

ಈ ಗಂಟೆಯ ಅವಧಿಯನ್ನು “ಹೋರ” ಎನ್ನುವರು. “ಆ ಹೋರ ಎಂಬುದು ಆಂಗ್ಲದಲ್ಲಿ ಅವರ್” ಎಂದಾಗಿದೆ. ಹಗಲು 12, ರಾತ್ರಿ 12 ಗಂಟೆ ಸೇರಿ 24 ಗಂಟೆಗಳು. ಭಾನುವಾರದಂದು ಬೆಳಗ್ಗೆ (6-7) ಸಮಯದಲ್ಲಿ ಸೂರ್ಯನ ಆಧಿಪತ್ಯವಿರುವುದರಿಂದ ಆ ದಿನವನ್ನು ರವಿವಾರ ಎನ್ನಲಾಗಿದೆ. ಹಗಲು “ಹೋರಗಳು” 12 ರಾತ್ರಿ “ಹೋರಗಳು” 12.
ರವಿವಾರ :- 6-7 ರವಿ, 7-8 ಶುಕ್ರ, 8-9 ಬುಧ, 9-10 ಚಂದ್ರ, 10-11 ಶನಿ, 11-12 ಗುರು 12-01 ಕುಜ (7 ಹೋರಗಳು) 1-2 ರವಿ, 2-3 ಶುಕ್ರ, 3-4 ಬುಧ, 4-5 ಚಂದ್ರ, 5-6 ಶನಿ ಹೀಗೆ ಹಗಲು 12 ಹೋರಗಳು

ಇದೇ ಕ್ರಮದಲ್ಲಿ ರಾತ್ರಿ 12 ಹೋರಗಳು ಸೇರಿದರೆ ಮಾರನೇ ದಿನ ಬೆಳಗ್ಗೆ 6-7 ರ ಸಮಯದಲ್ಲಿ ಚಂದ್ರನು ಆದಿಪತ್ಯ ವಹಿಸಿ ಕನಕ ಚಂದ್ರವಾರ ಅಥವಾ ಸೋಮವಾರವಾಗಿದೆ. ಇದೇ ಕ್ರಮದಲ್ಲಿ ಉಳಿದ ವಾರಗಳೂ ಉಂಟಾಗಿವೆ.

ಉದಾಹರಣೆಗೆ. ರವಿವಾರ ಬೆಳಗ್ಗೆ 6-7 ಅಧಿಪತಿ ಸೂರ್ಯ. ವಾರಗಳಿಗೆ ನಾಮಕರಣ ಮಾಡಿದ ಘನತೆ ನಮ್ಮ ಭಾರತೀಯ ಋಷಿಗಲಿಗೇ ಸಲ್ಲಬೇಕು. ರವಿ ವಾರ-ಸನ್ ಡೇ, ಸೋಮ ವಾರ-ಮನ್ ಡೇ ಎಂದು ಪ್ರಪಂಚವೆಲ್ಲವೂ ವಾರಗಳಿಗೆ ಹೆಸರಿಡುವುದಕ್ಕೆ ನಮ್ಮನ್ನೇ ಅನುಸರಿಸುತ್ತಿದೆ.

Comments are closed.