ಮಂಗಳೂರು, ಜನವರಿ.28: ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೆಲ್ಮೆಟ್ ಇಲ್ಲದೇ ಬೈಕ್‌ನಲ್ಲಿ ರಾಜಾರೋಷವಾಗಿ ಓಡಾಟ ನಡೆಸ್ತಾ ಇರೋ ಫೊಟೋಗಳು ಇದೀಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಸಚಿವರೊಬ್ಬರು ಹೆಲ್ಮೆಟ್ ಇಲ್ಲದೇ ಪ್ರಯಾಣಿಸುವುದು ಎಷ್ಟು ಸರಿ ಎಂಬ ಬಗ್ಗೆ ಚರ್ಚೆಗಳಾಗುತ್ತಿವೆ.
ಸಚಿವ ಖಾದರ್ ಅವರು ಧಾರವಾಡದಿಂದ ಬೆಳಗಾವಿಗೆ ಬರುತ್ತಿದ್ದರು. ಇಲ್ಲಿಂದ ಅವರು ವಿಮಾನದಲ್ಲ ಬೆಂಗಳೂರಿಗೆ ಹೋಗಬೇಕಿತ್ತು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೈಲಹೊಂಗಲದಲ್ಲಿ ನಡೆಯುತ್ತಿರುವ ಕೃಷಿ ಸಮ್ಮೇಳನ ಮತ್ತು ಸಂಗೊಳ್ಳಿಯಲ್ಲಿ ನಡೆಯುತ್ತಿರುವ ರಾಯಣ್ಣ ಉತ್ಸವದಲ್ಲಿ ಪಾಲ್ಗೊಳ್ಳಲು ನಗರದ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆಗ ವಿಮಾನ ನಿಲ್ದಾಣದಿಂದ ಮುಖ್ಯಮಂತ್ರಿಗಳು ಹೊರಡಬೇಕಾದರೆ ತೀವ್ರ ರೀತಿ ಟ್ರಾಫಿಕ್ ಜಾಮ್ ಆಗಿತ್ತು.
ಖಾದರ್ ಕೂಡ ಇದೇ ವಿಮಾನ ನಿಲ್ದಾಣದಿಂದ ವಿಮಾನ ಏರಬೇಕಿತ್ತು. ಈ ವೇಳೆ ಸಚಿವ ಖಾದರ್ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಾಗ ಟ್ರಾಫಿಕ್ ಸಮಸ್ಯೆಗೆ ತುತ್ತಾದರು. ಈ ವೇಳೆ ಕಾರ್‌ನಿಂದ ಇಳಿದ ಖಾದರ್ ತಾವೇ ಟ್ರಾಫಿಕ್ ಸುಗಮಗೊಳಿಸಲು ಅಣಿಯಾದರು. ಆದರೆ ಟ್ರಾಫಿಕ್ ನಿಯಂತ್ರಣಕ್ಕೆ ಬಾರದ ಇದ್ದಾಗ ಖಾದರ್ ಅಪರಿಚಿತ ಯುವಕನೊಬ್ಬನ ಬೈಕ್ ಹತ್ತಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಆದರೆ ಈ ವೇಳೆ ಅವರು ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೇ ಪ್ರಯಾಣಿಸಿದ್ದು, ಮಾತ್ರ ಸಾಮಾಜಿಕ ತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
Comments are closed.