ಕರಾವಳಿ

ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ ಯುವಕ ಸೆರೆ

Pinterest LinkedIn Tumblr

ಮಂಗಳೂರು ,ಜ.11: ಅಪ್ರಾಪ್ತ ವಯಸ್ಕ ಕಾಲೇಜು ವಿಧ್ಯಾರ್ಥಿನಿಯೋರ್ವಳಿಗೆ ವಾಟ್ಸ್‌ಪ್ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಬ್ಲ್ಯಾಕ್‍ಮೆಲ್ ನಡೆಸಿದ ಆರೋಪದ ಮೇಲೆ ಮೂವರ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ.

ಮೂಡುಶೆಡ್ಡೆಯ ಪುನೀತ್ ರಾಜ್ ಪೂಜಾರಿ (20)ಬಂಧಿತ ಆರೋಪಿ. ಮಂಗಳೂರಿನ ವಿಲಾಸ್ ಹಾಗೂ ಮೂಡುಶೆಡ್ಡೆಯ ಪೃಥ್ವಿ ತಲೆ ಮರೆಸಿಕೊಂಡಿದ್ದಾರೆ.

Comments are closed.