ಕರಾವಳಿ

ಸೌಜನ್ಯ ಪ್ರಕರಣ : ಮರು ತನಿಖೆ ನಡೆಸಲು ಸಿಬಿಐ ವಿಶೇಷ ನ್ಯಾಯಾಲಯ ಸೂಚನೆ ;ಶಂಕಿತ ಆರೋಪಿಗಳ ಮಂಪರು ಪರೀಕ್ಷೆಗೆ ಪೋಷಕರ ಆಗ್ರಹ

Pinterest LinkedIn Tumblr

ಮಂಗಳೂರು, ಫೆಬ್ರವರಿ.14: ಉಜಿರೆ ಕಾಲೇಜು ವಿದ್ಯಾರ್ಥಿನಿ ಧರ್ಮಸ್ಥಳ ಸಮೀಪದ ಪಾಂಗಾಳದ ಸೌಜನ್ಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಸಿಬಿಐ ವಿಫಲವಾಗಿರುವ ಹಿನ್ನೆಲೆಯಲ್ಲಿ ಇದೀಗ ಸಿಬಿಐ ವಿಶೇಷ ನ್ಯಾಯಾಲಯವು ಪ್ರಕರಣದ ಮರು ತನಿಖೆ ನಡೆಸಲು ಸೂಚಿಸಿರುವುದು ಸ್ವಾಗಾತರ್ಹ. ಈ ಹಿನ್ನೆಲೆಯಲ್ಲಿ ಶಂಕಿತ ಆರೋಪಿಗಳ ಮಂಪರು ಪರೀಕ್ಷೆ ನಡೆಸಬೇಕು ಎಂದು ಮಾಡಬೇಕೆಂದು ಸೌಜನ್ಯಾಳ ಪೋಷಕರು ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೃತ ಸೌಜನ್ಯಾಳ ತಾಯಿ ಕುಸುಮಾವತಿ ಹಾಗೂ ತಂದೆ ಚಂದಪ್ಪ ಗೌಡ ಅವರು, 2012ರ ಅಕ್ಟೋಬರ್ 9ರಂದು ಉಜಿರೆಯ ಕಾಲೇಜಿನಿಂದ ಧರ್ಮಸ್ಥಳದ ಪಾಂಗಾಳದ ತನ್ನ ಮನೆಗೆ ಬಸ್ಸಿನಲ್ಲಿ ಬಂದ ಸೌಜನ್ಯ ನೇತ್ರಾವತಿಯಲ್ಲಿ ಇಳಿದು ಪ್ರಕೃತಿ ಚಿಕಿತ್ಸಾ ಕೇಂದ್ರದವರೆಗೆ ನಡೆದುಕೊಂಡು ಬಂದಿದ್ದಳು. ಆ ಬಳಿಕ ಕಾಣೆಯಾಗಿದ್ದ ಆಕೆ ಮರುದಿನ ಶವವಾಗಿ ಪತ್ತೆಯಾಗಿದ್ದಳು. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ಸಾಕಷ್ಟು ಹೋರಾಟ ನಡೆಸಿದ್ದರೂ ಪ್ರಭಾವಶಾಲಿಗಳು ಈ ಕೊಲೆ ಕೃತ್ಯವನ್ನು ಮುಚ್ಚುಹಾಕುವ ಹುನ್ನಾರ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದ್ದರೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿದರು.

ಸಿಬಿಐಯವರು ಧರ್ಮಸ್ಥಳದ ಪ್ರಭಾವಿಗಳ ಒತ್ತಡಕ್ಕೆ ಮಣಿದು ಸೌಜನ್ಯಾ ಅತ್ಯಾಚಾರ ಆರೋಪಿಗಳನ್ನು ಪತ್ತೆಮಾಡುವ ಬದಲಾಗಿ ನೈಜ್ಯ ಆರೋಪಿಗಳನ್ನು ರಕ್ಷಿಸಿ ಕ್ಲೀನ್‌ಚಿಟ್ ನೀಡುವ ಯತ್ನ ಮಾಡಿದ್ದಾರೆ.

