ಕರಾವಳಿ

ಶೂಟೌಟ್ ಪ್ರಕರಣ ಪ್ರಕರಣ : ಭೂಗತ ಪಾತಕಿ ಕಲಿ ಯೋಗೀಶನ ಇಬ್ಬರು ಸಹಚರಾರ ಬಂಧನ – 2 ಪಿಸ್ತೂಲ್,7 ಸಜೀವ ಮದ್ದುಗುಂಡು ವಶ

Pinterest LinkedIn Tumblr

ಮಂಗಳೂರು, ಡಿಸೆಂಬರ್.28 : ನಗರದ ರಥಭೀದಿಯ ಬಟ್ಟೆ ಮಳಿಗೆ ಸೇರಿದಂತೆ ವಿವಿಧೆಡೆಗಳಲ್ಲಿ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭೂಗತ ಪಾತಕಿ ಕಲಿ ಯೋಗೀಶನ ಸಹಚರಾರದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಪಕ್ಷಿಕೆರೆ ನಿವಾಸಿ ಚಂದ್ರಶೇಖರ ಯಾನೆ ಟಿಕ್ಕಿ ಅಣ್ಣು (32) ಹಾಗೂ ಮುಲ್ಕಿ ನಿವಾಸಿ ಮನೋಜ್ ಕುಂದರ್ ಯಾನೆ ಮಂಜು (35) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.

ಆರೋಪಿಗಳು ಡಿಸೆಂಬರ್ 7ರಂದು ರಾತ್ರಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ನಲ್ಲಿ ನಡೆಸಿದ ಶೂಟೌಟ್ ಪ್ರಕರಣ, ಡಿ. 8ರಂದು ರಾತ್ರಿ ಮಂಗಳೂರು ಕಾರ್ ಸ್ಟ್ರೀಟ್ ನಲ್ಲಿರುವ ಎಂ. ಸಂಜೀವ ಶೆಟ್ಟಿ ಬಟ್ಟೆ ಮಳಿಗೆಯ ಕೆಲಸದವರಾದ ಮಹಾಲಿಂಗ ನಾಯ್ಕ್ ಎಂಬವರ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ಮತ್ತು ಡಿ. 23ರಂದು ಮುಲ್ಕಿ ಬಳಿಯ ನಾಗರಾಜ್ ಎಂಬವರ ಮನೆಯ ಕಿಟಿಕಿಗೆ ಹಾಗೂ ಅವರ ಕಾರಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ ಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ಮನೋಜ್ ಕುಂದರ್ @ ಮಂಜು ಎಂಬಾತನು ಭೂಗತ ಪಾತಕಿ ಕಲಿ ಯೋಗೀಶ ಎಂಬಾತನ ಜೊತೆ ನೇರವಾಗಿ ಸಂಪರ್ಕದಲ್ಲಿದ್ದು, ಈತನ ಅದೇಶದಂತೆ ಈ ಮೇಲ್ಕಂಡ ಕೃತ್ಯಗಳನ್ನು ಎಸಗಿರುವುದಾಗಿದೆ ತಿಳಿದುಬಂದಿದೆ.ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ. ಈ ಆರೋಪಿಗಳು ಇನ್ನು ಹಲವು ಕೃತ್ಯಗಳನ್ನು ನಡೆಸಿರುವ ಬಗ್ಗೆ ಮಾಹಿತಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್, ಪಿಎಸ್‌ಐ ಶ್ಯಾಮ್ ಸುಂದರ್, ಎಎಸ್ ಐ ಹರೀಶ್ ಹಾಗೂ ಸಿಬ್ಬಂದಿ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ಅವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಆರೋಪಿಗಳ ಬಗ್ಗೆ ಹೆಚ್ಚಿನ ವಿವರ :

1. ಮನೋಜ್ ಕುಂದರ್ @ ಮಂಜು, ಪ್ರಾಯ(35), ತಂದೆ: ಜರ್ನಾಧನ ಕುಂದರ್, ವಾಸ: ಇಂದಿರಾ ನಿಲಯ, ವಿಠೋಬಾ ಮಂದಿರದ ಬಳಿ, ಚಿತ್ರಾಪು, ಮುಲ್ಕಿ, ಮಂಗಳೂರು.
2. ಚಂದ್ರಶೇಖರ @ ಟಿಕ್ಕಿ ಅಣ್ಣು, ಪ್ರಾಯ(32), ತಂದೆ: ಅಪ್ಪು ಪೂಜಾರಿ, ವಾಸ: 5ಸೆಂಟ್ಸ್ ಸೈಟ್ ಮನೆ, ಅತ್ತೂರು ಕಾಪಿಕಾಡ್, ಪಂಜ ಕೈಕುಡೆ ಅಂಚೆ, ಪಕ್ಷಿಕೆರೆ, ಮಂಗಳೂರು

ಎಂಬವರನ್ನು ಮುಲ್ಕಿ ಚಿತ್ರಾಪು ಎಂಬಲ್ಲಿ ವಶಕ್ಕೆ ಪಡೆದುಕೊಂಡು ಅವರ ವಶದಿಂದ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನ್ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಪ್ರಕರಣಗಳ ವಿವರ :

1. ಆರೋಪಿಗಳು ದಿನಾಂಕ: 07-12-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ಎಂಬಲ್ಲಿ ನಡೆಸಿದ ಶೂಟೌಟ್ ಪ್ರಕರಣ
2. ದಿನಾಂಕ: 08-12-2017 ರಂದು ರಾತ್ರಿ ಸುಮಾರು 8-00 ಗಂಟೆ ಸುಮಾರಿಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ ಎಂಬಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ & ಸ್ಯಾರಿಸ್ ಎಂಬ ಬಟ್ಟೆ ಮಳಿಗೆಯ ಕೆಲಸದವರಾದ ಮಹಾಲಿಂಗ ನಾಯ್ಕ್ ಎಂಬವರ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ.
3. ದಿನಾಂಕ: 23-12-2017 ರಂದು 9-00 ಗಂಟೆ ಸುಮಾರಿಗೆ ಮುಲ್ಕಿ ಬಳಿಯ ನಾಗರಾಜ್ ಎಂಬವರ ಮನೆಯ ಕಿಟಿಕಿಗೆ ಹಾಗೂ ಅವರ ಕಾರಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ.

Comments are closed.