ಕರಾವಳಿ

ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ: ಭಾರತ ಮಾಂಸ ರಫ್ತು ಮುಕ್ತ ಆಗಬೇಕು, ಲವ್ ಜಿಹಾದ್ ನಿಲ್ಲಬೇಕೆಂಬ ಆಗ್ರಹ

Pinterest LinkedIn Tumblr

ಉಡುಪಿ: ದೇಶದಾದ್ಯಂತ ಗಮನಸೆಳೆದಿದ್ದ ವಿಶ್ವಹಿಂದೂ ಪರಿಷತ್ ನ ಮೂರು ದಿನಗಳ ಧರ್ಮ ಸಂಸದ್ ಗೆ ತೆರೆ ಬಿದ್ದಿದೆ. ಸಾಧು ಸಂತರಿಂದ ಹಲವಾರು ನಿರ್ಣಯದ ಘೋಷಣೆ ಮೊಳಗಿದೆ. ವಿರಾಟ ಹಿಂದೂ ಸಮಾಜೋತ್ಸವದ ಹಿನ್ನಲೆಯಲ್ಲಿ ಕೃಷ್ಣನ ನಗರಿ ಕೇಸರಿಮಯವಾಗಿ ಮಾರ್ಪಾಡಾಗಿತ್ತು…ಮೂರನೇ ದಿನದ ಧರ್ಮ ಸಂಸದ್ ನ ಡೀಟೇಲ್ಸ್ ಇಲ್ಲಿದೆ.

=

ಉಡುಪಿಯ ರಾಯಲ್ ಗಾರ್ಡನಲ್ಲಿ ಹಮ್ಮಿಕೊಂಡಿದ್ದ ವಿಶ್ವಹಿಂದೂಪರಿಷತ್ ನ ಮೂರು ದಿನಗಳ ಧರ್ಮ ಸಂಸದ್ ಗೆ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ಪ್ರಮುಖ ವಿಚಾರಗಳ ಬಗ್ಗೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾಧು ಸಂತರು ತಮ್ಮ ವಿಚಾರವನ್ನು ಮಂಡಿಸಿದರು. ಮೊದಲನೇ ದಿನ ರಾಮಮಂದಿರದ ಬಗ್ಗೆ ಚರ್ಚೆ ಆದ್ರೆ, ಎರಡನೇ ದಿನ ಅಶ್ಪ್ರಶ್ಯತೆ, ಮತಾಂತರದ ಬಗ್ಗೆ ಚರ್ಚೆ ನಡೆದಿತ್ತು. ಇಂದು ಮೂರನೇ ದಿನ ಗೋ ಹತ್ಯೆ ಹಾಗೂ ಗೋ ಸಂರಕ್ಷಣೆಯ ಬಗ್ಗೆ ಸಾಧು ಸಂತರು ತಮ್ಮ ವಾದ ಮಂಡಿಸಿದರು. ಉಡುಪಿಯ ರಾಯಲ್ ಗಾರ್ಡನ್ ನಲ್ಲಿ ಸಾಧು ಸಂತರು ಗೋ ಹತ್ಯೆಯ ಬಗ್ಗೆ ಚರ್ಚೆ ನಡೆಸಿದರೆ ಇತ್ತ ಕೃಷ್ಣ ಮಠದ ರಾಜಾಂಗಣದಲ್ಲಿ ಜಾತಿ ಮುಖಂಡರ ಸಮಾವೇಶ ನಡೆಯಿತು.ಕರ್ನಾಟಕದ ರಾಜ್ಯದಿಂದ ೨೬೦೦ಕ್ಕೂ ಅಧಿಕ ಜಾತಿಯ ಮುಖಂಡರು ಇದರಲ್ಲಿ ಭಾಗವಹಿಸಿದ್ದರು.ಧರ್ಮ ಸಂಸದ್ ನಲ್ಲಿ ಕೆಲವೊಂದು ಸಾಧು ಸಂತರಂತೂ ವಿವಾದಾತ್ಮಕ ಹೇಳಿಕೆಯನ್ನು ನೀಡಿದರು.ತೆರಿಗೆ ಪಾವತಿ ಮಾಡುವ ಹಿಂದೂಗಳು ೨ಮಕ್ಕಳನ್ನು ಹೊಂದಿದರೆ ತೆರಿಗೆ ಪಾವತಿ ಮಾಡದ ಮುಸ್ಲೀಮರು ೪ಹೆಂದತಿ ಹೊಂದಿ ೨೦ಮಕ್ಕಳು ಹೊಂದುತ್ತಾರೆ. ಚೈನಾ ಮಾದರಿಯಲ್ಲಿ ಕಠಿನ ಜನಸಂಖ್ಯಾ ನಿಯಂತ್ರಣ ಕಾನೂನು ಬಾರತದಲ್ಲಿ ಬರಬೇಕು ಎಂದು ಕಾಶಿಯ ಪೀಠಾಧಿಪತಿ ನರೇಂದ್ರ ನಾಥ್ ಕರೆ ನೀಡಿದರು.

