ಕರಾವಳಿ

ಮೋದಿ- ಜೇಟ್ಲಿ ಬರೀ ಮಾತನಾಡ್ತಾರೆ ಹೊರತು ಕೆಲಸ ಮಾಡಲ್ಲ; ದಿನೇಶ್ ಗುಂಡೂರಾವ್

Pinterest LinkedIn Tumblr

ಉಡುಪಿ: ಮೋದಿ- ಜೇಟ್ಲಿ ಬರೀ ಮಾತನಾಡ್ತಾರೆ ಕೃತಿದಲ್ಲಿ ಏನನ್ನೂ ಮಾಡುತ್ತಿಲ್ಲ.ಬಜೆಟ್ ಬಗ್ಗೆ ಜನರಲ್ಲಿ ಭಾರೀ ದೊಡ್ಡ ನಿರೀಕ್ಷೆಯಿತ್ತು .ಬಜೆಟ್ ಗೆ ಭಾರೀ ಬಿಲ್ಡಪ್ ಸಿಕ್ಕಿತ್ತು .ಡಿಸೆಂಬರ್ ಭಾಷಣದಂತೆ 2017 ಬಜೆಟ್ ಹುಸಿಯಾಗಿದೆ ಎಂದು ಉಡುಪಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ರು.

ಆದಾಯ ತೆರಿಗೆ ಮಿತಿಯಲ್ಲಿ ಸ್ವಲ್ಪ ಸುಧಾರಣೆಯಾಗಿದೆ.ಇನ್ ಡೈರೆಕ್ಟ್ ಆದಾಯ ಮಾಡುವ ಸರ್ಕಾರ ಇದು .ನೀರಸವಾದ ಬಜೆಟ್ ಇದಾಗಿದೆ.ಉದ್ಯೋಗ ಸೃಷ್ಟಿಯಲ್ಲೂ ಬಜೆಟ್ ಫೈಲ್ ಆಗಿದೆ.ರೈತರಿಗೆ ವಿಶೇಷ ಸ್ಕೀಂ ಘೋಷಣೆಯೂ ಇಲ್ಲ.ಬಜೆಟಲ್ಲಿ ಖುಷಿಪಡುವಂತಹ ವಿಚಾರವಿಲ್ಲ.ವಿಶ್ವದಲ್ಲಿ 50 ನೇ ಸ್ಥಾನಕ್ಕೆ ಭಾರತ ತರುವುದಾಗಿ ಹೇಳಿದ್ದರು ಭಾರತ 130 ನೇ ಸ್ಥಾನದಲ್ಲಿಯೇ ಇದೆ.ಕರ್ನಾಟಕಕ್ಕೆ ವಿಶೇಷ ಘೋಷಣೆಯಿಲ್ಲ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.ರಾಜಕೀಯ ಪಕ್ಷಗಳ ದೇಣಿಗೆ ಕಡಿತ .ಈ ಆದೇಶವನ್ನು ಸ್ವಾಗತಿಸುತ್ತೇನೆ.ಇದು ಕೇಂದ್ರದ ಉತ್ತಮ ಹೆಜ್ಜೆ ಎಂದ್ರು .ಆಸ್ತಿ ಮುಟ್ಟುಗೋಲು ವಿಚಾರದಲ್ಲಿ ವಿಜಯ್ ಮಲ್ಯ ವಿದೇಶಕ್ಕೆ ಹೋಗಲು ಬಿಟ್ಟಿದ್ಯಾಕೆ ಎಂದು ಮಾಜಿ ಸಚಿವ ಗುಂಡೂರಾವ್ ಕೆಂದ್ರ ಸರ್ಕಾರವನ್ನು ಪ್ರಶ್ನಿಸಿದರು.

Comments are closed.