ಕರಾವಳಿ

ಕರಾಟೆಯಲ್ಲಿ ಚಿನ್ನ ಗೆದ್ದ ಮಂಗಳೂರು ಮೇಯರ್ – ಮುಂದಿನ ಚಿತ್ತ ಟೋಕಿಯೋದತ್ತ

Pinterest LinkedIn Tumblr

ಮಂಗಳೂರು: ಒಂಬತ್ತು ವರ್ಷಗಳ ಬಳಿಕ ಕರಾಟೆ ಕಣಕ್ಕೆ ಧುಮುಕಿದ ಮಂಗಳೂರು ಮೇಯರ್ ಕವಿತಾ ಸನಿಲ್ ಮತ್ತೆ ಎದುರಾಳಿಯನ್ನು ಸದೆಬಡಿದು ಇಲ್ಲಿ ನಡೆಯುತ್ತಿರುವ ಇಂಡಿಯನ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ 2020ರ ಟೋಕಿಯೊ ಒಲಿಂಪಿಕ್ಸ್‍ಗೆ ತಾನೂ ಅರ್ಹತೆ ಪಡೆಯುವ ವಿಶ್ವಾಸವಿದೆ ಎನ್ನುವುದನ್ನು ಸಾಬೀತುಪಡಿಸಿದರು.

ಫೈನಲ್‍ನಲ್ಲಿ ಉದಯೋನ್ಮುಖ ಕರಾಟೆ ಪಟು ನಿಶಾ ನಾಯಕ್ ವಿರುದ್ಧ 7-3 ಅಂಕಗಳಿಂದ ಸೋಲಿಸಿದರು. ಆರಂಭದಲ್ಲಿ ನಿಶಾ ತೀವ್ರ ಪೈಪೋಟಿ ನೀಡಿ 3-3 ಅಂಕ ಸಮಗೊಳಿಸಿದರೂ ಅಂತಿಮವಾಗಿ ಬೆಳ್ಳಿಗೆ ತೃಪ್ತಿಪಡಬೇಕಾಯಿತು. ದ್ವಿತೀಯಾರ್ಧದಲ್ಲಿ ಸನಿಲ್ ಅವರ ಅನುಭವ ಅವರಿಗೆ ಸುಲಭ ಮುನ್ನಡೆ ದೊರಕಿಸಿಕೊಟ್ಟಿತು. ಪೃಥ್ವಿ ಹಾಗು ಕಾವ್ಯ ಕಂಚಿನ ಪದಕ ಗೆದ್ದರು.

ಇದಕ್ಕೂ ಮುನ್ನ ಸೆಮಿಫೈನಲ್‍ನಲ್ಲಿ ಕವಿತಾ ಸನಿಲ್ ತಮ್ಮ ಎದುರಾಳಿ ಕಾವ್ಯ ಅವರನ್ನು 8-0 ಅಂಕಗಳಿಂದ ಬಗ್ಗುಬಡಿದರು. ಶಕ್ತಿಶಾಲಿ ಪಂಚ್ ಮೂಲಕ ಎದುರಾಳಿ ವಿರುದ್ಧ ಆರಂಭದಿಂದಲೇ ಪ್ರಹಾರ ನಡೆಸಿದ ಸನಿಲ್ ಎದುರಾಳಿಗೆ ಒಂದು ಅಂಕವನ್ನೂ ಬಿಟ್ಟುಕೊಡಲಿಲ್ಲ.

65 ಕೆ.ಜಿ.ಗಿಂತ ಮೇಲ್ಪಟ್ಟ ತೂಕದ ಬ್ಲ್ಯಾಕ್‍ಬೆಲ್ಟ್ ವಿಭಾಗದಲ್ಲಿ ಸ್ಪರ್ಧಿಸಿದ ಕವಿತಾ ಸನಿಲ್ ಮೂರು ಬಾರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದವರು. 1996ರಿಂದ 2008ರವರೆಗೆ ಸತತ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಇವರು, ಒಂಬತ್ತು ವರ್ಷದ ಬಳಿಕ ಕಣಕ್ಕೆ ಧುಮುಕಿದ್ದರು.

ಹುಟ್ಟೂರಿನಲ್ಲಿ ನಡೆಯುವ ಈ ಚಾಂಪಿಯನ್‍ಶಿಪ್‍ಗಾಗಿ ನಗರದ ಮೇಯರ್ ಆಗಿ ಕಾರ್ಯಭಾರಗಳ ಒತ್ತಡದ ನಡುವೆಯೂ ಸತತ ಎರಡು ತಿಂಗಳಿಂದ ಅಭ್ಯಾಸ ನಡೆಸಿದ್ದರು. ಕಟಾ ವಿಭಾಗದಲ್ಲಿ ಕವಿತಾ ಸ್ಪರ್ಧಿಸಲಿಲ್ಲ.

