ಉಡುಪಿ: ನಯವಂಚಕನೊಬ್ಬನಿಂದ ಮೋಸಕ್ಕೊಳಗಾಗಿ ಜೀವಮಾನವಿಡೀ ದುಡಿದುಗಳಿಸಿದ ಎರಡು ಲಕ್ಷ ರೂಪಾಯಿಗಳೆಲ್ಲವನ್ನೂ ಕಳೆದುಕೊಂಡಿದ ಮಂಗಳೂರಿನ ೮೦ ವರ್ಷದ ವೃದ್ಧೆ ಇದೀಗ ನ್ಯಾಯ ಭಾಗ್ಯ ದೊರೆಯಲಿದೆ. ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಎರಡು ವಾರಗಳ ಹಿಂದೆ ಪ್ರಕಟಿಸಿದ ಪ್ರಕರಣವೊಂದರಲ್ಲಿ ಮಂಗಳೂರಿನ ಜೆ.ಎಮ್.ಎಫ್.ಸಿ ನ್ಯಾಯಲಯವು ಅಪರಾಧಿ ರಾಮಪೂಜಾರಿಯನ್ನು ಆತನ ಚರಸೊತ್ತು ಸಹಿತ ಬಂಧನಕ್ಕೊಳಪಡಿಸಿ ತನ್ನ ಮುಂದೆ ಅಧೀಕ್ಷಕರಿಗೆ ಆದೇಶ ನೀಡಿದೆ.
ಅಂತೆಯೇ, ಆತನಿಂದ ವಶಕ್ಕೊಳಪಡಿಸಿದ ಚರ ಸೊತ್ತನ್ನು ಮಾರಿ ಸಂತ್ರಸ್ಥೆಗೆ 2,25,000 ರೂಪಾಯಿಗಳನ್ನು ಪಾವತಿಸಲು ನ್ಯಾಯಾಧೀಶರು ಅಜ್ಙಾಪಿಸಿದ್ದಾರೆ ಎಂದು ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ| ರವೀಂದ್ರನಾಥ ಶ್ಯಾನುಭಾಗ್ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
80ರ ಇಳಿವಯಸ್ಸಿನ ಗಿರಿಜಕ್ಕ ಅವರು ಮಕ್ಕಳಿಲ್ಲ. ಬಳೆ ಮಾರಲು ಆಕೆಗೆ ಅಂಗಡಿಯೂ ಇರಲಿಲ್ಲ, ಬೀದಿ ಬೀದಿತಿರುಗಿ ಸಂತೆ-ಜಾತ್ರೆಗಳಿಗೆ ಹೋಗಿ ಬಳೆ ಮಾರಿ ಗಳಿಸಿದ ಎರಡುಲಕ್ಷ ರೂಪಾಯಿಗಳನ್ನು ಮಂಗಳೂರಿನ ಕದ್ರಿ ಸಹಕಾರಿ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿಯಲ್ಲಿಟ್ಟು ತನ್ನ ಕೊನೆಗಾಲದಲ್ಲಿ ಉಪಯೋಗಕ್ಕೆ ಬಂದಿತು ಎಂಬ ಆಸೆಯಲ್ಲಿ ದಿನಗಳೆಯುತಿದ್ದರು.
ಅಟಕಾಯಿಸಿಕೊಂಡ ನಯವಂಚಕ!
ಎಲ್ಲಿಂದಲೋ ಬಂದ ರಾಮಪೂಜಾರಿ ಈ ವೃದ್ದೆಯ ಸ್ನೇಹಗಳಿಸಿ ಗಿರಿಜಕ್ಕ ನೀವು ನನ್ನ ತಾಯಿ ಇದ್ದಂತೆ ಕೊನೆಗಾಲದಲ್ಲಿ ನಾನೇ ನೋಡಿಕೊಳ್ಳುತಿದ್ದೇನೆ ಎಂದು ಆಶ್ವಾಸನೆ ನೀಡಿ ಆಕೆಯ ಆಜೀವ ಉಳಿತಾಯವನ್ನೇಲ್ಲ ಲಪಟಾಯಿಸಿದ, ಬಡ್ಡಿನೀಡುತ್ತೇನೆ, ಬೇಕಾದಾಗಲೆಲ್ಲ ಅಸಲನ್ನೂ ನೀಡುತ್ತೇನೆ ಎಂದು ಮಾತು ನೀಡಿ ಕೊನೆಗೆ ಪುಡಿಗಾಸನ್ನೂ ಕೊಡಲಿಲ್ಲ!
ಸಹಯಕ್ಕೆ ಬಂದ ಪ್ರತಿಷ್ಟಾನ..
