ಕರಾವಳಿ

ಗಂಟಲು ನೋವಿನಿಂದ ಮುಕ್ತಿ ಪಡೆಯಲು ಸುಲಭವಾದ ಮನೆಮದ್ದು

Pinterest LinkedIn Tumblr

ಗಂಟಲು ನೋವು ಕಾಣಿಸಿಕೊಳ್ಳಲು ಕಾರಣವೆಂದರೆ ವೈರಸ್ ಸೋಂಕು ಇರಬಹುದು ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕಿನಿಂದ. ಇದು ಗರ್ಭಾವಸ್ಥೆಯಲ್ಲಿ ಕೆಲವರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮತ್ತು ಕಿರಿಕಿರಿಯನ್ನು ಉಂಟುಮಾಡುವುದು ಸಹಜ ಆದರೆ ಇದರ ಬಗ್ಗೆ ಗಂಭೀರವಾಗಿ ಚಿಂತಿಸುವ ಅಗತ್ಯವಿಲ್ಲ.

ನೀವು ಮಾಡಬೇಕಾಗಿರುವುದು ಅದರ ಗುಣಲಕ್ಷಣಗಳನ್ನು ಗಮನಿಸಿ ಅದನ್ನು ಶಮನ ಮಾಡುವುದು. ಇದನ್ನು ಉಪಶಮನಗೊಳಿಸಲು ನೀವು ಮನೆಯಲ್ಲಿ ಸಿಗುವ ಪದಾರ್ಥಗಳನ್ನು ಉಪಯೋಗಿಸಿಕೊಳ್ಳಬಹುದು. ಇದರ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಗಂಟಲು ನೋವು ಗರ್ಭಧಾರಣೆಯ ಪ್ರಾರಂಭಿಕ ಲಕ್ಷಣವೇ?
ಇದು ವೈಜ್ಞಾನಿಕವಾಗಿ ಯಾವುದೇ ಪುರಾವೆ ಇಲ್ಲ, ಆದರೆ ವಿಜ್ಞಾನವೇ ಹೇಳುವಂತೆ ದೇಹದಲ್ಲಿ ಆಗುವ ಕೆಲವು ಹಾರ್ಮೋನುಗಳು ಅದರಲ್ಲೂ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೊರಾನ್ ಬದಲಾವಣೆಯು ಗರ್ಭಾವಸ್ಥೆಯ ಪ್ರಾರಂಭದಲ್ಲಿ ಗಂಟಲು ನೋವು ಜೊತೆಗೆ ಸುಸ್ತು, ವಾಂತಿಗೆ ಕಾರಣವಾಗುತ್ತದೆ.

ಗಂಟಲು ಸೋಂಕಿನ ಲಕ್ಷಣಗಳು/ ಪರಿಣಾಮಗಳು
ಗಂಟಲು ನೋವು ನಿಮಗೆ ಹೇಗೆ ತೊಂದರೆ ಕೊಡಬಹುದು?

೧.ಗಂಟಲು ಕೆಂಪಾಗುವಿಕೆ
೨.ನುಂಗಲು ಕಷ್ಟವಾಗುವುದು
೩.ಗಂಟಲು ನಿರಂತರವಾಗಿ ನೋವನ್ನು ಅನುಭವಿಸುವುದು
೪.ಜ್ವರ
೫.ಕಿವಿ ನೋವು
೬.ಗಂಟಲಿನ ಗ್ರಂಥಿಗಳಲ್ಲಿ ನೋವು
೭.ಗಂಟಲಲ್ಲಿ ಕಿರಿಕಿರಿ

ನೀವು ಎಲ್ಲಾ ಲಕ್ಷಣಗಳನ್ನು ಒಮ್ಮೆ ಅನುಭವಿಸುವುದಿಲ್ಲ ಇದರಲ್ಲಿ ಯಾವುದಾದರು ಒಂದೆರಡು ಲಕ್ಷಣಗಳು ನಿಮ್ಮನ್ನು ಕಾಡುತ್ತವೆ.

ಗರ್ಭಾವಸ್ಥೆಯಲ್ಲಿ ಗಂಟಲು ನೋವು ಬರಲು ಕಾರಣ
ಕಾರಣ ತಿಳಿದರೆ ಅದನ್ನು ಬರುವ ಮುನ್ನವೇ ತಡೆಯಬಹುದು ಮತ್ತು ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸುಲಭವಾಗುತ್ತದೆ.

