ಕರಾವಳಿ

‘ಹುಟ್ಟಿದ ಮೇಲೆ ಸಾವು ಖಚಿತ’; ದೀಪಕ್ ಕೊಲೆ ವಿಚಾರದಲ್ಲಿ ಸಚಿವ ಕಾಗೋಡು ಹೇಳಿಕೆಗೆ ಬಿ.ಎಸ್.ವೈ ಖಂಡನೆ

Pinterest LinkedIn Tumblr

ಬೆಂಗಳೂರು/ ಶಿವಮೊಗ್ಗ: ‘ಹುಟ್ಟಿದ ಮೇಲೆ ಸಾವು ಖಚಿತ,’ ಎಂದು ಕರಾವಳಿಯ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣ ಬಳಿಕ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಟೀಕೆಗೆ ಒಳಗಾಗುತ್ತಿದೆ.

 

ಮಂಗಳೂರು, ಉಡುಪಿಯಲ್ಲಿ ಇಂಥ ಘಟನೆಗಳಿಗೆ ಬಣ್ಣ ಹಚ್ಚುವ ಕೆಲಸ ನಡೆಯುತ್ತದೆ. ಇದನ್ನು ತಡೆಯಲು ರಾಜ್ಯ ಸರ್ಕಾರ ಸಮರ್ಥವಾಗಿದೆ. ಐಪಿಸಿ ಸೆಕ್ಷನ್ ಜಾರಿಗೆ ಬರುವ ಮುಂಚೆಯೂ ಕೊಲೆಗಳು ಆಗುತ್ತಿರಲಿಲ್ಲವೇ?’ ಎಂದು ಘಟನೆಗೆ ಸಂಬಂಧಿಸಿದಂತೆ ಬೇಜವಾಬ್ದಾರಿ ಹೇಳೀಕೆ ನೀಡಿದ್ದಾರೆ.

‘ಭಾರತದಂಥ ಬಹುಸಂಸ್ಕೃತಿ ಹೊಂದಿರುವ ದೇಶಗಳಲ್ಲಿ ಇಂಥ ಘಟನೆಗಳು ಸಹಜ. ‘ಭಾರತೀಯ ಸಮಾಜದಲ್ಲಿರುವ ಜಾತಿ, ಧಾರ್ಮಿಕ ವ್ಯವಸ್ಥೆ ಬೇರೆ ಯಾವ ದೇಶದಲ್ಲೂ ಇಲ್ಲ. ಆಸ್ತಿಗಾಗಿ ಸಹೋದರರ ನಡುವೆಯೇ ಗಲಾಟೆಗಳು ಆಗುತ್ತವೆ. ಹೊಡೆದಾಡಿಕೊಳ್ಳುತ್ತಾರೆ. ಇದು ಮನುಷ್ಯನ ಸಂಸ್ಕೃತಿ,’ರಾಮನೇ ತನ್ನ ಗರ್ಭಿಣಿ ಪತ್ನಿಯನ್ನು ವನವಾಸಕ್ಕೆ ತಳ್ಳಲಿಲ್ಲವೇ? ಅದು ಅಪರಾಧವಲ್ಲವೇ?’ ಎಂದು ಕೇಳಿದ ಅವರು, ಸಾವನ್ನೂ ಕೋಮುವಾದಿ ಪಕ್ಷಗಳು ಅವಕಾಶ ಸಿಕ್ಕರೆ ತಮ್ಮ ಉಪಯೋಗಕ್ಕೆ ಬಳಸಿಕೊಳ್ಳುತ್ತವೆ ಎಂದು ಆರೋಪಿಸಿದ್ದರು.

ಯಡಿಯೂರಪ್ಪ ಕಿಡಿ…
ಸಂತಾಪವನ್ನು ಸೂಚಿಸಬೇಕಾದ ಕಡೆ ಸಂಸ್ಕೃತಿಯ ನೆಪ ಹೇಳಿ ಒಂದು ಗಂಭೀರ ಹತ್ಯೆಯನ್ನು ಹಗುರವಾಗಿ ಪರಿಗಣಿಸುವ ಕಾಗೋಡು ತಿಮ್ಮಪ್ಪನವರ ಧೋರಣೆಯನ್ನು ನೋಡಿ ನನಗೆ ಆಘಾತವಾಗಿದೆ ಎಂದು ಬಿಎಸ್ ಯಡಿಯೂರಪ್ಪ ಕಿಡಿಕಾರಿದ್ದಾರೆ. ಜನರ ನೋವಿಗೆ ಕಾಂಗ್ರೆಸ್ ನಾಯಕರ ಅಸೂಕ್ಷ್ಮತೆಗೆ ಇದು ಸಾಕ್ಷಿ. ಕಾಗೋಡು ತಿಮ್ಮಪ್ಪನವರು ತಮ್ಮ ಒರಟು ಮಾತುಗಳಿಗೆ ತಕ್ಷಣ ಕ್ಷಮೆ ಕೇಳಬೇಕು. ನಾವು #DeepakRao ಹತ್ಯೆ ಪ್ರಕರಣವನ್ನು ಇಲ್ಲಿಗೇ ಬಿಡುವುದಿಲ್ಲ. ಅವರ ಹತ್ಯೆಯನ್ನು ಖಂಡಿಸಿ ಮಂಗಳೂರಿನವರೆಗೂ ಪಾದಯಾತ್ರೆ ಮಾಡಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ.

Comments are closed.