
ಮಂಗಳೂರು,ಫೆಬ್ರವರಿ.3: ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವವು ಶುಕ್ರವಾರ ನಗರದ ರಥಬೀದಿಯಲ್ಲಿ ದೇಶ ವಿದೇಶಗಳಿಂದ ಬಂದ ಭಾವುಕ ಭಗವತ್ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರಗಿತು.


ಶುಕ್ರವಾರ ಬೆಳ್ಳಿಗ್ಗೆ ಮಹಾ ಪ್ರಾರ್ಥನೆ ಬಳಿಕ ಶ್ರೀ ದೇವರಿಗೆ ಶತ ಕಲಶಾಭಿಷೇಕ , ಗಂಗಾಭಿಷೇಕ , ಕನಕಾಭಿಷೇಕ ನಂತರ ಯಜ್ಞ ಮಂಟಪದಲ್ಲಿ ಮಹಾ ಪುರಣಾಹುತಿ ನೆರವೇರಿತು . ಸ್ವರ್ಣ ಪಲ್ಲಕಿಯಲ್ಲಿ ಸರ್ವಾಲಂಕೃತ ಶ್ರೀ ವೀರ ವೆಂಕಟೇಶ ದೇವರ ಹಾಗೂ ಶ್ರೀನಿವಾಸ ದೇವರ ಬಿಂಬಗಳನಿರಿಸಿ ಭುಜ ಸೇವೆಯೊಂದಿಗೆ ರಥಾರೋಹಣ ರಾತ್ರಿ ರಥೋತ್ಸವ ನಡೆಯಿತು .
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.