ಕರಾವಳಿ

ಮಂಗಳೂರು : ಅಪರಾಧ ಪ್ರಕರಣ ತಡೆಗಟ್ಟಲು ಜಾಗೃತಿ ವಾಹನ ಕಾರ್ಯಾಚರಣೆ

Pinterest LinkedIn Tumblr

ಮಂಗಳೂರು,ಜನವರಿ,7: ಅಪರಾಧಗಳನ್ನು ತಡೆಯುವಲ್ಲಿ ಜನತೆಯ ಪೊಲೀಸರ ಜೊತೆ ಕೈಜೋಡಿಸಬೇಕು. ಯಾರೋ ಫೋನ್ ಮಾಡಿ ಯಾವೂದೇ ಖಾತೆಯ ವಿವರ ಕೇಳಿದಾಕ್ಷಣ ಕೊಟ್ಟು ಬಿಡುವುದಲ್ಲ. ನೇರವಾಗಿ ಸಂಬಂಧಪಟ್ಟ ಕಚೇರಿಗೆ ಹೋಗಿ ಪರಿಶೀಲಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಹೇಳಿದರು.

ಅಪರಾಧ ಪ್ರಕರಣಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಜನ ಜಾಗೃತಿಗೊಳಿಸಲು ಮಂಗಳೂರು ಪೊಲೀಸ್ ಕಮಿಷನರೇಟ್, ಸಿಮೀತ ವ್ಯಾಪ್ತಿಯಲ್ಲಿ ವಿವಿಧ ಸಂಸ್ಥೆಗಳ ಪ್ರೋತ್ಸಾಹದೊಂದಿಗೆ ಆಯೋಜಿಸಲಾಗಿರುವ ಜಾಗೃತಿ ವಾಹನ ಕಾರ್ಯಾಚರಣೆಯ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಜಾಗೃತಿ ವಾಹನಕ್ಕೆ ಚಾಲನೆ ನೀಡಿದರು. ಕಾರ್ಪೋರೇಶನ್‌ ಬ್ಯಾಂಕಿನ ಡಿಜಿಎಂ ವಿಠಲ ಶೆಣೈ, ಅಧಿಕಾರಿ ಕೆ.ಎಸ್. ನೇಗಿ, ಡಿಸಿಪಿಗಳಾದ ಕೆ.ಎಂ. ಶಾಂತರಾಜು, ಡಾ.ಸಂಜೀವ ಪಾಟೀಲ ಉಪಸ್ಥಿತರಿದ್ದರು.

ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಂದು ತಿಂಗಳ ಕಾಲ ಸಂಚರಿಸುವ ಈ ವಾಹನ ಆಯ್ದ ಸ್ಥಳಗಳಲ್ಲಿ ನಿಂತು ಜನತೆಯಲ್ಲಿ ಜಾಗೃತಿ ಮೂಡಿಸಲಿದೆ. ಈ ವಾಹನದಲ್ಲಿ ದೊಡ್ಡದಾದ ಪ್ರೊಜೆಕ್ಟರ್ ಅಳವಡಿಸಲಾಗಿದ್ದು, ಪೊಲೀಸ್ ಆಯುಕ್ತರು, ಡಿಸಿಪಿ ಸೇರಿದಂತೆ ಪ್ರಮುಖ ಸಂದೇಶಗಳು ಬಿತ್ತರವಾಗಲಿದೆ. ಪ್ರತಿದಿನ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ (ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ವಿರಾಮ) ಈ ವಾಹನ ಕರ್ತವ್ಯ ನಿರ್ವಹಿಸಲಿದೆ.

ಮಹಿಳೆಯರ ಸರ ಸೆಳೆದು ಪರಾರಿಯಾಗುವುದು, ಎಟಿಎಂ ನಂಬರ್ ಕೇಳಿ ವಂಚಿಸುವುದು, ಕಿಸೆಗಳ್ಳತನ, ಗಮನ ಬೇರೆಡೆ ಸೆಳೆದೆ ಬೆಳೆ ಬಾಳುವ ವಸ್ತುಗಳನ್ನು ದೋಚುವುದು ಸೇರಿದಂತೆ ನಗರದಲ್ಲಿ ನಡೆಯುತ್ತಿರುವ ಪ್ರಮುಖ ಅಪರಾಧಗಳತ್ತ ಬೆಳಕು ಚೆಲ್ಲುವಲ್ಲಿ ಜನಜಾಗೃತರಾಗಿರುವಂತೆ ಎಚ್ಚರಿಕೆಯ ಸಂದೇಶವನ್ನು ಈ ವಾಹನ ತನ್ನ ಪ್ರೊಜೆಕ್ಟರ್ ಮೂಲಕ ನೀಡಲಿದೆ.

Comments are closed.