ಕರಾವಳಿ

ರಕ್ತಹೀನತೆ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಇದು ಅತ್ಯುತ್ತಮ

Pinterest LinkedIn Tumblr

ವಿಟಾಮಿನ್, ಖನಿಜ, ಆಂಟಿ ಆಕ್ಸಿಡೆಂಟ್‌ಗಳನ್ನು ಹೇರಳವಾಗಿ ಹೊಂದಿರುವ ಒಣ ದ್ರಾಕ್ಷಿ, ಮಕ್ಕಳು ಹಾಗೂ ದೈಹಿಕ ಕ್ಷಮತೆಯ ಕೊರತೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಅತ್ಯುತ್ತಮ. ಇವರು ಎಷ್ಟು ಸಾಧ್ಯವೇ ಅಷ್ಟು ಒಣ ದ್ರಾಕ್ಷಿಗಳನ್ನು ತಿನ್ನಬೇಕು. ಅಷ್ಟೇ ಅಲ್ಲ, ಒಣ ದ್ರಾಕ್ಷಿ ಕ್ಯಾನ್ಸರ್ ಕಾರಕ ಜೀವಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನೂ ಹೊಂದಿದೆ.

ಕೊಲೆಸ್ಟ್ರಾಲ್ ಪ್ರಮಾಣ ನಿಯಂತ್ರಣದಲ್ಲಿಡುವಲ್ಲೂ ಇದರ ಪಾತ್ರ ಮಹತ್ವದ್ದು. ಇನ್ನು ವೈರಸ್, ಫಂಗಸ್ನ ವಿರುದ್ಧ ಕೂಡ ಇದು ದೇಹಕ್ಕೆ ರಕ್ಷಣೆ ನೀಡಿ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತವಾಗುತ್ತವೆ.

ಒಣದ್ರಾಕ್ಷಿಯಲ್ಲಿ ವಿಟಮಿನ್ನುಗಳು ಹೆಚ್ಚಾಗಿವೆ. ರಕ್ತಹೀನತೆಯನ್ನು ತಡೆಯುತ್ತದೆ. ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯಿದೆ.ಇವುಗಳನ್ನು ನಿರಂತರವಾಗಿ ದಿನಕ್ಕೆ ಆರು ಇಲ್ಲ ಐದು ತೆಗೆದುಕೊಂಡರೆ ಸಣ್ಣಕರುಳಿನಲ್ಲಿರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರಹೊಗುತ್ತವೆ.ಒಣದ್ರಾಕ್ಷಿಯಲ್ಲಿ ಪ್ರೊಟೀನ್, ವಿಟಮಿನ್ನುಗಳು ಹೆಚ್ಚಿರುವುದರಿಂದ ತುಂಬಾ ಸಣ್ಣ ಇರುವವರು ತೆಗೆದುಕೊಳ್ಳಬಹುದು.

ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಿಕೊಳ್ಳಲು ಒಣದ್ರಾಕ್ಷಿ ತಿನ್ನುವುದು ಉತ್ತಮ.ಇವುಗಳಲ್ಲಿನ ಕೊಲೆಸ್ಟರಾಲ್, ವಿಟಮಿನ್ನುಗಳು ಮುಂತಾದವು ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿ ನೀಡುತ್ತವೆ.
ಒಣದ್ರಾಕ್ಷಿಯಲ್ಲಿನ ಯಾಂಟೀಯಾಕ್ಸಿಡೆಂಟ್’ಗಳು ಕ್ಯಾನ್ಸರ್ ಕಣಗಳನ್ನು ದೂರ ಮಾಡುತ್ತವೆ. ಹೈಬಿಪಿಯನ್ನು ನಿವಾರಿಸುತ್ತದೆ.

ಇವುಗಳಲ್ಲಿನ ಪೊಟಾಸಿಯಂ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿಸುತ್ತದೆ.ಒಣದ್ರಾಕ್ಷಿಯಲ್ಲಿನ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣ ಇರುವುದರಿಂದ ರಕ್ತಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿವೆ.

Comments are closed.