೧.ಹುಳಿ ತೇಗು
೨.ಅಲರ್ಜಿ
೩.ಗಂಟಲಿನ ಸ್ನಾಯುಗಳಿಗೆ ಆಯಾಸವಾಗುವುದು(ಜೋರಾಗಿ ಮಾತನಾಡುವುದು, ನಿರಂತರವಾಗಿ ಮಾತನಾಡುವುದು, ಕಿರುಚುವುದು ಇದನ್ನು ಮಾಡುವುದರಿಂದ ಗಂಟಲ ಸ್ನಾಯುಗಳಿಗೆ ಆಯಾಸವಾಗುತ್ತದೆ.)
೪.ರಾಸಾಯನಿಕಗಳು ಮತ್ತು ಮಾಲಿನ್ಯಕಾರಕಗಳು
೫.ಫಂಗಸ್ ಸೋಂಕು
೬.ಕೆಮ್ಮು ಅಥವಾ ಶೀತದಿಂದ ಹರಡಿರುವ ಸೋಂಕು
೭.ಮೂಗಿನ ಸೈನಸ್ ನ ಉದ್ರೇಕ

ಗಂಟಲು ನೋವಿನಿಂದ ಮುಕ್ತಿ ಪಡೆಯಲು ಸಲಹೆಗಳು:
ನಿಮ್ಮ ಗರ್ಭಾವಸ್ಥೆಯಲ್ಲಿ ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೇ ಗಂಟಲು ನೋವಿನಿಂದ ಮುಕ್ತಿ ಪಡೆಯಲು ಇವುಗಳನ್ನು ಮಾಡಿ

೧.ತಣ್ಣನೆಯ ಮತ್ತು ಶೀತಲೀಕರಿಸಿದ ಜ್ಯುಸುಗಳನ್ನು ಸೇವಿಸಬೇಡಿ.
೨.ಹೆಚ್ಚು ನೀರಿನಾಂಶ ಇರುವ ಪದಾರ್ಥಗಳ ಸೇವನೆ ಮಾಡಿ. ಹೆಚ್ಚು ತಾಜಾ ಹಣ್ಣಿನ ರಸವನ್ನು ಸೇವಿಸಿ. ದೇಹದ ನೀರಿನಾಂಶವನ್ನು ಕಾಪಾಡಿಕೊಳ್ಳಿ.
೩.ಫಾಸ್ಟ್ ಫುಡ್ ಸೇವನೆಯನ್ನು ನಿಲ್ಲಿಸಿ. ಅದರಲ್ಲೂ ರಾಸಾಯನಿಕ ಬಣ್ಣ ಹಾಕಿರುವ ಮತ್ತು ಶೇಖರಿಸುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ.
೪.ನಿಂಬೆಹಣ್ಣು ಅಥವಾ ಶುಂಠಿ ಕಷಾಯ ಕುಡಿಯಿರಿ, ಇದು ಗಂಟಲಿನ ನೋವನ್ನು ಕಡಿಮೆ ಮಾಡುತ್ತದೆ.
೫.ಗಂಟಲು ನೋವಿನಿಂದ ಮೂಗು ಕಟ್ಟಿರುವುದಕ್ಕೆ, ಶಾಖದ ಹಬೆಯನ್ನು ತೆಗೆದುಕೊಳ್ಳುವುದು (ಉಸಿರೆಳೆದುಕೊಳ್ಳುವುದು) ಒಳ್ಳೆಯ ಮಾರ್ಗವಾಗಿದೆ.
೬.ಉಪ್ಪಿನ ನೀರಿನಿಂದ ದಿನಕ್ಕೆ ಕನಿಷ್ಠ ಮೂರು ಬಾರಿ ಬಾಯಿ ಮುಕ್ಕಳಿಸಿ. ಈ ನೀರಿಗೆ ನೀವು ಚಿಟಕೆ ಅರಿಶಿಣ ಪುಡಿ ಸೇರಿಸುವುದು ನೋವನ್ನು ತ್ವರಿತವಾಗಿ ಕಡಿಮೆ ಮಾಡಲು ತುಂಬಾ ಸಹಾಯಕಾರಿ ಆಗುತ್ತದೆ.
೭.ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿ.
೮.ವಿಶ್ರಾಂತಿ ಪಡೆಯಿರಿ.
೯.ಬೇರೆಯವರು ಉಪಯೋಗಿಸಿದ ಪಾತ್ರೆ, ತಟ್ಟೆ, ಲೋಟ ಮತ್ತು ಟವೆಲ್ ಗಳನ್ನು ಬಳಸಬೇಡಿ. ಅದರಲ್ಲೂ ಸೋಂಕು ಆಗಿರುವವರು ಬಳಸಿದವುಗಳನ್ನು ಉಪಯೋಗಿಸಬೇಡಿ.
೧೦.ನಿಮ್ಮ ಗಂಟಲಿನ ಅಂಗಾಗಳಿಗೆ ವಿಶ್ರಾಂತಿ ನೀಡಿ (ಹೆಚ್ಚು ಮಾತನಾಡಬೇಡಿ).
೧೧.ಪ್ರತಿ ಬಾರಿ ನೀವು ಕೆಮ್ಮಿದಾಗ ಮತ್ತು ಸೀನಿದಾಗ ನಿಮ್ಮ ಕೈಯನ್ನು ತೊಳೆದುಕೊಳ್ಳಿ. ಸೋಂಕನ್ನು ತಪ್ಪಿಸಲು ಇದು ಉತ್ತಮ ಮಾರ್ಗ.
೧೨.ಧೂಮಪಾನ ಮಾಡಬೇಡಿ ಅಥವಾ ಧೂಮಪಾನ ಮಾಡುವವರ ಹತ್ತಿರ ಸಹ ನಿಲ್ಲಬೇಡಿ. ಇದು ನಿಮ್ಮ ಸ್ಥಿತಿಯನ್ನು ಮತ್ತಷ್ಟು ಹಾಳುಮಾಡುತ್ತದೆ.

