ರಾಷ್ಟ್ರೀಯ

ನನಗೆ ಹೆಚ್ಚು ಸಹಾಯ ಮಾಡಿರುವ ಮೋದಿಯನ್ನು ದ್ವೇಶಿಸುವುದಿಲ್ಲ: ರಾಹುಲ್ ಗಾಂಧಿ

Pinterest LinkedIn Tumblr

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ನನಗೆ ಹೆಚ್ಚು ಸಹಾಯ ಮಾಡಿದ್ದಾರೆ, ಅವರನ್ನು ದ್ವೇಷಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನನಗೆ ಸಹಾಯ ಮಾಡಿರುವ ಮೋದಿ ಅವರನ್ನು ನಾನು ಹೇಗೆ ದ್ವೇಷಿಸಲಿ ಎಂದು ರಾಹುಲ್ ಗಾಂಧಿ ಗುಜರಾತ್ ನ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ನೆಹರು ಗಾಂಧಿ ಕುಟುಂಬದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟೀಕೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಾಹುಲ್ ಗಾಂಧಿ ಭಾರತದ ಧರ್ಮ ಹಾಗೂ ಇತಿಹಾಸವನ್ನು ಗಮನಿಸಿದರೆ ದ್ವೇಷಕ್ಕೆ ಪ್ರೀತಿಯೇ ಪ್ರತ್ಯುತ್ತರ ಎಂಬುದು ತಿಳಿಯುತ್ತದೆ, ನನ್ನಲ್ಲಿ ಕೋಪ ಹಾಗೂ ದ್ವೇಷಕ್ಕೆ ಜಾಗವಿಲ್ಲ, ಇದನ್ನು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಂದ ನಮ್ಮ ಮನೆತನದವರು ಅಳವಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Comments are closed.