ಕರಾವಳಿ

ಮಂಗಳೂರು ಬಿಷಪ್ ಹೌಸ್‍ಗೆ ಕೆಎಂಡಿಸಿ ಅಧ್ಯಕ್ಷ ಎಂ.ಎ. ಗಫೂರ್ ಭೇಟಿ

Pinterest LinkedIn Tumblr

ಮಂಗಳೂರು, ಜನವರಿ 18: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಅವರು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅಲೋಸಿಯಸ್ ಪಾವ್ಲ್ ಡಿಸೋಜಾ ಅವರನ್ನು ಬಿಷಪ್ ಹೌಸ್‍ನಲ್ಲಿ ಮಂಗಳವಾರ ಭೇಟಿ ಮಾಡಿದರು.

ಈ ಸಂಧರ್ಭದಲ್ಲಿ ಅಧ್ಯಕ್ಷರು ವಿವಿಧ ಯೋಜನೆಗಳ ಬಗ್ಗೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವಾಲಯದಡಿ ಬರುವ ಇತರ ಕಾರ್ಯಕ್ರಮಗಳ ಬಗ್ಗೆ ಧರ್ಮಾಧ್ಯಕ್ಷರಿಗೆ ವಿವರಣೆ ನೀಡಿದರು. ಗಫೂರ್ ಅವರಿಗೆ ಶುಭಹಾರೈಸಿದ ಬಿಷಪರು, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಂತೆ ಸಲಹೆ ನೀಡಿದರು.

ಈ ವೇಳೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮುಹಮ್ಮದ್ ಸಫ್‍ವಾನ್ ಮತ್ತಿತರರು ಅಧ್ಯಕ್ಷರ ಜತೆಗಿದ್ದರು.

Comments are closed.