ಕರಾವಳಿ

ಟಿಪ್ಪು ಜಯಂತಿ ನಡೆದೇ ನಡೆಯುತ್ತದೆ : ಮಂಗಳೂರಿನಲ್ಲಿ ಸಿಎಮ್ ಸಿದ್ದರಾಮಯ್ಯ ಸ್ಪಷ್ಟಣೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್.22: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ. ಟಿಪ್ಪು ಜಯಂತಿ ರಾಜ್ಯ ಸರಕಾರದ ಕಾರ್ಯಕ್ರಮ. ಬಿಜೆಪಿಯವರು ಟಿಪ್ಪು ಜಯಂತಿ ವಿರೋಧಿಸುವ ಮೂಲಕ ಸುಮ್ಮನೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿಂದು ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಿದ ಅವರು ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ಶೋಭಾ ಕೂಡಾ ಅವರಿಗೆ ಸಾಥ್ ನೀಡಿದ್ದರು. ಟೊಪ್ಪಿ ಹಾಕಿ ಖಡ್ಗ ಝಳಪಿಸಿ ಅಂದು ಯಡಿಯೂರಪ್ಪ ಫೋಸ್ ನೀಡಿದ್ದರು ಎಂದು ವ್ಯಂಗ್ಯವಾಡಿದರು.

ಸಚಿವ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ, “ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ಅನಂತ್ ಕುಮಾರ್ ಹೆಗಡೆ ಹೆಸರು ಹಾಕಿಯೇ ಹಾಕುತ್ತೇವೆ. ಕಾರ್ಯಕ್ರಮಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟದ್ದು,”ಅವರಿಗೆ ಟಿಪ್ಪು ಇತಿಹಾಸ ಗೊತ್ತಿಲ್ಲ, ಮೈಸೂರಿನ ನಾಲ್ಕು ಯುದ್ಧಗಳು ಅವರಿಗೆ ಗೊತ್ತಿದೆಯೇ? ಟಿಪ್ಪು ಸತ್ತದ್ದು ಹೇಗೆ? ಮಕ್ಕಳನ್ನು ಅಡ ಇಟ್ಟದ್ದು ಯಾಕೆ? ಎಂದು ಪ್ರಶ್ನೆಗಳ ಸರಮಾಲೆ ಸುರಿದು, ಯಾರೋ ಒಬ್ಬ ವ್ಯಕ್ತಿ ಕಾರ್ಯಕ್ರಮಕ್ಕೆ ಬಂದಿಲ್ಲ ಅಂದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲ್ಲ ಎಂದರು.

 

Comments are closed.