ಕರಾವಳಿ

ಸುಂದರ ಕೋಮಲ ತ್ವಚೆ ಪಡೆಯಲು ಮನೆಮದ್ದು

Pinterest LinkedIn Tumblr

 ಕಡಲೆ ಹಿಟ್ಟನ್ನು ದಿನವೂ ಸ್ನಾನ ಮಾಡುವಾಗ ಸೋಪಿನ ಬದಲಾಗಿ ಉಪಯೋಗಿಸಿದರೆ ಚರ್ಮ ಮೃದು ಆಗುವುದಲ್ಲದೆ ಕಲೆಗಳು ಕಡಿಮೆಯಾಗುವುದು.
ಬೆಣ್ಣೆಯಿಂದ ತಯಾರಿಸಿದ ಕಾಡಿಗೆಯನ್ನು ದಿನವೂ ಕಣ್ಣುಗಳಿಗೆ ಹಚ್ಚುವುದರಿಂದ ಕಣ್ಣು ಕಾಂತಿ ಹೆಚ್ಚಾಗುತ್ತದೆ.
ಹಲ್ಲುಗಳಿಂದ ಸೇಬನ್ನು ಕಚ್ಚಿ ತಿನ್ನುವುದರಿಂದ ಹಲ್ಲುಗಳ ಹೊಳಪು ವೃದ್ದಿಸುತ್ತದೆ.
ಮಾವಿನ ಹಣ್ಣನ್ನು ದಿನವೂ ಮಿತವಾಗಿ ಸೇವಿಸುವುದರಿಂದ ದೇಹದ ಸೌಂದರ್ಯ ಹೆಚ್ಚುವುದಲ್ಲದೆ ಶರೀರದ ಬಣ್ಣದಲ್ಲಿ ಹೊಳಪು ಕಾಣುವುದು.
ಬೆಟ್ಟದ ನೆಲ್ಲಿಕಾಯಿಯ ರಸವನ್ನು ಅಂಗೈಗೆ ಹಚ್ಚಿಕೊಂಡರೆ ಅತಿ ಬೆವರಿನ ಸಮಸ್ಯೆ ಕಡಿಮೆಯಾಗುವುದು.
ಹಸಿ ಕೊಬ್ಬರಿ ಹಾಲಿಗೆ ಗ್ಲಿಸರಿನ್ ಬೆರೆಸಿ ಚರ್ಮಕ್ಕೆ ಹಚ್ಚುತ್ತಿದ್ದರೆ ಚರ್ಮ ಮೃದುವಾಗುವುದಲ್ಲದೆ ಹೊಳಪು ಹೆಚ್ಚುವುದು.
ಅರಿಶಿಣ ಪುಡಿಯನ್ನು ಶರೀರಕ್ಕೆ ತಿಕ್ಕಿಕೊಂಡು ಸ್ನಾನ ಮಾಡುತ್ತಿದ್ದರೆ ಮೈಕಾಂತಿ ಹೆಚ್ಚುತ್ತದೆ.
ಸೌತೆಕಾಯಿ ಚೂರುಗಳಿಂದ ಮುಖ ಉಜ್ಜಿಕೊಳ್ಳುತ್ತಿದ್ದರೆ ಕಾಂತಿ ವೃದ್ದಿಸುವುದರ ಜೊತೆಗೆ ಚರ್ಮ ಒಡೆಯುವುದು ಕಡಿಮೆಯಾಗುವುದು.

Comments are closed.