ಗಂಟಲು ನೋವನ್ನು ಶಮನ ಮಾಡಲು ಕೆಲವು ಮನೆಮದ್ದುಗಳು:
ಗಂಟಲು ನೋವನ್ನು ತಪ್ಪಿಸಲು ನಿಮ್ಮ ಅಡುಗೆ ಮನೆಯಲ್ಲಿ ಪರಿಹಾರಗಳಿವೆ.

ಜೇನು-ನಿಂಬೆಹಣ್ಣು ಚಹಾ
ಜೇನು ನೋವನ್ನು ಕಡಿಮೆ ಮಾಡುತ್ತದೆ ಮತ್ತು ನಿಂಬೆಹಣ್ಣು ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ ಮತ್ತು ಕಫ ಕಟ್ಟಿಕೊಂಡಿರುವುದನ್ನು ತೆಗೆಯುತ್ತದೆ.

ತಯಾರಿಸುವುದು ಹೇಗೆ
೧)ಒಂದು ಬಟ್ಟಲಿನಷ್ಟು ನೀರನ್ನು ಕುದಿಸಿ.
೨)ಇದಕ್ಕೆ ಸ್ವಲ್ಪ ಜೇನುತುಪ್ಪ ಮತ್ತು ನಿಂಬೆಹಣ್ಣಿನ ರಸವನ್ನು ಸೇರಿಸಿ.(ಜೇನುತುಪ್ಪವೇ ಇದಕ್ಕೆ ಸಿಹಿಯನ್ನು ನೀಡುತ್ತದೆ – ಸಕ್ಕರೆಯ ಅವಶ್ಯಕತೆ ಇಲ್ಲ.)
೨.ಶುಂಠಿ ಚಹಾ
ಇದು ಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು ಗಂಟಲಿನ ನೋವಿನ ಜೊತೆಗೆ ಊತವನ್ನು ಕಡಿಮೆ ಮಾಡುತ್ತದೆ.

ತಯಾರಿಸುವುದು
೧)ನೀರಿಗೆ ಸ್ವಲ್ಪ ಶುಂಠಿ ಚೂರುಗಳನ್ನು ಹಾಕಿ, ನೀರನ್ನು ಚೆನ್ನಾಗಿ ಕುದಿಸಿ.
೨)ಸಿಹಿಯಾಗಲು ಸ್ವಲ್ಪ ಜೇನುತುಪ್ಪವನ್ನು ಸೇರಿಸಿ, ಕುಡಿಯಿರಿ.
೩)ಇದಕ್ಕೆ ನೀವು ಪುದಿನಾ ಎಲೆಗಳನ್ನು ಅಥವಾ ರಸವನ್ನು ಸೇರಿಸಿ ಸೇವಿಸಬಹುದು.

Comments are closed.