Hilights…

*ಭಾರತ ಮಾಂಸ ರಪ್ತು ಮುಕ್ತ ಆಗಬೇಕು.
*ಗೋ ಹತ್ಯೆ ಪ್ರತೀ ರಾಜ್ಯದಲ್ಲೂ ನಿಷೇಧ ಆಗಬೇಕು.
*ಗೋ ಮಂತ್ರಾಲಯ ಸ್ಥಾಪನೆ ಮಾಡಬೇಕು.
*ಭಾರತವನ್ನು ಸೂಪರ್ ಪವರ್ ಮಾಡಬೇಕು

ಮೂರನೇ ದಿನದ ಧರ್ಮ ಸಂಸದ್ ಚರ್ಚಾ ಗೋಷ್ಟಿಯಲ್ಲಿ ಪ್ರಮುಖ ಘೋಷಣೆಗಳು ಹೊರ ಬಿತ್ತು. ಶಕ್ತಿಯುತ ರಾಷ್ಟ್ರದ ನಿರ್ಮಾಣ ಎಂಬ ಒಂದಂಶದ ನಿರ್ಣಯವನ್ನೂ ಘೋಷಣೆ ಮಾಡಲಾಯಿತು.ಇದರ ಜೊತೆಗೆ ಅಲ್ಪ ಸಂಖ್ಯಾತ ಬಹುಸಂಖ್ಯಾತ ಅನುದಾನದ ಗೊಂದಲ ಪರಿಹರಿಸಬೇಕು.ಭಾರತದಿಂದ ಮಾಂಸ ರಫ಼್ತಾಗುವಾಗ ಡಿಎನ್.ಎ ಮಾಡಬೇಕು. ಸಂವಿಧಾನದ ಪರಿಶೀಲನೆ ನಡೆಸಬೇಕು. ಗೋ ಹತ್ಯೆ ಸಮಾಪ್ತಿಯಾಗಬೇಕು ಎಂಬ ಆಗ್ರಹದೊಂದಿಗೆ ಮೂರನೇ ದಿನದ ಚರ್ಚಾ ಗೋಷ್ಟಿ ಸಮಾಪ್ತಿಯಾಯಿತು.

ಚರ್ಚಾ ಗೋಷ್ಟಿಯ ಬಳಿಕ ಎಂಜಿಎಂ ಕಾಲೇಜು ಮೈದಾನದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಹಮ್ಮಿಕೊಳ್ಳಲಾಗಿತ್ತು. ಉಡುಪಿಯ ಜೋಡುಕಟ್ಟೆಯಿಂದ ಹಿಂದೂ ಸಮಾಜೋತ್ಸವದ ಸ್ಥಳದ ವರೆಗೆ ಭವ್ಯ ಶೋಭಾ ಯಾತ್ರೆ ನಡೆಯಿತು. ಒಂದೂವರೆ ಲಕ್ಷಕ್ಕೂ ಅಧಿಕ ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು. ಈ ಮೂಲಕ ಹಲವು ನಿರ್ಣಯಗಳೊಂದಿಗೆ ಮೂರು ದಿನಗಳ ಧರ್ಮ ಸಂಸದ್ ಸಮಾಪನಗೊಂಡಿತು.

