ಕರಾವಳಿ

ಮುಖದ ಸೌಂದರ್ಯ ಹೆಚ್ಚಲು ಈ ಮಿಶ್ರಣ ಬಳಸಿ, ವ್ಯತ್ಯಾಸ ಕಾಣಿರಿ

Pinterest LinkedIn Tumblr

ಮುಖ ತೊಳೆದುಕೊಳ್ಳುವುದು ನಾವು ನಿತ್ಯ ಮಾಡುವಂತಹ ಕೆಲಸಗಳಲ್ಲಿ ಒಂದು. ಆದರೆ ಇಲ್ಲಿ ಗಮನಿಸಬೇಕಾದದ್ದು ಏನೆಂದರೆ…ನಾವು ಏನನ್ನು ಬಳಸಿ ಮುಖ ತೊಳೆದುಕೊಳ್ಳುತ್ತಿದ್ದೇವೆ ಎಂಬುದು..! ಅದನ್ನೇ ಈಗ ನೋಡುವುದಾದರೆ… ನಾವು ಬಹಳಷ್ಟು ಉತ್ಪನ್ನಗಳನ್ನು ಅದಕ್ಕಾಗಿ ಬಳಸುತ್ತಿದ್ದೇವೆ. ಜಾಹೀರಾತು ನೋಡಿ, ಯಾರೋ ಹೇಳಿದನ್ನು ಕೇಳಿ, ಎಲ್ಲೋ ಓದಿ ನಾನಾ ರೀತಿಯ ಉತ್ಪನ್ನಗಳನ್ನು ಮುಖ ತೊಳೆಯಲು ಬಳಸುತ್ತೇವೆ. ಆದರೆ ಅವುಗಳಲ್ಲಿ ಇರುವ ಕೆಮಿಕಲ್ಸ್ ನಮ್ಮ ಮುಖಕ್ಕೆ ತುಂಬಾ ಹಾನಿ ಮಾಡುತ್ತಿವೆ ಎಂಬುದು ಮಾತ್ರ ಆಲೋಚಿಸಲ್ಲ. ಹಾಗಿದ್ದರೆ ಏನು ಬಳಸಬೇಕು? ಮುಖ ಕಾಂತಿಯುತವಾಗಿ ಹೇಗೆ ಬದಲಾಗುತ್ತದೆ…? ಮುಖದ ಮೇಲಿನ ಮಚ್ಚೆಗಳು, ಮೊಡವೆಗಳು ಹೇಗೆ ಹೋಗುತ್ತವೆ..? ಎಂಬುದನ್ನೇ ಅಲ್ಲವೇ ನೀವು ಕೇಳುವುದು. ಅದಕ್ಕೆ ಪರಿಹಾರವೂ ಇದೆ. ನಮ್ಮ ಮನೆಯಲ್ಲೇ ಸಿಗುವ ಎರಡು ಪದಾರ್ಥಗಳಿಂದ ತಯಾರು ಮಾಡುವ ಮಿಶ್ರಣ ಬಳಸಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಅಷ್ಟೇ ಅಲ್ಲ, ಮುಖದ ಮೇಲಿರುವ ಮಚ್ಚೆಗಳು ನಿವಾರಣೆಯಾಗುತ್ತವೆ. ಇಷ್ಟಕ್ಕೂ ಆ ಪದಾರ್ಥಗಳು ಯಾವುದು..? ಆ ಮಿಶ್ರಣವನ್ನು ಹೇಗೆ ತಯಾರಿಸಿಕೊಳ್ಳಬೇಕು…

