ಕರಾವಳಿ

ನಾಡಿನ ಉದ್ಯೋಗ ಕನ್ನಡಿಗರಿಗೆ ಸಿಗುವಂತಾಗಲು ಕರವೇಯನ್ನು ಬೆಂಬಲಿಸಿ : ಯುವ ಸಮೂಹಕ್ಕೆ ಲ| ಅನಿಲ್ ದಾಸ್ ಕರೆ

Pinterest LinkedIn Tumblr

ಮಂಗಳೂರು : ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಬಡ್ಡಿ ಪಂದ್ಯಾಟ ಮೋಂಟುಗೋಳಿ ಕೇಂದ್ರ ಮೈದಾನದಲ್ಲಿ ನಡೆಯಿತು. ಸಂತೋಷ್ ಕುಮಾರ್ ರೈ ಬೋಳಿಯಾರ್ ಉಧ್ಘಾಟಿಸಿದರು. ಕರವೇ ಚಿಕ್ಕಮಗಳೂರ ಜಿಲ್ಲಾಧ್ಯಕ್ಷರಾದ ತೇಗೂರು ಜಗದೀಶ್ ಅರಸ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಕರವೇ ಜಿಲ್ಲಾಧ್ಯಕ್ಷರಾದ ಲ: ಅನಿಲ್ ದಾಸ್ ಮಾತನಾಡಿ, ನಾಡು, ನುಡಿ ವಿಷಯದಲ್ಲಿ ಕರವೇ ರಾಜೀರಹಿತ, ರಾಜಕೀಯ ರಹಿತವಾಗಿ ಹೋರಾಟ ಮಾಡಿಕೊಂಡು ಬಂದಿದೆ.ನಮ್ಮ ನಾಡಿನ ಉದ್ಯೋಗ ಕನ್ನಡಿಗರಿಗೆ ಸಿಗುವಂತಾಗಲು ಯುವ ಸಮೂಹ ಕರವೇ ಯನ್ನು ಬೆಂಬಲಿಸಿ ಕರವೇ ಸದಸ್ಯತ್ವ ಸ್ವೀಕರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಭಾರತೀಯ ಕೃಷಿಕ ಸಮಾಜದ ದ.ಕ.ಜಿಲ್ಲಾಧ್ಯಕ್ಷರಾದ ಹೈದರ್ ಪರ್ತಿಪ್ಪಾಡಿ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಅಭಿನಂಧಿಸಲಾಯಿತು.

ರಾಜ್ಯ ಆಹಾರ ಜಾಗೃತಿ ನಿಗಮ ದ ನಿರ್ದೇಶಕ ಟಿ.ಎಸ್.ಅಬ್ದುಲ್ಲಾ,  ಖ್ಯಾತ ದಂತವೈದ್ಯ ಜಿ. ಕೃಷ್ಣಭಟ್, ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿ ನಗರ ಕೈರಂಗಳ ಇದರ ಸಂಚಾಲಕ ಟಿ.ಜಿ. ರಾಜಾರಾಮ್ ಭಟ್, ಬಂಟ್ವಾಳ ತಾಲ್ಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಝೀಝ್ ಮಲಾರ್, ಜೆಡಿಎಸ್ ಮುಖಂಡರು, ಹಿರಿಯ ವಕೀಲರು ಆದ ಗಂಗಾಧರ ಉಳ್ಳಾಲ, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಪಂಚಾಯಿತಿ ಸದಸ್ಯ ನಂದರಾಮ್ ಶೆಟ್ಟಿ, ಸ್ಥಳೀಯ ನಾಯಕರಾದ ಮುನೀರ್ ಮಾಸ್ಟರ್, ಅಬ್ಬು ಕಲ್ಲರ್ಬೆ ಮತ್ತು ಕರವೇ ನಾಯಕರುಗಳಾದ ಜಿಲ್ಲಾ ವಕ್ತಾರ ಮೊಹಶಿರ್ ಅಹಮದ್ ಸಾಮಣಿಗೆ, ಮಂಗಳೂರು ತಾಲ್ಲೂಕು ಅಧ್ಯಕ್ಷ ಮಧುಸೂದನ್ ಗೌಡ, ಉಳ್ಳಾಲ ಘಟಕ ಅಧ್ಯಕ್ಷ ಫೈರೋಜ್, ಮಂಗಳೂರು ನಗರ ಅಧ್ಯಕ್ಷ ಮಹಮ್ಮದ್ ರಜಾಕ್, ಜಿಲ್ಲಾ ವಿಧ್ಯಾರ್ಥಿ ಘಟಕ ನಾಯಕರುಗಳಾದ ಮುಫೀದ್, ತೇಜಸ್, ಸ್ಥಳೀಯ ಘಟಕದ ಅಧ್ಯಕ್ಷ ಅಬೂಸಾಲಿ, ಉಪಾಧ್ಯಕ್ಷ ಹನೀಫ್ ಎರ್ಮಾಡಿ, ಕಾರ್ಯದರ್ಶಿಗಳಾದ ಅನ್ಸಾರ್, ರಂಜಿತ್, ಖ್ಯಾತ ಕ್ರೀಡಾಪಟು ಸುನಿಲ್ ಕುಮಾರ್ ಮತ್ತಿತರರು ಅಥಿತಿಗಳಾಗಿ ಭಾಗವಹಿಸಿದ್ದರು.

ರಾಜೇಶ್ ಬಂಗ ಬೀರೂರು ಸ್ವಾಗತಿಸಿದರು. ಕರವೇ ಬಂಟ್ವಾಳ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಜಲೀಲ್ ಕೊಡಕ್ಕಲ್ಲು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Comments are closed.