ಕರಾವಳಿ

ಎಟಿಎಂಕಾರ್ಡ್ ಮೂಲಕ ಇನ್ಸೂರೆನ್ಸ್ ಕ್ಲೈಂ – ಯಾವ ಎಟಿಎಂಕಾರ್ಡ್ ಗಳಿಗೆ ಇದು ಅನ್ವಯ..! ಇಲ್ಲಿದೆ.ವಿವರ..!

Pinterest LinkedIn Tumblr

ಡಿಮಾನಿಟೈಜೇಷನ್ ನಂತರ ಎಲ್ಲಾ ವ್ಯವಹಾರಗಳು ಅನ್ ಲೈನ್ ಮೂಲಕವೇ ನಡೆಯುತ್ತಿವೆ. ಜೇಬಿನಲ್ಲಿ ಹಣವಿಲ್ಲದೆ ಟ್ರಾನ್ಸಾಕ್ಷನ್ಸ್, ಪೇಟಿಎಂ ನಂತಹ ಸೇವೆಗಳ ಮೊರೆ ಹೋಗುತ್ತಿರುವವರೇ ಹೆಚ್ಚಾಗಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನವರು ಎಟಿಎಂ ಕಾರ್ಡ್ ಹೊಂದಿದ್ದಾರೆೆ. ಅಲ್ಲದೆ ಬ್ಯಾಂಕುಗಳು ಸಹಾ ಪ್ರತಿಯೊಬ್ಬರಿಗೂ ಎಟಿಎಂ ನೀಡುತ್ತಾ ಅದರ ಮೂಲಕವೇ ಕೆಲಸ ನಡೆಯುವಂತೆ ಸಹಕರಿಸುತ್ತಿವೆ. ನಿಮಗೆ ತಿಳಿಯದ ಇನ್ನೊಂದು ವಿಷಯ ಏನೆಂದರೆ….ಎಟಿಎಂ ಮೂಲಕ ಇನ್ಸೂರೆನ್ಸ್ ಕ್ಲೈಂ ಮಾಡಿಕೊಳ್ಳಬಹದು. ಯಾವ ರೀತಿಯ ಕಾರ್ಡ್ ಗಳಿಗೆ ಇದು ಅನ್ವಯಿಸುತ್ತದೆ ಎಂಬ ವಿವರಗಳನ್ನು ತಿಳಿದುಕೊಳ್ಳೋಣ….

ಶೇ.90 ರಷ್ಟು ಗ್ರಾಹಕರಿಗೆ ಬ್ಯಾಂಕುಗಳು ರೂಪೇ, ಎಟಿಎಂ ಕಾರ್ಡುಗಳನ್ನೇ ನೀಡುತ್ತಿವೆ. ಪ್ರಧಾನಮಂತ್ರಿ ಜನ್ ಧನ್ ಯೋಜನೆಯ ಮೂಲಕ ಖಾತೆ ತೆರೆದಿರುವವರಿಗೆ ರೂಪೇ, ಎಟಿಎಂ ಕಾರ್ಡುಗಳನ್ನೇ ಹಂಚಿಕೆ ಮಾಡಿವೆ. ಎಲ್ಲಾ ಗ್ರಾಮೀಣ ಬ್ಯಾಂಕುಗಳು ತಮ್ಮ ಖಾತೆದಾರರಿಗೆ ಕಡ್ಡಾಯವಾಗಿ ರೂಪೇ ಕಾರ್ಡ್ ನೀಡುತ್ತಿವೆ. ರೂಪೇ ಕಾರ್ಡುದಾರರು ಇನ್ಸೂರೆನ್ಸ್ ಪಡೆಯಲು ಅರ್ಹರಾಗಿದ್ದು, ಇವರಿಗೆ ಕೇಂದ್ರದಿಂದ ರೂ.1-2 ಲಕ್ಷಗಳವರೆಗೆ ಇನ್ಸೂರೆನ್ಸ್ ನೀಡುತ್ತದೆ. ಎಲ್ಲಾ ಬ್ಯಾಂಕುಗಳ ರೂಪೇ, ಎಟಿಎಂ, ಡೆಬಿಟ್ ಕಾರ್ಡುದಾರರಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಇತ್ತೀಚೆಗೆ ಸರ್ಕಾರವು ತಿಳಿಸಿದೆ.