ವಕೀಲರೋರ್ವರ ಸಹಾಯದಿಂದ 2014ರಲ್ಲಿ ಮಂಗಳೂರಿನ ಸಿವಿಲ್ ನ್ಯಾಯಲಯದಲ್ಲಿ ಗಿರಿಜಕ್ಕ ಹೋಡಿದ ದಾವೆ 2016ರಲ್ಲಿ ಇತ್ಯಾರ್ಥವಾಯಿತು. ಬಡ್ಡಿಸಹಿತ 2,20,00 ರೂಗಳನ್ನು ನೀಡುವಂತೇ ನ್ಯಾಯಾಧೀಶರೂ ಆದೇಶಿಸಿದರು. ತನ್ನ ಹಣ ಪಡೆಯಲು ಸುಮಾರು 10 ತಿಂಗಳ ಕಾಲ ಪರದಾಡಿದ ಗಿರಿಜಕ್ಕ ಕೊನೆಗೆ ಉಡುಪಿಯ ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದರು. ಮಧುಮೇಹ, ರಕ್ತದೊತ್ತಡದಿಂದ ಬಳಲುತಿದ್ದ ಗಿರಿಜಕ್ಕನಿಗೆ ಸಹಿಹಾಕಲೂ ಸಾಧ್ಯವಾಗುವಿದಿಲ್ಲವೆಂದು ಗಮನಿಸಿದ ಮಾನವ ಹಕ್ಕುಗಳ ಪ್ರತಿಷ್ಟಾನ ಸಂಘಟನೆಯ ವತಿಯಿಂದಲೇ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಲಾಗಿತ್ತು.
ಇದೀಗ ಮಂಗಳೂರಿನ ಉಪ ವಿಭಾಗಾದಿಕಾರಿಯವರು ಆಕೆಯ ಹಣ ತೆಗೆಸಿಕೊಡುವಂತೆ ಕೊಣಾಜೆಯ ಪೋಲಿಸ ಠಾಣೆಗೆ ಆದೇಶ ನೀಡಿ ಆರು ತಿಂಗಳು ಆಕೆಗೆ ನ್ಯಾಯ ಸಿಕ್ಕಿರಲಿಲ್ಲ. ಇದೀಗ ಅನಾರೋಗ್ಯದಲ್ಲಿರುವ ಆಕೆ ಔಷದಿಗಾದರೂ ಹಣಕೊಡಿಸಿ. ಒಂದು ವೇಳೆ ಹಣ ನನಗೆ ಸಿಗದಿದ್ದರೂ ಚಿಂತೆಯಿಲ್ಲ ಆದರೇ ನಂಬಿಸಿ ದ್ರೋಹ ಮಾಡಿದ ಆತ ಮಾತ್ರ ತಿನ್ನಬಾರದು. ದಯವಿಟ್ಟು ಅ ಹಣವನ್ನು ಅನಾಥಶ್ರಮಕ್ಕಾದರೂ ಕೊಡಿಸಿ ಎಂದು ಮೊರೆಯಿತ್ತರು.
ನ್ಯಾಯ ನಿಂದನಾ ಅರ್ಜಿ
ಈ ಪ್ರಕರಣದಲ್ಲಿ ಈ ಹಿಂದೆವಾದ ಮಂಡಿಸಿದ್ದ ಮಂಗಳೂರಿನ ವಕೀಲ ಶ್ರೀ ಪ್ರಸಾದ ಬಂಡಾರಿಯವರು ಕಳೆದವಾರ ನ್ಯಾಯನಿಂದನಾ ಅರ್ಜಿ ಸಲ್ಲಿಸಿ ಅಪರಾಧಿ ರಾಮಪೂಜಾರಿಯ ಚರಸೊತ್ತುಗಳನ್ನು ಮುಟ್ಟುಗೋಲಿ ಹಾಕಿ ಗಿರಿಜಮ್ಮನ ಹಣ ಕೊಡಿಸಬೇಕೆಂದು ವಿನಂತಿಸಿದರು. ಇದೀಗ ನ್ಯಾಯಧಿಶರು ನೀಡಿದ ಆದೇಶದ ಮೇಲೆ ಕೊಣಾಜೆ ಪೋಲೀಸರು ರಾಮಪೂಜಾರಿಯನ್ನು ಹಾಗೂ ಆತನ ಹೆಸರಿನಲ್ಲಿರುವ ಮಾಕ್ಸಿಕ್ಯಾಬ್ನ್ನು ವಶಪಡಿಸಿ ನ್ಯಾಯಲಯದಲ್ಲಿ ಹಾಜರುಪಡಿಸಿದ್ದಾರೆ.
ನ್ಯಾಯಲಯದ ಮೂಲಕ ಆತನ ಚರಸೊತ್ತನ್ನು ಮಾರಿ ಗಿರಿಜಕ್ಕನ ಹಣಪಾವತಿಸುವ ಕಾರ್ಯಚರಣೆ ನಡೆಯುತ್ತಿದೆ.