ಕರಾವಳಿ

ಸ್ವಸ್ಥ ಹಾಗೂ ಸುಂದರ ಆರೋಗ್ಯಕ್ಕೆ ತುಳಸಿ ಎಲೆ ಸೇವಸಿ

Pinterest LinkedIn Tumblr

ಕಾರ್ತಿಕ ಮಾಸದಲ್ಲಿ ವಿಶೇಷವಾಗಿ ಪೂಜಿಸಲ್ಪಡುವ ತುಳಸಿಯಲ್ಲಿ ಹಲವಾರು ಅದ್ಬುತ ಔಷಧೀಯ ಗುಣಗಳು ಅಡಗಿವೆ. ಹಲವಾರು ರೋಗ ರುಜಿನಗಳಿಗೆ ತುಳಸಿಯ ಎಲೆ, ಬೇರು, ಬೀಜ, ಸೇರಿದಂತೆ ಸಂಪೂರ್ಣ ಗಿಡವೇ ಔಷಧಿಯುಕ್ತವಾಗಿದೆ.

* ತುಳಸಿ ಎಲೆಗಳ ಸೇವನೆಯಿಂದ ಸ್ವಸ್ಥ ಹಾಗೂ ಸುಂದರವಾದ ಮೈಕಟ್ಟನ್ನು ಹೊಂದಬಹುದು.
* ಅಜೀರ್ಣ, ಮಲಬದ್ಧತೆ, ಗ್ಯಾಸ್‌, ಹುಳಿ ತೇಗು ಇತ್ಯಾದಿಗಳಿಗೆ ತುಳಸಿ ರಾಮಬಾಣ.
* ಸೂರ್ಯೋದಯಕ್ಕೆ ಮುನ್ನ, ಅಂದರೆ ಬ್ರಾಹ್ಮೀ ಮುಹೂರ್ತದಲ್ಲಿ ಇದರ ಸೇವನೆಯಿಂದ ಹಲವು ರೋಗಗಳು ನಿವಾರಣೆಯಾಗುತ್ತವೆ.
* ತುಳಸಿ ಎಲೆಯನ್ನು ಜಗಿಯುತ್ತಿದ್ದರೆ ಬಾಯಿಯೊಳಗಿನ ದುರ್ಗಂಧ ನಿವಾರಣೆಯಾಗುತ್ತದೆ.
* ತುಳಸಿಯ ಸುವಾಸನೆಯು ಕ್ರಿಮಿ, ಕೀಟ ರೋಗಾಣುಗಳನ್ನು ದೂರವಿಡುತ್ತದೆ.
* ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿಟ್ಟರೆ ಸೂಕ್ಷ್ಮರೋಗಾಣುಗಳು ನಾಶವಾಗುತ್ತವೆ.

Comments are closed.