ಒಂದು ಪಾತ್ರೆಯನ್ನು ತೆಗೆದುಕೊಂಡು ಅರ್ಧ ಟೀಸ್ಫೂನ್ ಬೇಕಿಂಗ್ ಸೋಡಾ, 1 ಟೀಸ್ಫೂನ್ ಕೊಬ್ಬರಿ ಎಣ್ಣೆಯನ್ನು ಬೆರೆಸಬೇಕು. ಆದರೆ ಸೂಕ್ಷ್ಮವಾದ ಚರ್ಮ ಇರುವವರು 1/4 ಟೀಸ್ಫೂನ್ ಬೇಕಿಂಗ್ ಸೋಡಾ ಬಳಸಿದರೂ ಸಾಕು. ಈ ರೀತಿ ಹೇಳಿದ ಪ್ರಮಾಣದಲ್ಲಿ ಎರಡು ಪದಾರ್ಥಗಳನ್ನು ಬೆರೆಸಿ ಮಿಶ್ರಣ ಮಾಡಿಕೊಳ್ಳಬೇಕು. ಇದನ್ನು ಮುಖಕ್ಕೆ ಹಚ್ಚಿಕೊಳ್ಳಬೇಕು. ಒಂದು ನಿಮಿಷದ ಬಳಿಕ ಬಿಸಿಯಾಗಿರುವ ನ್ಯಾಪ್‌ಕಿನ್ ಟವಲ್‌ನೊಂದಿಗೆ ವರೆಸಿಕೊಳ್ಳಬೇಕು. ಇದರಿಂದ ಖಂಡಿತ ವ್ಯತ್ಯಾಸ ನಿಮಗೇ ಗೊತ್ತಾಗುತ್ತದೆ. ಈ ರೀತಿ ಮಾಡುವುದರಿಂದ ಏನೆಲ್ಲಾ ಲಾಭಗಳಾಗುತ್ತಿವೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

1. ಮೇಲೆ ತಿಳಿಸಿದ ವಿಧದಲ್ಲಿ ಮಿಶ್ರಣವನ್ನು ತಯಾರು ಮಾಡಿಕೊಂಡು ನಿತ್ಯ ಬಳಸುತ್ತಿದ್ದರೆ ಅದರಿಂದ ಮುಖ ಕಾಂತಿಯುತವಾಗಿ ಬದಲಾಗುತ್ತದೆ. ಚರ್ಮ ಮೃದುವಾಗುತ್ತದೆ.
2. ಮುಖದ ಮೇಲೆ ಇರುವ ಮಚ್ಚೆಗಳು, ಮೊಡವೆಗಳು ನಿವಾರಣೆಯಾಗುತ್ತವೆ. ಅವು ಇದ್ದವೆಂಬ ವ್ಯತ್ಯಾಸವೂ ಗೊತ್ತಾಗದಂತೆ ಮುಖ ಬದಲಾಗುತ್ತದೆ.
3. ರೆಗ್ಯುಲರ್ ಆಗಿ ಈ ಮಿಶ್ರಣವನ್ನು ಬಳಸಿದರೆ ಒಣ ಚರ್ಮ ಸಮಸ್ಯೆ ಬರಲ್ಲ. ಚರ್ಮ ಮೃದುವಾಗಿ, ಕಾಂತಿಯುತವಾಗಿ ಬದಲಾಗುತ್ತದೆ.
4. ಮುಖದ ಮೇಲೆ ಇರುವ ಚರ್ಮದ ಪಿಎಚ್ ಪ್ರಮಾಣ ಬ್ಯಾಲೆನ್ಸ್ ಆಗುತ್ತದೆ. ಇದರಿಂದ ಚರ್ಮ ಆರೋಗ್ಯವಾಗಿ ಇರುತ್ತದೆ.
5. ಮುಖದ ಚರ್ಮದೊಳಗಿನ ರಕ್ತನಾಳಗಳಲ್ಲಿ ರಕ್ತ ಸಂಚಲನೆ ಉತ್ತಮಗೊಳ್ಳುತ್ತದೆ. ಇದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ.

ಆದರೆ ಈ ಮಿಶ್ರಣವನ್ನು ಬಳಸುವ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು ತೇವ ಇಲ್ಲದಂತೆ ವರೆಸಿಕೊಳ್ಳಬೇಕು. ಆ ಬಳಿಕ ಇದನ್ನು ಅಪ್ಲೈ ಮಾಡಿದರೆ ಒಳ್ಳೆಯ ಫಲಿತಾಂಶ ಪಡೆಯಬಹುದು. ಈ ಮಿಶ್ರಣ ಕೂದಲಿಗೆ ಯಾವುದೇ ಕಾರಣಕ್ಕೂ ತಗಲಬಾರದು. ಏಕೆಂದರೆ ಕೂದಲು ಜಿಡ್ಡುಜಿಡ್ಡಾಗುತ್ತದೆ.

Comments are closed.