ಕರಾವಳಿ

ಹೆರಿಗೆ ಸಮಯದಲ್ಲಿ ಮಗುವಿನ ಸ್ಥಿತಿ ಬಗ್ಗೆ ಗರ್ಭಿಣಿಯಲ್ಲಿರುವ ಗೊಂದಲ ಮತ್ತು ಇದಕ್ಕೆ ಪರಿಹಾರ

Pinterest LinkedIn Tumblr

ರ್ಭಾವಸ್ಥೆ ಖುಷಿಯನ್ನು ತರುವ ವಿಷಯ ಅದರಲ್ಲಿ ಯಾವುದೇ ಅನುಮಾನ ಇಲ್ಲ, ಆದರೆ, ಇದು ಅದರ ಜೊತೆಗೆ ಸಂಪೂರ್ಣ ಕುತೂಹಲ ಮತ್ತು ಆತಂಕವನ್ನು ಹೊಂದಿರುತ್ತದೆ. ನೀವು ಗರ್ಭಿಣಿ ಆಗಿರುವಾಗ ನಿಮ್ಮ ತಲೆಯಲ್ಲಿ ಹಲವು ಪ್ರಶ್ನೆಗಳು ಬರುವುದು ಸಹಜ ಅದು ಹೆರಿಗೆ ಕೋಣೆಯಲ್ಲಿ ಏನಾಗುತ್ತದೆ? ಎಂಬುದರ ಬಗ್ಗೆ ಹಲವು ಪ್ರಶ್ನೆಗಳಿರುತ್ತವೆ. ಇದರ ಜೊತೆಗೆ ಎಲ್ಲರು ಪ್ರಮುಖವಾಗಿ ತಿಳಿದುಕೊಳ್ಳಬೇಕಿರುವ ವಿಷಯ ಗರ್ಭಾವಸ್ಥೆಯಲ್ಲಿ ಮಗುವಿನ ಸ್ಥಿತಿ ಅಥವಾ ಸ್ಥಾನ.

ಹೆರಿಗೆ ಸಮಯದಲ್ಲಿ ಮಗುವಿನ ಸ್ಥಿತಿ
ಮಗುವು ಯಾವ ಸ್ಥಿತಿಯಲ್ಲಿದ್ದರೆ ಹೆರಿಗೆ ಸುಲಭವಾಗುತ್ತದೆ? ಸಾಮಾನ್ಯವಾಗಿ ಹೆರಿಗೆ ಸಮಯದಲ್ಲಿ ಮಗುವು ತಲೆಕೆಳಗಾಗಿ ಇರುತ್ತದೆ.

ಆದಾಗ್ಯೂ, ನಿಮ್ಮ ಮಗುವು ಜನಿಸುವ ಮುನ್ನ ಪೆಲ್ವಿಕ್ ಜಾಗದಲ್ಲಿ ಹಲವು ಸ್ಥಿತಿಯಲ್ಲಿ ಇರಬಹುದು. ಮಗುವು ಇರುವ ಸ್ಥಿತಿಯ ಆಧಾರದ ಮೇಲೆ ಹೆರಿಗೆ ಸುಲಭ ಅಥವಾ ಕಷ್ಟವಾಗಬಹುದು. ಮಗುವು ಉದರದೊಳಗೆ ಯಾವ ಸ್ಥಿತಿಯಲ್ಲಿ ಇರಬಹುದು ಮತ್ತು ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳುವುದು ನಿಮ್ಮ ಗೊಂದಲ ನಿವಾರಣೆ ಮಾಡಲು ಸಹಾಯ ಆಗುತ್ತದೆ.

ಹೆರಿಗೆ ಸಮಯದಲ್ಲಿ ಮಗುವಿನ ವಿವಿಧ ಸ್ಥಿತಿಗಳು
ಹೆರಿಗೆಗೆ ಮುಂಚೆ ಮಗುವು ವಿವಿಧ ಸ್ಥಾನದಲ್ಲಿ ಇರಬಹುದು. ಇದು ನಿಮ್ಮ ಹೆರಿಗೆ ವಿಧಾನವನ್ನು ನಿರ್ಧಾರ ಮಾಡಲು ಸಹಾಯ ಮಾಡುತ್ತದೆ. ಹೆರಿಗೆ ಸಮಯದಲ್ಲಿ ಶಿಶು ಇರುವ ಕೆಲವು ಸಾಮಾನ್ಯ ಸ್ಥಾನಗಳು

೧.ಮುಂಗಡೆಯ ಸ್ಥಾನ – ಅತ್ಯುತ್ತಮ ಸ್ಥಾನ
ನಿಮಗೆ ಸುಲಭವಾಗಿ ಹೆರಿಗೆ ಆಗಲು ಇದು ಅತ್ಯುತ್ತಮ ಸ್ಥಾನ, ಈ ಸ್ಥಾನದಲ್ಲಿ ಮಗುವಿನ ತಲೆ ನಿಮ್ಮ ಯೋನಿಯ ಕಡೆ ಇದ್ದು, ಮಗುವಿನ ಕಾಲು ನಿಮ್ಮ ಹೊಟ್ಟೆಯ ಮುಂಭಾಗದ ಕಡೆ ಇರುತ್ತದೆ. ಇದು ನಿಮ್ಮ ಹೆರಿಗೆಯನ್ನು ಸುಲಭ ಮತ್ತು ಕಡಿಮೆ ಸಮಯದಲ್ಲಿ ಮಗುವು ಹೊರ ಬರಲು ಸಹಾಯವಾಗುತ್ತದೆ, ಮಗುವಿನ ಸ್ಥಾನ ಹೀಗೆ ಇದ್ದರೆ, ಸಾಮಾನ್ಯ ಹೆರಿಗೆಯಲ್ಲೇ ನೀವು ಮಗುವಿಗೆ ಜನ್ಮ ನೀಡಬಹುದು.

