ಕರಾವಳಿ

ಡಿಸೆಂಬರ್ 31ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ : ಹೆಸರು ನೋಂದಾಯಿಸಲು ಡಿ.25 ಕೊನೆ ದಿನ

Pinterest LinkedIn Tumblr

ಮಂಗಳೂರು, ಡಿಸೆಂಬರ್.15: ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‍ಕ್ಲಬ್ ಹಾಗೂ ಪತ್ರಿಕಾಭವನ ಟ್ರಸ್ಟ್ ವತಿಯಿಂದ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ 2017ರ ಡಿಸೆಂಬರ್ 31 ಭಾನುವಾರ ಬೆಳಗ್ಗೆ 8.30ರಿಂದ ನಗರದ ನಗರದ ನೆಹರು ಮೈದಾನ ಬಳಿಯ ಫುಟ್ಬಲ್ ಮೈದಾನದಲ್ಲಿ ನಡೆಯಲ್ಲಿದೆ.

ಕ್ರೀಡಾಕೂಟದಲ್ಲಿ 100 ಮೀ. 200 ಮೀ.,400 ಮೀ .ಓಟ, ಬಾಲ್ ಪಾಸಿಂಗ್, ಸಂಗೀತಕುರ್ಚಿ , ಮೂರುಕಾಲಿನ ಓಟ, ಗೋಣಿಚೀಲ ಓಟ, ವಾಕಿಂಗ್, ಸ್ಲೋ ಬೈಕ್‍ರೇಸ್, ಬಾಳೆ ಹಣ್ಣು ತಿನ್ನುವ ಸ್ಪರ್ಧೆ, ಕ್ರಿಕೆಟ್, ಹಗ್ಗ ಜಗ್ಗಟ ಇನ್ನಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸ್ಥಳದಲ್ಲೇ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.

(ಕಡತ ಚಿತ್ರ)

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಪತ್ರಕರ್ತರು ಹಾಗೂ ಕ್ರಿಕೆಟ್ ತಂಡಗಳ ಹೆಸರುಗಳನ್ನು ಡಿಸೆಂಬರ್ 25ರ ಒಳಗೆ ನೋಂದಯಿಸಿ ಕೊಳ್ಳಬಹುದಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿಯವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಿಯಮಗಳು:

1. ಕ್ರೀಡಾಕೂಟದಲ್ಲಿ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ಮಾತ್ರ ಅವಕಾಶ.
2. ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲ ಸ್ಪರ್ಧಾಳುಗಳು ಸಂಘದ ಅಥವಾ ಸಂಸ್ಥೆಯ ಗುರುತು ಚೀಟಿ ಹೊಂದಿರಬೇಕು.
3. ಗುಂಪು ಆಟಗಳಿಗೆ ಪ್ರತ್ಯೇಕವಾಗಿ ಸಂಸ್ಥೆಗಳ ಹೆಸರಿನಲ್ಲಿ ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ಭಾಗವಹಿಸುವ ತಂಡಗಳು ಡಿಸೆಂಬರ್ 25ರ ಮೊದಲು ಪ್ರೆಸ್ ಕ್ಲಬ್‍ನಲ್ಲಿ ಹೆಸರು ನೋಂದಾಯಿಸ ತಕ್ಕದ್ದು.
4. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಬೆಳಗ್ಗೆ 08:30ಕ್ಕೆ ಕ್ರೀಡಾಂಗಣದಲ್ಲಿ ಕಡ್ಡಾಯವಾಗಿ ಹಾಜರಿದ್ದು ತಮ್ಮ ಹೆಸರನ್ನು ನೋಂದಾಯಿಸಬೇಕು. ಆಸಕ್ತರು ಕ್ಲಪ್ತ ಸಮಯದಲ್ಲಿ ಹಾಜರಿದ್ದು ಸಹಕರಿಸಬೇಕಾಗಿ ವಿನಂತಿ.
5.ಯಾವುದೇ ಸ್ಪರ್ಧೆಯನ್ನು ರದ್ದುಪಡಿಸುವ ಅಧಿಕಾರ ಸಂಘಟಕರಿಗಿರುತ್ತದೆ.
6. ಸ್ಪರ್ಧೆಗಳಿಗೆ ನಾಯಕರು ಆಯಾ ತಂಡಗಳ ಸದಸ್ಯರ ಪೂರ್ಣ ಮಾಹಿತಿ ಹೊಂದಿಬೇಕು. ಸ್ಪರ್ಧೆಯ ವಿಚಾರದಲ್ಲಿ ಯಾವದೇ ತಕರಾರು ಕಂಡುಬಂದಲ್ಲಿ ಅವುಗಳನ್ನು ಸಂಬಂಧಪಟ್ಟವರೊಂದಿಗೆ ಮಾತುಕತೆಯ ಮೂಲಕ ಬಗೆಹರಿಸಲು ತಂಡದ ನಾಯಕರಿಗೆ ಮಾತ್ರ ಅವಕಾಶ ಇರುತ್ತದೆ.
7. ಸ್ಪರ್ಧೆಯಲ್ಲಿ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿರುತ್ತದೆ.

Comments are closed.