ಇತರ ಫಲಿತಾಂಶ :

12 ವರ್ಷ ಮೇಲ್ಪಟ್ಟ 35-40 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ಪ್ರೀತಿ-1, ಆನಿಕಾ-2, ಭುವಿ-3, ನಯನ-3.
12 ವರ್ಷ ಮೇಲ್ಪಟ್ಟ 35-40 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಪ್ರೀತಿ ಎಂ.ಎಸ್-1, ಜೀವಿತಾ ಡಿ-2, ಶಮಿತಾ ಕೆ-3, ಚಾರ್ಲಿ ಸರಸ್ವತಿ-3.
12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ರಶ್ಮಿ ರಾವ್-1, ಚೈತನ್ಯ ರಾಜೇಶ್ವರಿ-2, ಸಹನಾ ಆಚಾರ್ಯ-3, ಜ್ಯೋತ್ಸ್ನಾ ಅಚಲ್-3.
12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಜ್ಯೋತ್ಸ್ನಾ ಅಚಲ್-1, ರಶ್ಮಿ ರಾವ್-2, ಚೈತನ್ಯ ರಾಜೇಶ್ವರಿ-3, ಸಂಧ್ಯಾ ಕುಮಾರಿ-3.
12 ವರ್ಷ ಮೇಲ್ಪಟ್ಟ 50-55 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ದಿಶಾ ಜಿ.ಉಳ್ಳಾಲ್-1, ದೀಕ್ಷಾ ಎಸ್-2, ಚೈತ್ರಾ ಶೆಟ್ಟಿ-3, ಖುಷಿ-3.
12 ವರ್ಷ ಮೇಲ್ಪಟ್ಟ 50-55 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಡಿ.ದಿಯಾ-1, ರಿಶಾಲಿ ಆಳ್ವ-2, ಚೈತ್ರಾ ಶೆಟ್ಟಿ-3, ಆಶಲ್ ರಿಯಾ ಲೋಬೊ-3.
12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ವಿಶ್ರುತಾ ಎಸ್.ಕುಮಾರಿ-1, ದೇಹಿನಿ-2, ಖುಷಿ ಕುಮಾರಿ-3, ಪ್ರಣೀಶಾ ಡಿಸೋಜಾ-3.
12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಶಮಿತಾ ಆರ್.ಪೂಜಾರಿ-1, ಚೈತ್ರ ಪೂಜಾರಿ-2, ದೇಹಿನಿ-3, ವಿಶ್ಮಿತಾ ಎಸ್.ಕುಮಾರ್-3.
12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕಟಾ: ಕೆ.ಎಸ್.ವೈಷ್ಣವಿ-1, ಶ್ರಾವ್ಯ-2, ಲಾಸ್ಯ ಶೆಟ್ಟಿ-3, ಸ್ವಾತಿ ಸಿ-3.
12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಡಿ.ಮೇಘಶ್ರೀ-1, ಶ್ರಾವ್ಯ-2, ಕೆ.ಎಸ್.ವೈಷ್ಣವಿ-3, ಲಾಸ್ಯಶೆಟ್ಟಿ-3.
12 ವರ್ಷ ಮೇಲ್ಪಟ್ಟ 65 ಕೆ.ಜಿ. ಮೇಲ್ಪಟ್ಟು ಕಲರ್ ಬೆಲ್ಟ್ ಮಹಿಳೆಯರ ಕಟಾ: ಜೋಯ್‍ಸಿ ಡಿಜೋಜಾ-1, ಯಮುನಾ-2.
12 ವರ್ಷ ಮೇಲ್ಪಟ್ಟ 65 ಕೆ.ಜಿ. ಮೇಲ್ಪಟ್ಟು ಕಲರ್ ಬೆಲ್ಟ್ ಮಹಿಳೆಯರ ಕುಮಿಟೆ: ಜೋಯ್‍ಸಿ ಡಿಜೋಜಾ-1, ಯಮುನಾ-2.
12 ವರ್ಷ ಮೇಲ್ಪಟ್ಟ 40-45 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸೂರಜ್-1, ಮೋಕ್ಷಿತ್-2, ಪ್ರೀತೇಶ್-3, ಅಕ್ಷಿತ್-3.
12 ವರ್ಷ ಮೇಲ್ಪಟ್ಟ 40-45 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಅಕ್ಷತ್-1, ತಕ್ಷಿಕ್-2, ಮೋಕ್ಷಿತ್-3, ಹೃತಿಕ್-3.