ಸಿಬಿಐ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸರಿಯಾಗಿ ತನಿಖೆ ಮಾಡಿರುವುದಿಲ್ಲವೆಂದು ನ್ಯಾಯಾಲಯ ಕೂಡ ಹೇಳಿರುತ್ತದೆ. ತನಿಖಾ ಕೌಶಲ್ಯತೆ / ಅಪಾರ ತನಿಖಾ ವ್ಯಾಪ್ತಿಯ ಅಧಿಕಾರ ಎಲ್ಲವನ್ನು ಬದಿಗೊತ್ತಿ ಸಿಬಿಐಯವರು ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಥವಾ ಪ್ರತಿಫಲ ಪಡೆದು ತನಿಖೆಯ ಹಾದಿ ತಪ್ಪಿಸಿರುತ್ತಾರೆ ಎಂದು ಅವರು ದೂರಿದರು.

ಸೌಜನ್ಯ ಪ್ರಕರಣದ ಶವ ಪತ್ತೆಯಾದಲ್ಲಿಂದ ಪ್ರಾರಂಭಿಸಿ ತನಿಖೆ ಮುಗಿಯುವವರೆಗೂ ಆಗಿನ ದ.ಕ್ಜ.ಜಿಲ್ಲಾ ಎಸ್ಪಿ ಅಭಿಷೇಕ್ ಗೋಯೆಲ್ ಹಾಗೂ ಎಸೈ ಯೋಗೀಶ್ ಕುಮಾರ್ ಮತ್ತು ಡಾ. ಆದಂ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಸಾಕ್ಷ್ಯಗಳನ್ನು ನಾಶಮಾಡುವ ಮೂಲಕ ಪ್ರಕರಣದ ನೈಜ್ಯ ಆರೋಪಿಗಳಿಗೆ ಸಹಕರಿಸಿದ್ದಾರೆ. ಇವರು ಈ ಎಲ್ಲಾ ಸಾಕ್ಷ್ಯ ನಾಶ ಮಾಡಲು ಒತ್ತಡ ತಂದವರು ಯಾರು ಮತ್ತು ಯಾರನ್ನು ರಕ್ಷಿಸಲು ಸಾಕ್ಷ್ಯ ನಾಶ ಮಾಡಿದ್ದಾರೆ ಎಂಬ ಬಗ್ಗೆ ಸಿಬಿಐ ತನಿಖೆ ಮಾಡಿಲ್ಲ ಎಂದು ಸೌಜನ್ಯಾಳ ತಾಯಿ ಕುಸುಮಾವತಿ ಹಾಗೂ ತಂದೆ ಚಂದಪ್ಪ ಗೌಡ ಅವರು ಆರೋಪಗಳ ಸುರಿಮಳೆಗೈದರು.

ಯಾವೂದೇ ಬೆದರಿಕೆಗೆ ಮಣಿಯದೆ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ ಅವರು, ಇದೀಗ ಸಿಬಿಐ ವಿಶೇಷ ನ್ಯಾಯಾಲಯವು ಪ್ರಕರಣದ ಮರು ತನಿಖೆ ನಡೆಸಲು ಸೂಚಿಸಿರುವುದರಿಂದ ಸೌಜನ್ಯ ಕೊಲೆ ಪ್ರಕರಣದ ಶಂಕಿತ ಆರೋಪಿಗಳ ಮಂಪರು ಪರೀಕ್ಷೆ ಮಾಡಬೇಕೆಂದು ಆಗ್ರಹಿಸಿದರು.

ಸಾಹಿತಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಅಮೃತಾ ಶೆಟ್ಟಿ ಅತ್ರಾಡಿ, ಸಾಮಾಜಿಕ ಹೋರಾಟಗಾರರಾದ ವಿಷ್ಣು ಮೂರ್ತಿ ಭಟ್, ರಾಬರ್ಟ್ ರೊಸಾರಿಯೊ, ಬೆಳ್ತಂಗಡಿಯ ಆರ್ ಟಿ ಐ ಕಾರ್ಯಕರ್ತ ವೆಂಕಪ್ಪ ಕೋಟ್ಯಾನ್ ಮೊಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

(ಸೌಜನ್ಯ – ಕಡತ ಚಿತ್ರ)

Comments are closed.