೨.ಹೆಡತಲೆ ಹಿಂಭಾಗ ಸ್ಥಾನ
ಈ ಸ್ಥಾನದಲ್ಲಿ ಮಗುವಿನ ಬೆನ್ನು ನಿಮ್ಮ ಬೆನ್ನಿನ ವಿರುದ್ಧ ದಿಕ್ಕಿನಲ್ಲಿ ಇರುತ್ತದೆ. ನಿಮ್ಮ ಮಗುವು ಈ ಸ್ಥಾನದಲ್ಲಿ ಇದ್ದರೆ ಹೆರಿಗೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಮಗುವು ತನ್ನ ತಲೆಯನ್ನು ನಿಮ್ಮ ಪೆಲ್ವಿಸ್ ಭಾಗಕ್ಕೆ ಹಾಕುವುದಕ್ಕೆ ಕಷ್ಟ ಆಗುತ್ತದೆ ಮತ್ತು ಸ್ವಲ್ಪ ಪೇಚಿನ ಸಂದರ್ಭವನ್ನು ನೀವು ಎದುರಿಸಬೇಕಾಗುತ್ತದೆ. ಇದರಿಂದ ಹೆರಿಗೆ ಸಮಯದಲ್ಲಿ ಬೆನ್ನು ನೋವನ್ನು ನೀವು ಎದುರಿಸಬೇಕಾಗುತ್ತದೆ.

ಮಗುವು ಈ ಸ್ಥಾನಕ್ಕೆ ಬರಲು ಕಾರಣ
ಅ) ಆಕಾರ ಮತ್ತು ಪೆಲ್ವಿಸ್ ನ ವಿಧ: ಸಾಮಾನ್ಯವಾಗಿ ಪೆಲ್ವಿಸ್ ವೃತ್ತಾಕಾರದಲ್ಲಿ ಇರುತ್ತದೆ.ಕೆಲವು ಮಹಿಳೆಯರು ಹೃದಯಾಕಾರದ, ಅಂಡಾಕಾರದ ಮತ್ತು ಕಿರಿದಾದ ಪೆಲ್ವಿಸ್ ಅನ್ನು ಹೊಂದಿರುವರು. ಇದರಿಂದ ಮಗುವು ಹಿಂಭಾಗ ಸ್ಥಾನಕ್ಕೆ ತಲುಪಲು ಕಾರಣವಾಗುತ್ತದೆ.

ಆ) ಜೀವನ ಶೈಲಿ: ಕಾರಿನಲ್ಲಿ ಹೆಚ್ಚು ಕುಳಿತುಕೊಳ್ಳುವುದು, ಕಛೇರಿಯಲ್ಲಿ ಕುಳಿತು ಕೆಲಸ ಮಾಡುವುದು ಜಾಸ್ತಿ ಆದರೆ ನಿಮ್ಮ ಪೆಲ್ವಿಸ್ ನ ತುದಿ ಹಿಂದಕ್ಕೆ ಬರುತ್ತದೆ.ನಿಮ್ಮ ಮಂಡಿ ಅಥವಾ ತೊಡೆಯ ಭಾಗ ಯಾವಾಗ ನಿಮ್ಮ ಪೆಲ್ವಿಸ್ ಭಾಗಕ್ಕಿಂತ ಮೇಲೆ ಇರುತ್ತದೆ ಆಗ ಈ ಮಗುವು ಈ ಸ್ಥಾನ ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

ಪರಿಹಾರ ಉಪಾಯ
ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳುವುದನ್ನು ತಪ್ಪಿಸುವುದು ಇದಕ್ಕೆ ಉತ್ತಮ ಪರಿಹಾರ.
ದೈಹಿಕ ಚಟುವಟಿಕೆಯನ್ನು ಮಾಡುವುದು ಉತ್ತಮ.
ನಿಮ್ಮ ಮಗುವಿನ ಈ ಸ್ಥಾನವನ್ನು ನೀವೇ ಮುಂಭಾಗದ ಸ್ಥಾನ ಅಥವಾ ಸ್ಥಿತಿಗೆ ಬದಲಿಸಬಹುದು.
ನಿಮ್ಮ ಮಂಡಿಯನ್ನು ನಿಮ್ಮ ಪೆಲ್ವಿಸ್ ಗಿಂತ ಕೆಳ ಭಾಗದಲ್ಲಿ ಇರಿಸುಕೊಳ್ಳಲು ವೈದ್ಯರು ನಿಮಗೆ ಮೊದಲು ಸೂಚಿಸುವರು.
ಸ್ವಲ್ಪ ದೂರ ನಡೆದಾಡುವುದು ಉತ್ತಮ.
ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬೇಡಿ.

ಮಗುವಿನ ಸ್ಥಾನದ ಬಗ್ಗೆ ನಿಮ್ಮ ಗೊಂದಲಕ್ಕೆ ಪರಿಹಾರ ಆಯಿತು ಎಂದು ಭಾವಿಸುತ್ತೇವೆ. ಇತರ ಗರ್ಭಿಣಿ ಮಹಿಳೆಯರ ಜೊತೆ ಹಂಚಿಕೊಳ್ಳಿ, ಇದರಿಂದ ಅವರ ಹೆರಿಗೆ ಕೂಡ ಸಾಮಾನ್ಯ ಮತ್ತು ಸುಲಭ ಹೆರಿಗೆಯಾಗಲು ಸಹಾಯವಾಗುತ್ತದೆ.

Comments are closed.