12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಹೃತಿಕ್-1, ಶರತ್‍ರಾಜ್-2, ಅನೂಜ್-3, ನೀಲೇಶ್ ಎಸ್.ನಾಯಕ್.
12 ವರ್ಷ ಮೇಲ್ಪಟ್ಟ 45-50 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಹಸನ್ ಸಾಹೇಬ್-1. ನೀಲೇಶ್ ಎಸ್.ನಾಯಕ್-2, ಸಿ.ಹೃತಿಕ್-3, ಶರತ್‍ರಾಜ್-3.
12 ವರ್ಷ ಮೇಲ್ಪಟ್ಟ 50- 55 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಮಲರಾಯ್ ಪೀಟರ್-1, ಆಶಿಶ್ ಕೆ-2, ಅಭಿಷೇಕ್ ಕೆ.ಶೆಟ್ಟಿ-3, ಶರಣ್‍ರಾಜ್-3.
12 ವರ್ಷ ಮೇಲ್ಪಟ್ಟ 50- 55 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಅಭಿಷೇಕ್ ಶೆಟ್ಟಿ-1, ಶರಣ್‍ರಾಜ್-2, ಶ್ರಮಿಕ್-3, ಮಲರಾಯ್ ಪೀಟರ್-3.
12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಜೋತಿನ್ ದೇವರಾಯ್-1, ಯತೀಶ್ ಕುಮಾರ್-2, ವೈಶಾಖ್-3, ಪಿ.ಕಾರ್ತಿಕ್-3.
12 ವರ್ಷ ಮೇಲ್ಪಟ್ಟ 55-60 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಜೀವನ್ ಆರ್.ಖಾರ್ವಿ-1, ಸುಪಾಶ್ರ್ವಕಂಬ-2, ಇಸ್ಮಾಯಿಲ್ ಆಫ್ರಾನ್-3, ಕ್ರಿಸ್ಟನ್ ಪಾಲ್ ಸೋನ್ಸ್-3.
12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸನತ್ ಎಸ್ ಸಾಲಿಯಾನ್-1, ಶುಭಮ್ ಎಸ್.ಅಂಚನ್-2, ಮೊಹ್ಮದ್ ಮುಜಾಮಿಕ್-3, ಸುಜನ್ ಡಿಸೋಜಾ-3.
12 ವರ್ಷ ಮೇಲ್ಪಟ್ಟ 60-65 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ಎಂ.ಆದಿಲ್-1, ದನುಷ್ ಕುಮಾರ್-2, ವರುಣ್-3, ಸಾರ್ಥಕ್-3.
12 ವರ್ಷ ಮೇಲ್ಪಟ್ಟ 65-70 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕಟಾ: ಸಂಪತ್-1, ಜಿತೇಶ್-2, ಸುಶಾಂತ್ ಮರೋಳಿ-3, ಪ್ರತೀಕ್ ಸುವರ್ಣ-3.
12 ವರ್ಷ ಮೇಲ್ಪಟ್ಟ 65-70 ಕೆ.ಜಿ. ಕಲರ್ ಬೆಲ್ಟ್ ಪುರುಷರ ಕುಮಿಟೆ: ನಿಶಾಂತ್-1, ಸುಶಾಂತ್ ಮರೋಳಿ-2, ಎನ್.ಕಾರ್ತಿಕ್ ಆಚಾರ್ಯ-3, ಸೋನು ಎಸ್.ಹೊಬಲಾಯ-3.
12 ವರ್ಷ ಮೇಲ್ಪಟ್ಟ 70 ಕೆ.ಜಿ.ಗಿಂತ ಅಧಿಕ ಕಲರ್ ಬೆಲ್ಟ್ ಪುರುಷರ ಕಟಾ: ವಿಘ್ನೇಶ್ ರಾವ್-1, ಮೊಹ್ಮದ್ ಶಫೀರ್ ಎ.ಕೆ.-2, ಕಾರ್ತಿಕ್ ಆರ್.ಕೆ-3, ಶಶಾಂಕ್ ಎಸ್.ಶ್ರೀಯಾನ್-3.
12 ವರ್ಷ ಮೇಲ್ಪಟ್ಟ 70 ಕೆ.ಜಿ. ಮೇಲ್ಪಟ್ಟ ಕಲರ್ ಬೆಲ್ಟ್ ಪುರುಷರ ಕುಮಿಟೆ: ನಿಹಾಲ್-1,
ಅನಾರ್ ಬಿ.ಕಂದಾರೆ-2, ಕೃಷ್ಣ ಶೆಟ್ಟಿ-3, ಸಲ್ಮನ್ ಮೊಹ್ಮದ್-3.

Comments are closed.