ಕರಾವಳಿ

ಹಿಂಸಾರಹಿತ ಕಂಬಳಕ್ಕಷ್ಟೇ ನನ್ನ ಬೆಂಬಲ ಇದೆ; ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ಜಾನಪದ ಕ್ರೀಡೆಯಾದ ಕಂಬಳ ಕ್ರೀಡೆ ಹಿಂಸಾರಹಿತವಾಗಿ ನಡೆಯಬೇಕು ಎಂದು ಉಡುಪಿಯಲ್ಲಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ.

ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು, ಓಟದ ವೇಳೆ ಕೋಣ, ಎತ್ತುಗಳಿಗೆ ಹೊಡೆಯುವುದಕ್ಕೆ ನನ್ನ ವಿರೋಧ ಇದೆ. ಮನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ ಹಾಗೆಯೇ
ಮನುಷ್ಯರ ಓಟದ ಸ್ಪರ್ಧೆಯಂತೆ ಕೋಣಗಳ ಓಟ ಇರಬೇಕು. ಇದೇ ಮಾದರಿಯಲ್ಲಿಯೇ ಕಂಬಳ ನಡೆಯಬೇಕು ಎಂದ ಅವರು ಜಲ್ಲಿಕಟ್ಟು ಕ್ರೀಡೆಯಲ್ಲಿನ ಹಿಂಸೆ ಕಂಬಳಕ್ಕೆ ಹೋಲಿಸಲಾಗದು, ಹಿಂಸಾರಹಿತ ಕಂಬಳಕ್ಕಷ್ಟೇ ನನ್ನ ಬೆಂಬಲವಿದ್ದು ಕೋಣಗಳಿಗೆ ಬೆತ್ತದಿಂದ ಹೊಡೆಯುವುದಕ್ಕೆ ವಿರೋಧವಿದೆ. ಕಂಬಳ ಹೋರಾಟಗಾರರಲ್ಲಿ ಅಹಿಂಸಾತ್ಮಕ ಕಂಬಳ ನಡೆಸುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

Comments are closed.