
ಮಂಗಳೂರು, ನವೆಂಬರ್.16 :ಅರಣ್ಯ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ರಮಾನಾಥ ರೈಯವರು ಕಳ್ಳಿಗೆಯಲ್ಲಿ ಸರಕಾರಿ ಜಾಗವನ್ನು ಕಬಳಿಸಿದ್ದಾರೆ. ಈ ಬಗ್ಗೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ನೀಡಲು ತೀರ್ಮಾನಿಸಿರುವುದಾಗಿ ಇತ್ತೀಚಿಗೆ ಬಿಜೆಪಿ ಸೇರ್ಪಡೆಗೊಂಡ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.
ಮಂಗಳೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ರೈ ಅವರ ಎಲ್ಲಾ ಅಕ್ರಮಗಳ ಬಗ್ಗೆ ದಾಖಲೆಗಳು ತನ್ನ ಬಳಿ ಇದೆ.”ಸಚಿವ ರೈ ಅವರ ಎಲ್ಲಾ ಅಕ್ರಮಗಳ ದಾಖಲೆಗಳನ್ನು ಲೋಕಾಯುಕ್ತ ನ್ಯಾಯಮೂರ್ತಿ ಹಾಗು ಎಸಿಬಿ ಅಧಿಕಾರಿಗಳಿಗೆ ನೀಡುವುದಾಗಿ ಹೇಳಿದರು.
ರಮಾನಾಥ್ ರೈ ಅವರ ಪತ್ನಿ ಅಕ್ರಮ ಸಕ್ರಮದ ಮೂಲಕ ಬಡವರ ಜಾಗ ಕಬಳಿಸಿದ್ದಾರೆ. ಹೆಂಡತಿಯ ಹೆಸರಿನಲ್ಲಿ 3 ಎಕರೆ 4 ಸೆಂಟ್ಸ್ ಜಾಗ ಕಬಳಿಸಲಾಗಿದೆ.ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಸರ್ವೇ ನಂ.೯೭/೧ರಲ್ಲಿರುವ ೨೮ ಎಕರೆ ಸರಕಾರಿ ಜಾಗದಲ್ಲಿ ೧೦ ಎಕರೆಯನ್ನು ರಮಾನಾಥ ರೈಯವರು ಕಬಳಿಸಿ ರಬ್ಬರ್ ಗಿಡಗಳನ್ನು ಬೆಳೆಸಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ತನಿಖೆ ನಡೆಸಬೇಕು. ಅಲ್ಲದೇ ಇಂತಹ ಅಕ್ರಮ ಎಸಗಿದ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಈ ಭೂ ಕಬಳಿಕೆ ವಿಚಾರವಾಗಿ ನ.೧೭ರಂದು ಜಿಲ್ಲೆಗೆ ಆಗಮಿಸುವ ರಾಜ್ಯ ಲೋಕಾಯುಕ್ತರಿಗೆ ದೂರು ನೀಡುತ್ತೇನೆ. ಎಸಿಬಿಗೂ ಈ ಬಗ್ಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಅಕ್ರಮ ಭೂ ಕಬಳಿಕೆ ಬಗ್ಗೆ ರಮಾನಾಥ ರೈ ವಿರುದ್ಧ ತಾನು ಮಾಡಿರುವ ಆರೋಪಕ್ಕೆ ಸಂಬಂಧಿಸಿ ಅವರು ಎಸ್ಕೇಪಿಂಗ್ ಉತ್ತರ ನೀಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಲೇವಾಡಿ ಮಾಡಿದರು.
Comments are closed.