ಕರಾವಳಿ

ಉಡುಪಿಗೆ ಭೇಟಿ ನೀಡಿದ ಶ್ರೀ ರವಿಶಂಕರ್ ಗುರೂಜಿ: ಪೇಜಾವರ ಶ್ರೀ ಜೊತೆ ಮಾತುಕತೆ

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ರವಿಶಂಕರ್ ಗುರೂಜಿ ಭಾಗವಹಿಸದ‌ ಹಿನ್ನಲೆಯಲ್ಲಿ ಸಂತರಿಂದ ಭಾರೀ ಠೀಕೆಗೆ ಒಳಾಗಿದ್ದರು , ಈ ಹಿನ್ನಲೆಯಲ್ಲಿ ಇಂದು ಧೀಢಿರನೇ ಶ್ರಿ ರವಿಶಂಕರ್ ಗುರೂಜಿ ಉಡುಪಿಗೆ ಭೇಟಿ ನೀಡಿ ಪೇಜಾವರ ಶ್ರೀಗಳನ್ನ ಜೊತೆ ಮಾತುಕತೆ ನಡೆಸಿದ್ದಾರೆ.

ಬೆಳಿಗ್ಗೆ ಅಗಮಿಸಿದ ಶ್ರೀಗಳು ಶ್ರೀ ಕೃಷ್ಣನ ದರುಶನ ಪಡೆದು ನಂತರ ಮಠದ ಬಡಗು ಮಾಳಿಗೆಯಲ್ಲಿ ಸುಮಾರು ಅರ್ಧ ತಾಸುಗಳ ಕಾಲ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತುಕತೆ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರವಿಶಂಕರ್ ಗುರೂಜಿ, ಧರ್ಮ ಸಂಸತ್ತಿನ ಸಂತರ ಆಕ್ಷೇಪಕ್ಕೆ ಲೋಕೋ ಭಿನ್ನರುಚಿ ಅಂತಾ ಹೇಳಿದ್ರು.ರಾಮ‌ ಮಂದಿರ ನಿರ್ಮಾಣ ವಿಚಾರದಲ್ಲಿ ನಾನು ಸೌಹಾರ್ಧ ಪ್ರಯತ್ನ ಮುಂದುವರಿಸುತ್ತೇನೆ ಆರಂಭದಿಂದಲೂ ಈ ವಿಷಯವನ್ನು ಕೋರ್ಟ್ ನ ಹೊರಗೆ ಬಗೆಹರಿಸಲು ಯತ್ನಸಿದ್ದೇನೆ. ನಾನು ಭೇಟಿಯಾದವರೆಲ್ಲಾ ರಾಮಮಂದಿರದ ಪರವಾಗಿದ್ದಾರೆ. ಮುಸ್ಲಿಂ ರೂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಧರ್ಮ ಸಂಸದ್ ನಲ್ಲಿ ಸಂತರ ಅಸಮಾಧನ ವ್ಯಕ್ತಪಡಿಸಿದ ಬಗ್ಗೆ ಲೋಕೊ ಭಿನ್ನರುಚಿ ಅಂತಾ ತಮ್ಮದೇ ದಾಟಿಯಲ್ಲಿ ಉತ್ತರಿಸಿದರು.

ಬಾಬ್ರಿ‌ ಮಸೀದಿ ಧ್ವಂಸಗೊಳಿಸಿದ ೩೫ ನೇ ವರುಷದ ಹಿನ್ನಲೆಯಲ್ಲಿ ಶ್ರೀಗಳಿಬ್ಬರ ಭೇಟಿ ಭಾರೀ ಮಹತ್ವ ಪಡಕೊಂಡಿದೆ.

ಈ ಬಗ್ಗೆ ಇಬ್ಬರ ಮಾತುಕತೆಯ ವಿವರವನ್ನ ಹೇಳಲು‌ ನಿರಾಕರಿಸಿದ ಪೇಜಾವರ ಶ್ರೀಗಳು, ಧರ್ಮ ಸಂಸದ್ ನಿರ್ಣಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ, ರವಿ ಶಂಕರ್ ಗೂರುಜಿ ಕೂಡ ರಾಮ‌ಮಂದಿರ ನಿರ್ಮಾಣದ ಬಗ್ಗೆ ಒಲವು ಹೊಂದಿದ್ದಾರೆ, ಸೌಹರ್ಧಯುತವಾಗಿ ನ್ಯಾಯಲಯದ ಹೊರಗಡೆ ಇತ್ಯರ್ಥಕ್ಕೆ ಪ್ರಯತ್ನ ಮಾಡಿದ್ದಾರೆ. ಗುರೂಜಿ ಧರ್ಮ ಸಂಸದ್ ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ ಅಂತಾ ನಾನು ಹೇಳಲಾರೆ .ಅವರ ನಿಲುವು ಮತ್ತು ನಮ್ಮ ನಿಲುವುಗಳು ಕೂಡ ಒಂದೇ ಅಗಿದೆ ಎಂದು ಹೇಳಿದರು.

ಒಟ್ಟಿನಲ್ಲಿ ರಾಮ‌ಮಂದಿರದ ಬಗ್ಗೆ ಮದ್ಯಸ್ಥಿಕೆ ವಹಿಸಲು ಹೋಗಿದ್ದ ರವಿ ಶಂಕರ್ ಗೂರುಜಿ ಧರ್ಮ ಸಂಸದ್ ನಲ್ಲಿ ಸಂತರ ಕೆಂಗಣ್ಣಿಗೆ ಗುರಿಯಾಗಿದ್ದರು.ಇದೀಗ ಪೇಜಾವರ ಶ್ರೀಗಳನ್ನ ಭೇಟಿ ಚರ್ಚೆ ಮಾಡುವ ಮೂಲಕ ಭಿನ್ನಭಿಪ್ರಾಯಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

Comments are closed.