ಅಪಘಾತದಲ್ಲಿ ಸಾವನ್ನಪ್ಪಿದಲ್ಲಿ, ಶಾಶ್ವತವಾಗಿ ವಿಕಲಚೇತನರಾದವರಿಗೆ ಇನ್ಸೂರೆನ್ಸ್ ಲಭಿಸುತ್ತದೆ.
ರೂಪೇ ಕ್ಲಾಸಿಕ್ ಕಾರ್ಡುದಾರರಿಗೆ ರೂ.1ಲಕ್ಷ, ರೂಪೇ ಪ್ರೀಮಿಯಂ ಕಾರ್ಡುದಾರರಿಗೆ ರೂ.2ಲಕ್ಷಗಳನ್ನು ಅವರ ಕುಟುಂಬ ಸದಸ್ಯರಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಇಂಡಿಯಾ ನೀಡುತ್ತದೆ.
ಅಪಾಘಾತ ನಡೆದ 90 ದಿನಗಳಲ್ಲಿ ಇನ್ಸೂರೆನ್ಸ್ ಅನ್ನು ಕ್ಲೈಂ ಮಾಡಿಕೊಳ್ಳಬೇಕು. ನಾಮಿನಿ ಅಥವಾ ಅವರ ವಾರಸುದಾರರು ಇದಕ್ಕೆ ಅರ್ಹರು.

ಎಟಿಎಂ ಮೂಲಕ ಲಭಿಸುವ ಲೋನ್ ಗಳು…
ರೂ.15ಲಕ್ಷಗಳವರೆಗೆ ವೈಯಕ್ತಿಕ ಲೋನ್ ನೀಡಲು ಐಸಿಐಸಿಐ ಬ್ಯಾಂಕು ಮುಂದಾಗಿದೆ. ಆಯ್ಕೆಗೊಂಡ ಗ್ರಾಹಕರಿಗೆ 5 ವರ್ಷಗಳ ಅವಧಿಗೆ ಲೋನ್ ನೀಡಲಿದ್ದಾರೆ. ಎಟಿಎಂ ಮೂಲಕ ನಗದನ್ನು ಟ್ರಾನ್ಸಾಕ್ಷನ್ ಮಾಡುವ ಸಮಯದಲ್ಲಿ ಸ್ಕ್ರೀನ್ (ಪರದೆ) ಮೇಲೆ ಲೋನ್ ಕುರಿತು ಬರುವ ಮೆಸೇಜ್ ನ್ನು ಆಯ್ಕೆ ಮಾಡಿಕೊಂಡಲ್ಲಿ ರೂ.15ಲಕ್ಷಗಳವರೆಗೆ ಲೋನ್ ಪಡೆಯಬಹುದೆಂದು ಐಸಿಐಸಿಐ ಪ್ರಕಟಣೆಯೊಂದರಲ್ಲಿ ತಿಳಿಸಿದೆ. ನಮಗೆ ಅವಶ್ಯಕವಿರುವ ಲೋನ್ ಮೊತ್ತವನ್ನು ಆಯ್ಕೆ ಮಾಡಿಕೊಂಡಲ್ಲಿ ಕೂಡಲೇ ಅಷ್ಟು ಮೊತ್ತವು ಗ್ರಾಹಕರ ಖಾತೆಗೆ ವರ್ಗವಾಗುತ್ತದೆ. ಇದರೊಂದಿಗೆ ಬಡ್ಡಿಯ ದರ, ಪ್ರೊಸೆಸಿಂಗ್ ಶುಲ್ಕ, ತಿಂಗಳ ವಾಯಿದೆ ಇನ್ನಿತರ ವಿವರಗಳನ್ನು ಪರದೆಯ ಮೇಲೆಯೇ ನೋಡಬಹುದು. 60 ತಿಂಗಳ ಫಿಕ್ಸೆಡ್ ಕಾಲಾವಧಿಯಲ್ಲಿ ರೂ.15ಲಕ್ಷಗಳವರೆಗೆ ವೈಯಕ್ತಿಕ ಲೋನ್ ಪಡೆಯಬಹುದೆಂದು ಸ್ಪಷ್ಟಪಡಿಸಿದೆ. ಈ ಎಲ್ಲಾ ನಿಯಮಗಳು ಒಪ್ಪಿಗೆಯಾದಲ್ಲಿ ಎಟಿಎಂನಲ್ಲಿಯೇ ಲೋನ್ ಪಡೆಯಬಹುದು.

Comments are closed.