ಕರಾವಳಿ

ಮಕ್ಕಳ ಬೆಳಗಿನ ಬ್ರೇಕ್ ಫಾಸ್ಟ್’ಗೆ ಇದನ್ನ ನೀಡಿ ವಿಟಮಿನ್ ಡಿ ಸಮಸ್ಯೆಯಿಂದ ದೂರ ಇರಿಸಿ

Pinterest LinkedIn Tumblr

ಮಕ್ಕಳಿಂದ ದೊಡ್ಡವರವರೆಗೂ ಮೊಟ್ಟೆಯನ್ನು ಇಷ್ಟಪಡದವರಿಲ್ಲ. ಬೆಳೆಯುವ ಮಕ್ಕಳಿಗೆ ಅಗತ್ಯವಾದ ಪ್ರೋಟೀನ್ ಅನ್ನು ನೀಡುವುದರಲ್ಲಿ ಮೊಟ್ಟೆಗೆ ಮಿಗಿಲಾದ ಮತ್ತೊಂದಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾಗಿ ಅವರು ಪ್ರತಿದಿನ ಒಂದು ಮೊಟ್ಟೆ ತಿನ್ನಲು ಸಲಹೆ ನೀಡುತ್ತಾರೆ. ಮೊಟ್ಟೆ ಬೇಗ ಜೀರ್ಣವಾಗುವುದಿಲ್ಲ ಆದ್ದರಿಂದಾಗಿ ಬೇಗನೆ ಹಸಿವಾಗುವುದಿಲ್ಲ. ಮೊಟ್ಟೆ ಮಾಂಸ ಖಂಡಗಳ ಬೆಳವಣಿಗೆಗೆ ಸಹಕಾರಿ. ಮೊಟ್ಟೆಗಳಲ್ಲಿ ಪೋಷಕಾಂಶಗಳು, ಖನಿಜಗಳು, ವಿಟಮಿನ್’ಗಳು ತುಂಬಾ ಇವೆ. ಹಾಗಾಗಿ ಇವುಗಳನ್ನು ಆಹಾರದಲ್ಲಿ ತಪ್ಪದೇ ತೆಗೆದುಕೊಳ್ಳುವುದು ಒಳ್ಳೆಯದು. ಬೆಳಗ್ಗೆ ತಿಂಡಿಗೆ ಮೊಟ್ಟೆ ತೆಗೆದುಕೊಳ್ಳುವುದು ಇನ್ನೂ ಒಳ್ಳೆಯದೆಂದು ತಜ್ಞರು ಸೂಚಿಸಿದ್ದಾರೆ. ಇಷ್ಟಕ್ಕೂ ಆ ಪ್ರಯೋಜಗಳು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಬೆಳಗ್ಗೆ ಬ್ರೇಕ್ ಫಾಸ್ಟ್’ಗೆ ಮೊಟ್ಟೆ ತಿಂದರೆ:
ಬೆಳಗಿನ ಸಮಯದಲ್ಲಿ ಅಲ್ಪಹಾರವಾಗಿ ಮೊಟ್ಟೆಯನ್ನು ತೆಗೆದುಕೊಂಡರೆ ಹೊಟ್ಟೆಯಲ್ಲಿ ಹೆಚ್ಚಿನ ಸಮಯ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತದೆ. ಹಸಿವಾಗದಂತೆ ಮಾಡಿ ಹೆಚ್ಚಿನ ಆಹಾರ ಸೇವಿಸದಂತೆ ಮಾಡುತ್ತದೆ. ಹೀಗೆ ಮೊಟ್ಟೆಗಳು ತೂಕ ಕಡಿಮೆಯಾಗಲು ಸಹಕರಿಸುತ್ತವೆ.

ಪ್ರೋಟೀನ್’ಗಳಿಂದ ತುಂಬಿರುವ ಮೊಟ್ಟೆಗಳಿಂದ ನಮಗೆ ಅಗತ್ಯವಾದ ಎಲ್ಲಾ ತರಹದ ಅಮೈನೊ ಆಮ್ಲಗಳು ದೊರೆಯುತ್ತವೆ. ಶಾರೀರಿಕ ಶ್ರಮ ಹೆಚ್ಚು ಮಾಡುವಾಗ ಮತ್ತೆ ಶಕ್ತಿಯನ್ನು ಶೇಕರಿಸಿಕೊಳ್ಳಲು ಇವು ಎಷ್ಟೋ ಉಪಯೋಗವಾಗುತ್ತವೆ.

ಎಗ್ ನಲ್ಲಿ ವಿಟಮಿನ್ ಡಿ ತುಂಬಾ ಇರುತ್ತದೆ. ಶರೀರಕ್ಕೆ ಅಗತ್ಯವಾಗ ಬಿಸಿಲು ಸಿಗದಿರುವುದು, ಸರಿಯಾದ ಪೋಷಕಾಂಶಗಳನ್ನು ತೆಗೆದುಕೊಳ್ಳದಿರುವುದರಿಂದ ಪ್ರಸ್ತುತ ತುಂಬಾ ಜನರಿಗೆ ವಿಟಮಿನ್ ಡಿ ಲೋಪದಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಮೊಟ್ಟೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

ನಮ್ಮ ಶರೀರ ಅಗತ್ಯವಿರುವಷ್ಟು ಕಾಲಿನ್ ಅನ್ನು ಉತ್ಪತ್ತಿ ಮಾಡಿಕೊಳ್ಳಲಾರದು. ಇದು ಕಡಿಮೆಯಾದರೆ ಲಿವರ್ ಸಂಬಂಧಿಸಿದ ಕಾಯಿಲೆಗಳು, ನಾಳಗಳು ದಪ್ಪ ಮಾಡುವುದು, ನಾಡಿ ಸಮಸ್ಯೆಗಳಂತಹವು ಬರಲು ದಾರಿ ಮಾಡಿಕೊಡುತ್ತದೆ. ಆದ್ದರಿಂದ ಕಾಲಿನ್ ಅಧಿಕವಾಗಿರುವ ಮೊಟ್ಟೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಮುಖ್ಯವಾಗಿ ಗರ್ಭಿಣಿಯರಿಗೆ ಇದು ತುಂಬಾ ಅವಶ್ಯಕ.

Comments are closed.