ಕರಾವಳಿ

ಈಜು ಸ್ಪರ್ಧೆಯಲ್ಲಿ ಮೂರು ಚಿನ್ನ ಗೆದ್ದ ಬೆಂಗ್ರೆ ಆನಂದ ಅಮೀನ್ – ರಾಷ್ಟ್ರೀಯ ಕೂಟಕ್ಕೆ ಆಯ್ಕೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್: 17 ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ ಬೆಂಗ್ರೆ ಆನಂದ ಅಮೀನ್ ಅವರು ಅವರು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಾಸ್ಟರ್ಸ್ ಈಜುಕೂಟದಲ್ಲಿ ಮೂರು ಚಿನ್ನ, ಎರಡು ಬೆಳ್ಳಿ ಪದಕ ಗೆದ್ದು ರಾಷ್ಟ್ರೀಯ ಕೂಟಕ್ಕೆ ಆಯ್ಕೆಯಾಗಿದ್ದಾರೆ.

ಬೆಂಗಳೂರು ವಿಜಯನಗರ ಈಜುಕೊಳದಲ್ಲಿ ನಡೆದ 19ನೇ ರಾಜ್ಯ ಮಟ್ಟದ ಈಜುಕೂಟದಲ್ಲಿ ಅಮೀನ್ ಅವರು 50 ಮೀಟರ್ ಮತ್ತು ನೂರು ಮೀಟರ್ ಬ್ರೆಸ್ಟ್ ಸ್ಟ್ರೋಕ್ ಹಾಗೂ ಫ್ರೀಸ್ಟೈಲ್ ರಿಲೇಯಲ್ಲಿ ಚಿನ್ನ ಗೆದ್ದುಕೊಂಡಿದ್ದು, 50 ಮೀ. ಫ್ರೀಸ್ಟೈಲ್ ಮತ್ತು 50 ಮೀಟರ್ ಮಿಡ್ಲೆ ರಿಲೇ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಉತ್ತಮ ಕುಸ್ತಿ ಪಟು ಕೂಡ ಆಗಿರುವ ಆನಂದ ಅಮೀನ್ ಅವರು ಸತತವಾಗಿ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ 450ಕ್ಕೂ ಹೆಚ್ಚು ಪದಕಗಳನ್ನು ಗೆದ್ದುಕೊಂಡಿದ್ದಾರೆ. ಅವರು ಸಿಂಡಿಕೇಟ್ ಬ್ಯಾಂಕ್ ರಥಬೀದಿ ಶಾಖೆಯಲ್ಲಿ ಉದ್ಯೋಗಿಯಾಗಿದ್ದಾರೆ.

Comments are closed.