ರಾಷ್ಟ್ರೀಯ

ಹರ್ಯಾಣದ ಚೆಲುವೆಗೆ ವಿಶ್ವಸುಂದರಿ ಕಿರೀಟ ಸಿಕ್ಕಿದ್ದು ಹೇಗೆ?

Pinterest LinkedIn Tumblr


ನವದೆಹಲಿ: ನವದೆಹಲಿ: ಹರ್ಯಾಣದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮನೂಷಿ ಚಿಲ್ಲರ್ 2017 ರ ವಿಶ್ವಸುಂದರಿ ಸ್ಪರ್ಧೆ ಗೆದ್ದಿದ್ದಾರೆ. 17 ವರ್ಷಗಳ ನಂತರ ಭಾರತಕ್ಕೆ ಈ ಕಿರೀಟ ಒಲಿದಿದೆ.

ಇದಕ್ಕೂ ಮೊದಲು ಪ್ರಿಯಾಂಕ ಚೋಪ್ರಾ ಕೊನೆಯದಾಗಿ ಈ ಪ್ರಶಸ್ತಿ ಪಡೆದಿದ್ದರು. ಅಷ್ಟಕ್ಕೂ ಮಾನುಷಿ ಈ ಪ್ರಶಸ್ತಿ ಗೆಲ್ಲಲು ಕಾರಣವಾದ ಆ ಪ್ರಶ್ನೆ ಏನಾಗಿತ್ತು ಗೊತ್ತಾ?

ತೀರ್ಪುಗಾರರು ಆಕೆಗೆ ‘ಅತೀ ಹೆಚ್ಚು ಸಂಭಾವನೆ ಪಡೆಯಲು ಯಾರು ಹೆಚ್ಚು ಅರ್ಹರು ಮತ್ತು ಯಾಕೆ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ್ದ ಮಾನುಷಿ ‘ಅಮ್ಮ..ಎಲ್ಲರಿಗಿಂತ ಹೆಚ್ಚು ಬೇರೊಬ್ಬರಿಗಾಗಿ ಪ್ರತಿಫಲಾಪೇಕ್ಷೆಯಿಲ್ಲದೇ ದುಡಿಯುವವಳು ಅಮ್ಮ. ನನ್ನ ಪ್ರಕಾರ ಅವಳೇ ಎಲ್ಲರಿಗಿಂತ ಹೆಚ್ಚು ಸಂಭಾವನೆಗೆ ಅರ್ಹಳು’ ಎಂದಿದ್ದರು. ಮಾನುಷಿಯ ಈ ಉತ್ತರ ತೀರ್ಪುಗಾರರ ಮನ ಗೆದ್ದಿತ್ತು.

Comments are closed.