ಕರಾವಳಿ

ಮಂಗಳೂರು: ಅಭೂತ ಪೂರ್ವ ಮಂಗಲಗೋಯಾತ್ರೆ ಹಾಗೂ ಮಹಾಮಂಗಲ, ಮಹಾತ್ರಿವೇಣಿ ಸಂಗಮ ಸಂಪನ್ನ

Pinterest LinkedIn Tumblr

ಮಂಗಳೂರು,ಜನವರಿ. 29: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ಕೂಳೂರಿನ ಮಹಾಮಂಗಲ ಭೂಮಿಯಲ್ಲಿ ನಡೆಯುತ್ತಿರುವ ಅಭೂತ ಪೂರ್ವ ಮಂಗಲಗೋಯಾತ್ರೆ ಹಾಗೂ ಮಹಾಮಂಗಲ ಕಾರ್ಯಕ್ರಮದ ಮಹಾತ್ರಿವೇಣಿ ಸಂಗಮ (ಸಂತರು, ಗೋವು, ಗೋಭಕ್ತರು) ರವಿವಾರ ಸಂಪನ್ನಗೊಂಡಿತ್ತು.

ಈ ಮೂಲಕ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀ ಸ್ವಾಮೀಜಿಯವರ ಪರಿಕಲ್ಪನೆಯಲ್ಲಿ ನಾಡಿನ ಮಠಾಧೀಶರ ನೇತೃತ್ವದಲ್ಲಿ ಅಳಿವಿನ ಅಂಚಿನಲ್ಲಿರುವ ಭಾರತೀಯ ಪಾರಂಪರಿಕ ಗೋತಳಿಗಳ ಸಂರಕ್ಷಣೆಗೆ ಅರಂಭಗೊಂಡಿದ್ದ ಮಹಾಭಿಯಾನ “ಮಂಗಲಗೋ ಯಾತ್ರೆ’ಯು ವೈಶಿಷ್ಟ್ಯ ಪೂರ್ಣ ಮಹಾ ಮಂಗಲೋತ್ಸವಕ್ಕೆ ತೆರೆ ಬಿದ್ದಿದೆ.

ಇಂದು ನಡೆದ ಗೋಮಂಗಲ ಯಾತ್ರೆಯ ಮಹಾಮಂಗಲ ಮಹಾತ್ರಿವೇಣಿ ಸಂಗಮ ಕಾರ್ಯಕ್ರಮದಲ್ಲಿ 1,500 ಸಂತರು ಹಾಗೂ 1.5 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ.ಬಿಜೆಪಿಯ ರಾಷ್ಟ್ರೀಯ ಮುಖಂಡ ಸುಬ್ರಮಣ್ಯ ಸ್ವಾಮಿ, ಸಲಹಾ ಮಂಡಳಿಯ ಡಾ| ಕಲ್ಲಡ್ಕ ಪ್ರಭಾಕರ ಭಟ್‌, ಸ್ವಾಗತ ಸಮಿತಿ ಗೌರವಾಧ್ಯಕ್ಷ ನಿಟ್ಟೆ ವಿನಯ್‌ ಹೆಗ್ಡೆ ಮತ್ತಿತ್ತರರು ಈ ಸಂದರ್ಭ ಉಪಸ್ಥಿತರಿದ್ದರು.

ಇಂದಿನ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಮಂದಿಗೆ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಎರಡು ದಿನದ ಕಾರ್ಯಕ್ರಮದ ಸಂದರ್ಭ ಉಪಾಹಾರ ಮತ್ತು ಊಟಕ್ಕಾಗಿ 1,47,500 ಚಪಾತಿ ತಯಾರಿಸಿ ಕೂಳೂರು ಮಂಗಲ ಭೂಮಿಗೆ ಬಂದಿತ್ತು. ಇದನ್ನು ಗೋಕರ್ಣ ಮಂಡಲದಾದ್ಯಂತ ಮಹಿಳೆಯರು ಅವರವರ ಮನೆಯಲ್ಲಿ ತಯಾರಿಸಿ ಇಲ್ಲಿಗೆ ತಂದಿದ್ದರು. ಒಂದು ಮನೆಯಿಂದ ‌ಕನಿಷ್ಠ 20 ಹಾಗೂ ಗರಿಷ್ಠ 150 ಚಪಾತಿವರೆಗೂ ತಯಾರಿಸಿ ತರಲಾಗಿದೆ. ಬೆಂಗಳೂರಿನಲ್ಲಿ 105 ಮಹಿಳೆಯರು ಒಟ್ಟಿಗೆ ಕುಳಿತು 9,500 ಚಪಾತಿ ತಯಾರಿಸಿ ತಂದಿದ್ದಾರೆ.

ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸುಮಾರು 50,000 ಮಂದಿ ಇಲ್ಲಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲು ಪಡೆದಿದ್ದರು.

ಹೆಚ್ಚಿನ ವಿವರ ನಿರೀಕ್ಷಿಸಿ…

Comments are closed.