ಧರ್ಮ ಸಂಸದ್ ಬಳಿಕ ಎಂಜಿಎಂ ಕ್ರೀಡಾಂಗಣದಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಆಯೋಜಿಸಲಾಗಿತ್ತು. ತಂಡೋಪ ತಂಡವಾಗಿ ಜನ ಸಾಗರವೇ ಈ ಸಮಾಜೋತ್ಸವಕ್ಕೆ ನೆರೆದಿತ್ತು. ಇಷ್ಟೇ ಯಾಕೆ ಸಮಾಜೋತ್ಸವದಲ್ಲಿ ವಿಹಂಪ ಮುಖಂದರಂದು ಉಗ್ರ ಭಾಷಣ ಮಾಡಿದರು.ವಿಹಂಪದ ಕ್ಷೇತ್ರೀಯ ಕಾರ್ಯದರ್ಶಿ ಗೋಪಾಲ್ ಜಿ ಲವ್ ಜಿಹಾದ್ ನಿಲ್ಲಿಸದಿದ್ದರೆ ನಾವೇ ನಿಲ್ಲಿಸುತ್ತೇವೆ. ನಮ್ಮಲ್ಲಿ ಭಜರಂಗಿಗಳಿದ್ದಾರೆ.ನೀವು ನಮ್ಮ ಹುಡಿಗಿಯರನ್ನು ಪ್ರೇಮಿಸುವುದನ್ನು ನಿಲ್ಲಿಸದಿದ್ದರೆ ನಾವೇ ನಿಮ್ಮ ಹುಡಿಗಿಯರನ್ನು ಪ್ರೇಮಿಸುತ್ತೇವೆ. ಆಗ ನಿಮಗೆ ಮದುವೆಯಾಗಲು ಹುಡುಗಿಯರು ಇಲ್ಲದಾಗೆ ಮಾಡ್ತೇವೆ ಅಂತ ಮುಸಲ್ಮಾನರಿಗೆ ಎಚ್ಚರಿಕೆಯನ್ನು ನೀಡಿದರು.ಇನ್ನು ವಿಹಂಪದ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ಭಾಯ್ ತೊಗಾಡಿಯಾ ಮಾತನಾಡಿ ಹಿಂದೂಗಳ ಎದೆಯಲ್ಲಿ ಅಗ್ನಿ ಉರಿಯುತ್ತಿದೆ. ಅದು ಭಾರತದ ದೇಶ ದ್ರೋಹಿ ಮುಸ್ಮೀಮರನ್ನು ಸುಡದೇ ಬಿಡುವುದಿಲ್ಲ. ಮೊಘಲರು, ಇಂಗ್ಲೀಷರು ನಮ್ಮನ್ನು ಹಿಂಡಿ ಹಿಪ್ಪೆ ಮಾಡಿದರು. ಪಾಕಿಸ್ತಾನ ನಮ್ಮನ್ನು ಬದುಕಲು ಬಿಡುತ್ತಿಲ್ಲ. ಪಾಕಿಸ್ತಾನದಲ್ಲಿ ಉಗ್ರ ಹಫೀಜನ ಮೂಳೆಯೂ ಸಿಗಲ್ಲ ಆದಿನಕ್ಕಾಗಿ ನಾನು ಕಾಯುತ್ತಿದ್ದೇನೆ.ಪದ್ಮಾವತಿ ಚಿತ್ರದ ವಿವಾದದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ತೊಗಾಡಿಯಾ ಚಿತ್ರ ನಿರ್ದೇಶಕ ಬನ್ಸಾಲಿ ತಾಯಿ ಎದೆ ಹಾಲು ಕುಡಿದಿದ್ದೀಯಾ ಅಥವಾ ಮಹಮ್ಮದನ ರಕ್ತ ಕುಡಿದಿದ್ದೀಯಾ ಅಂತ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಹಿಂದೂ ಸಮಾಜೋತ್ಸವದಲ್ಲಿ ಪೇಜಾವರ ಶ್ರೀಗಳು ಸಿಎಂ ಸಿದ್ದರಾಮಯ್ಯರನ್ನು ಟೀಕೆ ಮಾಡಿದರು. ಸಿಎಂ ಬಸವಣ್ಣರ ಭಕ್ತರೆನ್ನುತ್ತಾರೆ. ಆದ್ರೆ ಬಸವಣ್ಣ ಗೋ ಮಾಂಸವನ್ನು ವಿರೋಧಿಸಿದವರು. ಆದ್ರೆ ಸಿಎಂ ಗೋ ಮಾಂಸ ಭಕ್ಷಣೆಗೆ ಸಪೋರ್ಟ್ ಮಾಡ್ತಾ ಇದ್ದಾರೆ. ಸಿದ್ದು ಹೇಗೆ ಬಸವಣ್ನರ ಭಕ್ತರಾಗುತ್ತಾರೆ ಎಂದು ಪ್ರಶ್ನಿಸಿದರು. ನನಗೆ ಹಿಂದ-ಅಹಿಂದ ಒಂದೇ ಬುದ್ದಿ ಜೀವಿಗಳ ಬಗ್ಗೆ ನನಗೆ ಕನಿಕರವಾಗುತ್ತೆ. ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ ಎಂದು ಟೀಕಿಸಿದರು.

ಒಟ್ಟಿನಲ್ಲಿ ಧರ್ಮ ಸಂಸದ್ ನಲ್ಲಿ ಯಾವ ರೀತಿ ಕೆಲ ಸಂತರ ಭಾಷಣಗಳು ವಿವಾದಕ್ಕೆ ಕಾರಣವಾದವೋ ಹಾಗೆನೇ ಸಾಮಾಜೋತ್ಸವದಲ್ಲಿ ಭಾಷಣ ವಿವಾದಕ್ಕೆ ಕಾರನವಾಗುವ ಸಾಧ್ಯತೆ ಇದೆ. ಒಟ್ಟಾರೆಯಾಗಿ ಮೂರು ದಿನಗಳ ದರ್ಮ ಸಂಸದ್ ಸಮಾಜೋತ್ಸವದ ಮೂಲಕ ತೆರೆ ಬಿತ್ತು

 

 

 

 

Comments are closed.