ಕರಾವಳಿ

ಮಾದಕ ವಸ್ತು ಮಾರಾಟದ ಬೃಹತ್ ಜಾಲ ಪತ್ತೆ : ನಾಲ್ವರ ಬಂಧನ – ಐದು ಲಕ್ಷಕ್ಕೂ ಹೆಚ್ಚು ಮೌಲ್ಯದ ಸೊತ್ತು ವಶ

Pinterest LinkedIn Tumblr

ಮಂಗಳೂರು, ಅಕ್ಟೋಬರ್.27 ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳಾದ ಎಲ್.ಎಸ್.ಡಿ.(Lysergic Acid diethylamide) ಎಂ.ಡಿ.ಎಂ.ಎ. (Methylene Dioxy Meth Amphetami) ಮತ್ತು ಎಂ.ಡಿ.ಎಂ. (Methylene Dioxy Methamthetami) ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ, ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಸರಗೋಡು ಕಾಞಿಂಗಾಡ್ ರೈಲ್ವೆ ನಿಲ್ದಾಣ ಬಳಿಯ ನಿಖಿಲ್.ಕೆ.ಬಿ (24), ಕುಲಶೇಖರದ ಶ್ರವಣ ಪೂಜಾರಿ (23), ಕೇರಳ ಕಣ್ಣೂರಿನ ರೋಶನ್ ವೇಗಸ್ (22) ಮತ್ತು ಕೇರಳ ತ್ರಿಶೂರಿನ ಬಾಶಿಂ ಬಶೀರ್ (22) ಎಂದು ಗುರುತಿಸಲಾಗಿದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಎಂ.ಡಿ.ಎಂ.ಎ. ಪೌಡರ್ 9.00 ಗ್ರಾಂ, ಎಲ್.ಎಸ್.ಡಿ ಸ್ಟಾಂಪ್ -185, ಎಂ.ಡಿ.ಎಂ. ಪಿಲ್ಸ್ (ಪಿಲ್ಸ್ 25), ಎಲೆಕ್ಟ್ರಾನಿಕ್ ತೂಕದ ಯಂತ್ರ -1, ಮೊಬೈಲ್ 4, ಮೋಟಾರ್ಸೈಕಲ್ (ಯಮಹಾ) -1, ಮೋಟಾರ್ ಸೈಕಲ್(ಬುಲೆಟ್)-1, ಹುಕ್ಕ 2, ಮುಂತಾದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 5,30,500/- ಇರಬಹುದೆಂದು ಅಂದಾಜಿಸಲಾಗಿದೆ.

ಆರೋಪಿ ನಿಖಿಲ್ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ 8ನೆ ಸೆಮಿಸ್ಟರ್ ಓದಿದ್ದು, 2 ವಿಷಯಗಳಲ್ಲಿ ಫೈಲ್ ಆಗಿರುತ್ತಾನೆ. ಆರೋಪಿ ಶ್ರವಣ್ ಪೂಜಾರಿ 2015ರಲ್ಲಿ ನಗರದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಉತ್ತೀರ್ಣ ಆಗಿದ್ದಾನೆ. ಆರೋಪಿ ರೋಷನ್ ಸುರೇಶ್ , ಬಾಸಿಂ ಬಶೀರ್ ಇಬ್ಬರೂ ನಗರದ ವೈದ್ಯಕೀಯ ಕಾಲೇಜಿನಲ್ಲಿ 3ನೆ ವರ್ಷದ ದಂತ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.

1 ನೇ ಆರೋಪಿ ನಿಖಿಲ್ ಈ ಮಾದಕ ದ್ರವ್ಯವನ್ನು ಪಾರ್ಟಿಗಳಿಗೆ ಸರಬರಾಜು ಮಾಡುತ್ತಿರುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.ಈ ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸುವುದು ಬಾಕಿ ಇರುತ್ತದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

ಮಂಗಳೂರು ನಗರದ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್, ಅವರ ನಿರ್ದೇಶನದಂತೆ ಡಿಸಿಪಿ ಹನುಮಂತರಾಯ, ಡಿ.ಸಿ.ಪಿ. ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಅವರು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ. ಸುಂದರ್ ಆಚಾರ್, ಎಚ್ಸಿಗಳಾದ ಮೋಹನ್ ಕೆವಿ, ಗಿರೀಶ್ ಬೆಂಗ್ರೆ, ರವಿನಾಥ್ ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ.ಎಂ, ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್ ಕೂಟತ್ತಜೆ, ಮುಹಮ್ಮದ್ ಶರೀಫ್, ದಯಾನಂದ, ಸುಧೀರ್ ಶೆಟ್ಟಿ, ಮಹೇಶ್ ಕುಮಾರ್ ಮತ್ತು ಮುಹಮ್ಮದ್ ಇಕ್ಬಾಲ್ ಪತ್ತೆ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

Comments are closed.